IPL 2020: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯಗಳಿಸಿದ ಕೊಲ್ಕತ್ತಾ ನೈಟ್‌ರೈಡರ್ಸ್

ನಿರ್ನಾಯಕ ಕಾಳಗದಲ್ಲಿ ಜಯ ದಾಖಲಿಸುವ ಮೂಲಕ ಕೊಲ್ಕತ್ತಾ ನೈಟ್‌ರೈಡರ್ಸ್  ತಂಡಗಳು  ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಮುಂದಿನ ಹಂತ ತಲುಪುವ ಆಸೆ ಜೀವಂತವಿರಿಸಿಕೊಂಡಿವೆ.

ಪಂದ್ಯ ಗೆಲ್ಲಲು ಡೆಲ್ಲಿ ಕ್ಯಾಪಿಟಲ್ಸ್‌ಗೆ 195 ರನ್ ಗಳಿಸಬೇಕಾದ ಸವಾಲು ಎಸೆದ ಕೋಲ್ಕೊತಾ ತಂಡ ಎದುರಾಳಿಯ ವಿರುದ್ಧ 59 ರನ್ ಗೆಲುವು ಸಂಪಾದಿಸಿತು. ಗುರುತರ ಸವಾಲಿನ ಮುಂದೆ ಬೆದರಿದ ಡೆಲ್ಲಿ ತಂಡವು 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡ 135 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ತಮ್ಮ ನಾಲ್ಕು ಓವರುಗಳಲ್ಲಿ ಕೇವಲ 20 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ಡೆಲ್ಲಿಯ ಬೆನ್ನು ಮುರಿದರು. ವೇಗಿ ಕಮಿನ್ಸ್ ಮೂರು ವಿಕೆಟ್ ಉರುಳಿಸಿದರು. ಈ ಗೆಲುವಿನೊಂದಿಗೆ ತನ್ನ ಅಂಕಗಳಿಕೆಯನ್ನು 12ಕ್ಕೇ ಏರಿಸಿಕೊಂಡ ಕೋಲ್ಕೊತಾ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ತನ್ನ ಕೋಟಾದ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 194 ರನ್‌ ಸಂಪಾದಿಸಿತು. ಒಂದು ಹಂತದಲ್ಲಿ ಕೇವಲ 43 ರನ್ನುಗಳಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ತಂಡಕ್ಕೆ ಸುನೀಲ್ ನಾರಾಯಣ್ ಹಾಗೂ ನಿತೇಶ್ ರಾಣಾ ಆಸರೆಯಾದರು.

ನಾಲ್ಕನೇ ವಿಕೆಟ್‌ಗೆ 115 ರನ್ನುಗಳ ಭರ್ಜರಿ ಕಜೊತೆಯಾಟ ನಿಭಾಯಿಸಿದ ಈ ಜೋಡಿಯ ನೆರವಿನಿಂದ ಕೆಕೆಆರ್‍ ಭಾರೀ ಮೊತ್ತ ದಾಖಲಿಸಿತು. ಸುನೀಲ್ ನಾರಾಯಣ್ ಅವರು‌ 6 ಬೌಂಡರಿ ಮತ್ತು 4 ಸಿಕ್ಸರ್‌ ಒಳಗೊಂಡ 64 ರನ್‌ ಮಾಡಿದರೇ, ನಿತೇಶ್ ‌ ರಾಣಾ 81 ರನ್‌ ಗಳಿಸಿದರು.

ಇನ್ನೊಂದುಪಂದ್ಯದಲ್ಲಿ Kings XI ಪಂಜಾಬ ತಂಡವು 12 ರನ್ ಗಳಿಂದ sun raiser ಹೈದರಾಬಾದ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಮುನ್ನಡೆಯಿತು..

ಮೊದಲು ಬ್ಯಾಟ್ ಮಾಡಿದ Kings XI ಪಂಜಾಬ ತಂಡ ಕೇವಲ 126 ತನ್ ಕಲೆಹಾಕುವಲ್ಲಿ ಮಾತ್ರ ಯಶಸ್ವಿಯಾಉಇತು,, ಅಲ್ಪಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ ತಂಡ ನಿಗದಿತ 20 ಒವರ್ ಗಳಲ್ಲಿ 114 ತನ್ ಗಳಿಸುವಲ್ಲಿ ಮಾತ್ರ ಸಾದ್ಯವಾಯಿತು..


ಇದನ್ನೂ ಓದಿ: ಬಾಯ್ಕಾಟ್‌ ಚೀನಾ ವಿಫಲ: ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್‌ಗಳ ದಾಖಲೆಯ ಮಾರಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights