ಗುಜರಾತ್: ಕಾಂಗ್ರೆಸ್‌ನಲ್ಲಿ ಯುವ ಮತ್ತು ಹಳೆಯ ನಾಯಕರ ನಡುವೆ ಶೀಲತ ಸಮರ!

ಮುಂದಿನ ವರ್ಷ ಗುಜರಾತ್‌ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನವೇ ಗುಜರಾತ್ ಕಾಂಗ್ರೆಸ್‌ನ ಯುವ ನಾಯಕರು ಮತ್ತು ಹಳೆಯ ಮುಖಂಡರ ನಡುವೆ ಎದ್ದಿರುವ ಶೀಲತ ಸಮರವನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಬಗೆಹರಿಸಬೇಕಾಗಿದೆ.

ಇದಕ್ಕಾಗಿ ಶುಕ್ರವಾರ ಸಭೆ ನಡೆಯಲಿದೆ.

ಹಾರ್ದಿಕ್ ಪಟೇಲ್, ಭರತಸಿಂಹ ಸೋಲಂಕಿ, ಅರ್ಜುನ್ ಮೊದ್ವಾಡಿಯಾ ಮತ್ತು ಶಕ್ತಿಸಿನ್ಹ್ ಗೋಹಿಲ್ ಹೆಸರುಗಳು ಉನ್ನತ ಹುದ್ದೆಗಳಿಗಾಗಿನ ಪಟ್ಟಿಯಲ್ಲಿವೆ. ಉನ್ನತ ಹುದ್ದೆಗೆ ಪಟೇಲ್ ಪ್ರಬಲ ಸ್ಪರ್ಧಿಯಾಗಿದ್ದರೂ, ಹಲವಾರು ಕಾಂಗ್ರೆಸ್ ಶಾಸಕರು ಪಕ್ಷವು ಒಬ್ಬ ಅನುಭವಿ ವ್ಯಕ್ತಿಯನ್ನು ನೇಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಯುವ ನಾಯಕರಾದ ಅಮಿತ್ ಚಾವ್ಡಾ ಮತ್ತು ಪರೇಶ್ ಧನಾನಿ ಅವರನ್ನು ರಾಜ್ಯ ಮುಖ್ಯಸ್ಥರನ್ನಾಗಿ ಮತ್ತು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸುವ ಪ್ರಯೋಗವು ಪಕ್ಷದ ಭವಿಷ್ಯವನ್ನು ಸುಧಾರಿಸುವಲ್ಲಿ ವಿಫಲವಾಗಿದೆ. “ಹಾರ್ದಿಕ್‌ಗೆ ಪಕ್ಷದ ಕಾರ್ಯನಿರ್ವಹಣೆಯ ಅನುಭವವಿಲ್ಲ ಮತ್ತು ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗ, ಪಕ್ಷವು ಒಬ್ಬ ಅನುಭವಿ ನಾಯಕನನ್ನು ಪಡೆಯಬೇಕು. ಎಲ್ಲರೂ ಒಟ್ಟಾಗಿ ಜನರ ಒಲವನ್ನು ಪಕ್ಷದತ್ತ ಸೆಳೆಯುವ ಕೆಲಸ ಮಡಬೇಕು” ಎಂದು ಕೈ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಸೌಹಾರ್ದತೆಯ ಗ್ರಾಮ ಧರ್ಮದಂಗ: ಹಿಂದೂ-ಮುಸ್ಲಿಮರಿಂದ ಪ್ರತಿ ವರ್ಷ ಲಕ್ಷ್ಮಿ ಪೂಜೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights