ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಅದಾನಿ’ ಟ್ಯಾಗ್ ತೆರವು!

ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ನಿರಂತರ ಪ್ರತಿಭಟನೆಗಳ ನಂತರ, ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ನಾಮ ಫಲಕಗಳಲ್ಲಿದ್ದ ‘ಅದಾನಿ ವಿಮಾನ ನಿಲ್ದಾಣ’ ಎಂಬ ಟ್ಯಾಗ್ ಅನ್ನು ತೆಗೆದುಹಾಕಲಾಗಿದೆ.

ದೇಶವ ವಿವಿಧ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ಸ್‌ ವಹಿಸಿಕೊಂಡಿದ್ದು, ಇದಾದ ನಂತರ ಮಂಗಳೂರು ಏರ್‌ಪೋರ್ಟ್‌ನ ನಾಮಫಲಕಗಳನ್ನು ಹೊಸದಾಗಿ ಹಾಕಲಾಗಿತ್ತು. ಅದರಲ್ಲಿ ಅದಾನಿ ವಿಮಾನ ನಿಲ್ದಾಣ ಎಂದು ಬರೆಯಲಾಗಿತ್ತು. ಇದೀಗ ಪ್ರತಿಭಟನೆಗಳ ನಂತರ ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ‘ಅದಾನಿ ಕಂಪನಿ’ಯ ಬೋರ್ಡ್‌ಗಳನ್ನು ದ್ವಂಸಗೊಳಿಸಿದ ಶಿವಸೇನಾ!

ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಪ್ಪಂದದ ಪ್ರಕಾರ, ವಿಮಾನನಿಲ್ದಾಣದ ಹೆಸರನ್ನು ಬದಲಾಯಿಸಲು ಯಾವುದೇ ಅವಕಾಶವಿರಲಿಲ್ಲ. ಇದನ್ನು ಆರ್‌ಟಿಐ ಮೂಲಕ ಬಹಿರಂಗಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾಮಫಲಕಗಳಿಗೆ ‘ಅದಾನಿ’ ಟ್ಯಾಗ್ ಹಾಕಿರುವುದನ್ನು ಪ್ರಶ್ನಿಸಿ ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಮತ್ತು ಎಂಐಎ ನಿರ್ದೇಶಕರಿಗೆ ಕಾನೂನು ನೋಟಿಸ್ ನೀಡಲಾಗಿದೆ.

ಈ ನಿಟ್ಟಿನಲ್ಲಿ ನಡೆದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಶುಕ್ರವಾರ ಮೂಲ ನಾಮ ಫಲಕವನ್ನು ಮರುಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್ ಸಿಎಂ ವಿಜಯ್‌ ರೂಪಾನಿ ರಾಜೀನಾಮೆ; ಬಿಜೆಪಿ ಬಿಕ್ಕಟ್ಟಿನಲ್ಲಿ ಮತ್ತೊಬ್ಬ ಸಿಎಂ ಬದಲಾವಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.