ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ “ವಿಐಪಿ ಸಂಸ್ಕೃತಿ ಇಲ್ಲ”: ಪ್ರಧಾನಿ ಮೋದಿ ಭಾಷಣದ ಪ್ರಮುಖ 5 ಅಂಶಗಳು!

ಭಾರತವು ಒಂದು ಬಿಲಿಯನ್ (ನೂರು ಕೋಟಿ) ಡೋಸ್‌ಗಳ ವ್ಯಾಕ್ಸಿನೇಷನ್‌ ನೀಡಿದ್ದು, ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಇದು “ಹೊಸ ಭಾರತದ ಚಿತ್ರಣ”ವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತವು ಚೀನಾದ ನಂತರ ಐತಿಹಾಸಿಕ ಸಾಧನೆ ಮಾಡಿದ ಎರಡನೇ ರಾಷ್ಟ್ರವಾಗಿದೆ. ಈ ಮೂಲಕ ಭಾರತದ ಟೀಕಾಕಾರರನ್ನು ಸುಮ್ಮನಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಭಾಷಣದ ಪ್ರಮುಖ ಐದು ಅಂಶಗಳು ಇಲ್ಲಿವೆ:

  1. ಭಾರತ 100 ಕೋಟಿ ಜನರಿಗೆ ಲಸಿಕೆ ಹಾಕಿದೆ. ಅದೂ ಕೂಡ ಉಚಿತವಾಗಿ. ನಮ್ಮ ಲಸಿಕೆ ಕಾರ್ಯಕ್ರಮದಲ್ಲಿ “ವಿಐಪಿ ಸಂಸ್ಕೃತಿ” ಇಲ್ಲ. ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ.
  2. 100 ಕೋಟಿ ಲಸಿಕೆ ನೀಡಿರುವುದು ಕೇವಲ ಸಂಖ್ಯೆಯಲ್ಲ. ಇದು ಈ ದೇಶದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದು ದೇಶದ ಹೊಸ ಅಧ್ಯಾಯವಾಗದ್ದು, ಬೃಹತ್ ಗುರಿಗಳನ್ನು ಸಾಧಿಸುವುದು ಹೇಗೆ ಎಂದು ದೇಶ ತಿಳಿದಿದೆ ಎಂಬುದನ್ನು ಸಾಬೀತು ಪಡಿಸಿದೆ.
  3. ತಾಲಿ ಥಾಲಿ (ಮುಂಚೂಣಿ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಲು ಚಪ್ಪಾಳೆ ತಟ್ಟುವುದು) ವೈರಸ್ ಅನ್ನು ನಿರ್ಮೂಲನೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂದು ಜನರು ಕೇಳಿದ್ದರು. ಆದರೆ, ಇದು ಜನರ ಭಾಗವಹಿಸುವಿಕೆ ಮತ್ತು ಸಾಮರ್ಥ್ಯದ ಪ್ರತಿಬಿಂಬವಾಗಿತ್ತು. ನಮ್ಮ ಸಂಪೂರ್ಣ ಲಸಿಕೆ ಕಾರ್ಯಕ್ರಮವು ತಂತ್ರಜ್ಞಾನದ ಫಲಿತಾಂಶವಾಗಿದೆ. ಇದು ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ. ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನವು ಅದರ ಹೃದಯಭಾಗದಲ್ಲಿದೆ.
  4. ಪ್ರತಿಯೊಬ್ಬರೂ ಭಾರತವನ್ನು ಇತರ ದೇಶಗಳಿಗೆ ಹೋಲಿಸುತ್ತಿದ್ದಾರೆ. ಆದರೆ ಭಾರತದ ಆರಂಭದ ಹಂತವು ವಿಭಿನ್ನವಾಗಿತ್ತು ಎಂಬುದನ್ನು ನೆನಪಿಡಿ. ಇತರ ದೇಶಗಳು ಯಾವಾಗಲೂ ವೈದ್ಯಕೀಯ ಸೇವೆ ಮತ್ತು ಲಸಿಕೆಗಳ ಸಂಶೋಧನೆಯಲ್ಲಿ ಭಾಗವಹಿಸುತ್ತಿವೆ. ಆದರೆ, ಭಾರತವು ಅಗತ್ಯವಾದದ್ದನ್ನು ಮಾಡಲು ಸಾಧ್ಯವೇ ಎಂದು ಎಲ್ಲರೂ ಪ್ರಶ್ನಿಸಿದ್ದರು. ಇಂತಹ ಪ್ರಶ್ನೆಗಳಿಗೆ 100 ಕೋಟಿ ಡೋಸ್‌ ಲಸಿಕೆ ನೀಡಿರುವುದೇ ಉತ್ತರವಾಗಿದೆ.ಭಾರತದ ಸ್ಥಾನವು ವಿಶ್ವದಲ್ಲಿ ಹೆಚ್ಚು ಮನ್ನಣೆಯನ್ನು ಪಡೆಯುತ್ತದೆ.
  5. ಭಾರತೀಯ ಆರ್ಥಿಕತೆಯ ಬಗ್ಗೆ ತಜ್ಞರು ತುಂಬಾ ಸಕಾತ್ಮಕವಾಗಿರುತ್ತಾರೆ. ಯುವಕರಿಗೆ ಉದ್ಯೋಗವಿದೆ.ದಾಖಲೆಯ ಬಂಡವಾಳ ಹೊಂದಿರುವ ಯೂನಿಕಾರ್ನ್ ಗಳೂ ಇವೆ. ಎಲ್ಲದರಿಂದಗಿ ಆರ್ಥಿಕತೆಯು ಉತ್ತೇಜನವನ್ನು ಪಡೆಯುತ್ತದೆ ಎಂದು ಮೋದಿ ಹೇಳಿದ್ದಾರೆ

ಇದನ್ನೂ ಓದಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ; ಆದರೆ, ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights