ರಾವಣನನ್ನು ಸುಡುವ ಭಾರತದಲ್ಲಿ ರಾವಣ ದೈವವೆಂದು ಪೂಜಿಸುತ್ತಿದೆ ಉತ್ತರ ಭಾರತದ ಈ ಹಳ್ಳಿ!
ಮಹಿಷಾಸುರನನ್ನು ವಧಿಸಿದ ವಿಜಯಗಳಿಸಿದ ದಿವಸವೆಂದು ಮೈಸೂರು ಪ್ರಾಂತ್ಯದಲ್ಲಿ ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರ ಜೊತೆಗೆ ಜಂಬೂಸವಾರಿಯೂ ನಡೆಯುತ್ತಿದೆ. ಇನ್ನು ದೇಶದ ವಿವಿಧ ಭಾಗಗಳಲ್ಲಿ ರಾವಣನ ಪ್ರತಿಮೆಯನ್ನು ಮಾಡಿ ಅದನ್ನು ಸಂಭ್ರಮಿಸಲಾಗುತ್ತಿದೆ. ಆದರೆ, ಭಾರತದ ಒಂದು ಹಳ್ಳಿಯಲ್ಲಿ ಮಾತ್ರ ವಿಜಯದಶಮಿಯಂದು ರಾವಣನನ್ನು ಪೂಜಿಸಲಾಗುತ್ತಿದೆ.
ಮಹಿಷಾಸುರ-ರಾವಣ ಎಂದರೆ ದುಷ್ಟ, ರಾಕ್ಷಸ ಎಂಬಿತ್ಯಾದಿಗಳಿಂದ ಕರೆಯಲಾಗುತ್ತದೆ. ಸೀತೆಯನ್ನು ಅಪಹರಿಸಿದ ಕಪಟಿ ರಾವಣ ಎಂದು ಆತನ ಪ್ರತಿಕೃತಿಗಳನ್ನು ಸುಟ್ಟು ಹಬ್ಬ ಆಚರಿಸಲಾಗುತ್ತಿದೆ.
ಆದರೆ, ಕಳೆದ ತಿಂಗಳು ಅಯೊಧ್ಯೆಯಲ್ಲಿ ರಾಮಮಂದಿರಕ್ಕೆ ಅಡಿಗಲ್ಲು ಇಟ್ಟ ದಿನದಂದು ತಮಿಳುನಾಡಿನ ಜನರು ತಮಿಳರ ರಾಜ ರಾವಣ, ರಾವಣ ನಮ್ಮ ಮೂಲ ನಿವಾಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಮಾಡಿದ್ದರು. ಇದೆಲ್ಲವೂ ಮೀರಿ ಉತ್ತರ ಭಾರತದ ಒಂದು ಹಳ್ಳಿ ರಾವಣನನ್ನು ಪೂಜಿಸುತ್ತಿದೆ.
ಇದನ್ನೂ ಓದಿ: ಮೋದಿಗೆ ಕನ್ನಡಿಗರು ಇಷ್ಟವಿಲ್ಲವಾ ಅಥವಾ ಯಡಿಯೂರಪ್ಪ ಇಷ್ಟವಿಲ್ಲವಾ? ಪ್ರಿಯಾಂಕ್ ಖರ್ಗೆ
ರಾವಣ ಒಬ್ಬ ವಿದ್ವಾಂಸ, ಶಿವಭಕ್ತ, ಬ್ರಾಹ್ಮಣನಾಗಿದ್ದ ಆತ ತನ್ನ ಕಠೋರ ತಪ್ಪಿಸ್ಸಿನಿಂದ ಶಿವನನ್ನೇ ಒಲಿಸಿಕೊಂಡಿವನಾಗಿದ್ದ. ಭಾರತದ ಉದ್ದಗಲಗಳಲ್ಲಿಯೂ ರಾವಣ ಚಲಿಸಿದ ಕುರುಹುಗಳಿವೆ. ತನ್ನ ಅಸೀಮ ಬಲದಿಂದ ರಾವಣ ಕೈಲಾಸ ಪರ್ವತವನ್ನೂ ಅಲುಗಾಡಿಸಿದ್ದ, ಶಿವನಿಂದಲೇ ಶಿವಲಿಂಗವನ್ನು ಪಡೆದವನಾಗಿದ್ದ ಎಂದು ಪೌರಾಣಿಕ ಕತೆಗಳಲ್ಲಿ ಹೇಳಲಾಗುತ್ತದೆ. ಆತನ ಒಳ್ಳೆಯ ಕಾರ್ಯಗಳು ನಮಗೆ ಆದರ್ಶವಾಗಿವೆ ಎಂದು ರಾವಣನನ್ನು ಪೂಜಿಸುತ್ತಿರುವ ಮಹಾರಾಷ್ಟ್ರದ ಅಕೋಲಾ ಎಂಬ ಜಿಲ್ಲೆಯಲ್ಲಿ ಸಂಗೋಲಾ ಗ್ರಾಮಸ್ಥರು ಹೇಳುತ್ತಾರೆ.
ಸಂಗೋಲಾ ಗ್ರಾಮದಲ್ಲಿ ಗ್ರಾಮದಲ್ಲಿ ರಾವಣನ ಬೃಹತ್ ಪ್ರತಿಮೆಯಿದ್ದು, ಪ್ರತಿಮೆಯು 10 ತಲೆ ಹಾಗೂ 20 ಕೈಗಳನ್ನು ಹೊಂದಿದೆ.
ಕಳೆದ 200 ವರ್ಷಗಳಿಂದಲೂ ಈ ಗ್ರಾಮದಲ್ಲಿ ರಾವಣನನ್ನು ಪೂಜಿಸಲಾಗುತ್ತಿದೆ. ರಾವಣ ರಾಜನ ಬುದ್ಧಿವಂತಿಗೆ ಹಾಗೂ ಆತನಲ್ಲಿದ್ದ ತಪಸ್ವಿ ಗುಣಗಳಿಗಾಗಿ ಪೂಜಿಸುತ್ತಾರೆ. ಹಳ್ಳಿಯಲ್ಲಿರುವ ಸಂತೋಷ, ಶಾಂತಿ ಹಾಗೂ ಸಂತೃಪ್ತಿಗೆ ಲಂಕಾ ರಾಜನೇ ಕಾರಣ ಗ್ರಾಮದ ಅರ್ಚಕರೊಬ್ಬರು ಹೇಳಿದ್ದಾರೆ.
ರಾಜಕೀಯ ಕಾರಣಗಳಿಂದಾಗಿ ರಾವಣನ ಸೀತೆಯನ್ನು ಅಪಹರಣ ಮಾಡಿದ್ದ. ಆದರೆ, ಆಕೆಯ ಪಾವಿತ್ರ್ಯತೆಯನ್ನು ಕಾಪಾಡಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎನ್ಕೌಂಟರ್‌ನಲ್ಲಿ ಉತ್ತರ ಪ್ರದೇಶ ಟಾಪ್; ಯೋಗಿ ಆಡಳಿತದ 4 ವರ್ಷದಲ್ಲಿ 125 ಎನ್ಕೌಂಟರ್
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಮುಖಭಂಗ: ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಭಾರತ 151ನೇ ಸ್ಥಾನಕ್ಕೆ ಕುಸಿತ!