ಕೊರೊನಾ ಲಸಿಕೆ: ಭಾರತದಲ್ಲಿ ಅಂದಾಜು ಬೆಲೆ 150; ಯಾರಿಗೆ ಮೊದಲ ಆಧ್ಯತೆ ಗೊತ್ತೇ?

ಇಡೀ ಜಗತ್ತೇ ಎದಿರುನೊಡುತ್ತಿರುವ ಕೊರೊನಾ ಲಸಿಕೆ ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭದಲ್ಲಿ ಬರುವ ನಿರೀಕ್ಷೆ ಇದ್ದು ಒಂದು ಡೋಸಿಗೆ 150 ರೂ ಬೆಲೆ ನಿಗದಿಯಾಗುವ ಸಾಧ್ಯತೆ ಇದೆ.

ಪ್ರತಿಯೊಬ್ಬರಿಗೂ ಎರಡು ಡೋಸ್ ಕೊರೊನಾ ಲಸಿಕೆ ಅಗತ್ಯವಿದ್ದು, ಒಟ್ಟು ಬೆಲೆ 300 ರೂಗಳವರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ.

ಈ ಮಧ್ಯೆ ದೇಶವಾಸಿಗಳಿಗೆ ಕೊರೊನಾ ಲಸಿಕೆ ಹಾಕಲು ಕೇಂದ್ರ ಸರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 50 ಸಾವಿರ ಕೋಟಿ ರೂಗಳನ್ನು ಮೀಸಲಿಡಲಿದೆ ಎಂದು ವರದಿಗಳು ತಿಳಿಸಿವೆ.

ಕೊರೊನಾ ಲಸಿಕೆಯ ಮೂಲ ಬೆಲೆ ಎರಡು ಡಾಲರ್ ಆದರೂ ಅದರ ಸಾಗಣೆ, ಶೇಖರಣೆ ಮತ್ತು ಕಾಪಿಡುವ ಕೆಲಸದ ಒಟ್ಟು ವೆಚ್ಚವನ್ನು ಲೆಕ್ಕ ಹಾಕಿದರೆ ಒಂದು ಡೋಸಿಗೆ ಸುಮಾರು 6ರಿಂದ 7 ಡಾಲರ್‍ ತಗುಲುವ ನಿರೀಕ್ಷೆ ಇದೆ.

ಕೊರೊನಾ ಲಸಿಕೆ ಯಾರಿಗೆ ಹೇಗೆ ಮತ್ತು ಯಾವ ಆದ್ಯತೆಯ ಮೇಲೆ ಕೊಡಬೇಕು ಎಂಬುದರ ಬಗ್ಗೆ ಕೇಂದ್ರ ಸರಕಾರವು ಅಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ಎರಡು-ಮೂರು ಬಾರಿ ಸಭೆ ಸೇರಿ ಮಾತುಕತೆ ನಡೆಸಿದೆ.

ಒಂದು ಮೂಲದ ಪ್ರಕಾರ ಮೊದಲಿಗೆ ಕೊರೊನಾ ವಾರಿಯರ್ಸ್‌ಗಳಿಗೆ, ನಂತರ ಗಣ್ಯರಿಗೆ ಹಾಗೂ ಕೊನೆಯಲ್ಲಿ ಸಾರ್ವಜನಿಕರಿಗೆ ಇದು ಬಳಕೆ ಲಭ್ಯವಾಗಬಹುದಾಗಿದೆ.

ಇನ್ನು ಕೊರೊನಾ ಲಸಿಕೆ ತಯಾರಾಗುವ ಮುನ್ನವೇ ಬಿಜೆಪಿಯು ಇದನ್ನು ಬಿಹಾರದಲ್ಲಿ ಚುನಾವಣಾ ಅಸ್ತ್ರವನ್ನಾಗಿ ಪರಿವರ್ತನೆ ಮಾಡಿಕೊಂಡಿದೆ.

ಬಿಹಾರದ ಜನ ತನಗೆ ಮತ ನೀಡಿದರೇ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ಹಾಕುವುದಾಗಿ ಬಿಜೆಪಿ ಅಲ್ಲಿನ ಮತದಾರರಿಗೆ ಆಶ್ವಾಸನೆ ನೀಡಿದೆ.

ಬಿಜೆಪಿಯ ಈ ಚುನಾವಣಾ ಗಿಮಿಕ್ಕಿನ ಬೆನ್ನ ಹಿಂದೆಯೇ ತಮಿಳುನಾಡು ಸರಕಾರ (ಅಲ್ಲಿಯೂ ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ಇದೆ) ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಿಸುವ ಘೋಷಣೆ ಮಾಡಿದೆ.

ಇಡೀ ದೇಶದಕ್ಕೇ ಲಸಿಕೆ ಹಾಕಿಸಲು ಸುಮಾರು 80 ಸಾವಿರ ಕೋಟಿ ರೂಗಳ ಅಗತ್ಯವಿದೆ ಎಂದು ಸಿರಂ ಸಂಸ್ಥೆಯ ಮುಖ್ಯಸ್ಥರು ಈಗ್ಗೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.


ಇದನ್ನೂ ಓದಿ: ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ: ಕ್ಲಿನಿಕಲ್‌ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂಸೇವಕ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights