ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ: ಕ್ಲಿನಿಕಲ್‌ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂಸೇವಕ ಸಾವು!

ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಹಲವಾರು ಕೊರೊನಾ ವೈರಸ್‌ ಪತ್ತೆ ಹಚ್ಚಿನ ವೈದ್ಯ ಸೇರಿದಂತೆ ಹಲವಾರು ಕೊರೊನಾ ವಾರಿಯರ್ಸ್‌ಗಳೂ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾಗೆ ಲಸಿಕೆ ಕಂಡುಹಿಡಿಯಲು ಬ್ರೆಜಿಲ್‌, ರಷ್ಯಾ, ಚೀನಾ, ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಮುಂದಾಗಿವೆ. ಬ್ರೆಜಿಲ್‌ನ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯಗಳ ಕೋವಿಡ್‌ ಲಸಿಕೆ ಅಭಿವೃದ್ಧಿ ಪಡೆಸುವಲ್ಲಿ ಮುಂದಾಗಿದ್ದು, ಕಳೆದೆರೆಡು ತಿಂಗಳುಗಳ ಹಿಂದೆ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲು ಘೋಷಿಸಿತ್ತು.

ಆದರೆ, ಅಸ್ಟ್ರಾಜೆನೆಕಾದ ಕೋವಿಡ್‌ ಲಸಿಕೆಯ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂಸೇವಕರೊಬ್ಬರು ಸಾವನ್ನಪ್ಪಿದ್ದು, ಕ್ಲಿನಿಕಲ್‌ ಪ್ರಯೋಗ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ಪ್ರಯೋಗದಲ್ಲಿ ಸ್ವಯಂಸೇವಕನ ಸಾವಿನ ನಂತರವೂ ಲಸಿಕೆಯ ಪರೀಕ್ಷೆ ಮುಂದುವರಿಯುತ್ತದೆ. ಪ್ರಯೋಗಗಳಲ್ಲಿ ಭಾಗಿಯಾಗಿರುವವರ ವೈದ್ಯಕೀಯ ಗೌಪ್ಯತೆಯನ್ನು ಉಲ್ಲೇಖಿಸಿ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದೆ.

ಬ್ರೆಜಿಲ್​ನಲ್ಲಿ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಸಂಘಟಿಸಲು ಸಹಾಯ ಮಾಡುತ್ತಿರುವ ಫೆಡರಲ್ ಯೂನಿವರ್ಸಿಟಿ ಆಫ್ ಸಾವೊ ಪಾಲೋ, ಪ್ರಯೋಗದಲ್ಲಿ ಮೃತಪಟ್ಟ ಸ್ವಯಂಸೇವಕ ಬ್ರೆಜಿಲ್ ದೇಶದ ವ್ಯಕ್ತಿ. ಆದರೆ, ಆತ ಬ್ರೆಜಿಲ್ ದೇಶದಲ್ಲಿ ಎಲ್ಲಿ ವಾಸಿಸುತ್ತಿದ್ದಾನೆಂದು ಹೇಳಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಹೇಳಿದೆ.

ಈ ಪ್ರಕರಣದಿಂದಾಗಿ ಷೇರುಪೇಟೆಯಲ್ಲಿ ಅಸ್ಟ್ರಾಜೆನೆಕಾ ಷೇರುಗಳು ನಕಾರಾತ್ಮಕವಾಗಿ ಮಾರ್ಪಟ್ಟವು ಮತ್ತು ಶೇ.1.7 ರಷ್ಟು ಕುಸಿದಿವೆ ಎಂದು ವರದಿಯಾಗಿದೆ.

ಕೊರೊನಾ ಸೋಂಕಿಗೆ ತುತ್ತಾಗಿರುವ ದೇಶಗಳಲ್ಲಿ ಅಮೆರಿಕಾ ಮೊದಲನೆ ಸ್ಥಾನದಲ್ಲಿದೆ. ಭಾರತವು ಎರಡನೇ ಸ್ಥಾನದಲ್ಲಿದ್ದು, 77,06,946 ಜನರು ಭಾರತದಲ್ಲಿ ಸೋಂಕಿಗೆ ಒಳಪಟ್ಟಿದ್ದಾರೆ. ಅಲ್ಲದೆ, ಫೆಬ್ರವರಿ ವೇಳೆಗೆ ಭಾರತದ ಶೇ.50 ರಷ್ಟು ಜನರಿಗೆ ಈ ಸೋಂಕು ತಗುಲಲಿದೆ ಎಂದು ಕೇಂದ್ರ ಸರ್ಕಾರದ ಸಮಿತಿ ಹೇಳಿದೆ. ಬ್ರಜಿಲ್‌ ಮೂರನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಕೊರೊನಾ ಲಸಿಕೆ ಸಂಶೋಧಿಸಿದ ಅಸ್ಟ್ರಾಜೆನೆಕಾ; ಪ್ರಯೋಗ ಯಶಸ್ವಿಯಾದರೆ ಕೊರೊನಾಗೆ ಮದ್ದು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights