ಮುಂಬೈ ಏರ್‌ಪೋರ್ಟ್‌ನಲ್ಲಿ ‘ಅದಾನಿ ಕಂಪನಿ’ಯ ಬೋರ್ಡ್‌ಗಳನ್ನು ದ್ವಂಸಗೊಳಿಸಿದ ಶಿವಸೇನಾ!

ಕೇಂದ್ರ ಸರ್ಕಾರವು ಸರ್ಕಾರಿ ಏರ್‌ಪೋರ್ಟ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ವಹಿಸಿದೆ. ಹೀಗಾಗಿ ಏರ್‌ಪೋರ್ಟ್‌ ಎದುರು ಹೊಸದಾಗಿ ಹಾಕಿದ್ದ ‘ಅದಾನಿ ಏರ್‌ಪೋರ್ಟ್’ ಎಂಬ ಸೈನ್‌ಬೋರ್ಡ್‌ಗಳನ್ನು ಶಿವಸೇನೆ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.

ನಿರ್ವಹಣೆಯನ್ನು ಪಡೆದ ಮಾತ್ರಕ್ಕೆ ಏರ್‌ಪೋರ್ಟ್‌ನ ಹೆಸರನ್ನೇಕೆ ಬದಲಿಸಬೇಕು. ವಿಮಾನ ನಿಲ್ದಾಣದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದಿರುವಾಗ ಅದನ್ನು ‘ಅದಾನಿ ಏರ್‌ಪೋರ್ಟ್’ ಎಂದು ಬದಲಿಸಬಾರದು. ಇದು ಶಿವಾಜಿಗೆ ಮಾಡುವ ಅವಮಾನ ಎಂದು ಶಿವಸೇನೆ ಕಾರ್ಯಕರ್ತರು ವಾದಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್ ನಿರ್ವಹಣೆ‌ ಅದಾನಿಗೆ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ!

ಈ ಕುರಿತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಪ್ರತಿಕ್ರಿಯಿಸಿದ್ದು, “ಮುಂಬೈ ವಿಮಾನ ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಇಡಲಾಗಿದೆ. ಅದಾನಿ ಸಮೂಹವು ವಿಮಾನ ನಿಲ್ದಾಣದ ನಿರ್ವಹಣೆಯ ನಿಯಂತ್ರಣವನ್ನು ವಹಿಸಿಕೊಂಡಿತು. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಮುಂದೆ ‘ಅದಾನಿ ಏರ್‌ಪೋರ್ಟ್ ಎಂಬ ಫಲಕಗಳನ್ನು ಹಾಕಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದಿದೆ” ಎಂದಿದ್ದಾರೆ.

https://twitter.com/Ranjeet24728001/status/1422243148802060290?s=20

ವಿಮಾನ ನಿಲ್ದಾಣದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ.’ ಎಂಬುದಾಗಿದೆ. ಆದರೆ ಅವರು ‘ಅದಾನಿ ವಿಮಾನ ನಿಲ್ದಾಣ’ ಎಂದು ಬರೆದಿದ್ದಾರೆ. ನೀವು ಅದನ್ನು ಖರೀದಿಸಿದ್ದೀರಾ? ಶಿವಾಜಿ ಮಹಾರಾಜರು ದೇಶದ ಹೆಮ್ಮೆ ಎಂದು ಶಿವಸೇನೆಯ ಶಾಸಕ ಅರವಿಂದ್ ಸಾವಂತ್ ತಿಳಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಪರ-ವಿರೋಧದ ಚರ್ಚೆ ಆರಂಭಗೊಂಡಿದೆ. ಕೆಲವರು ಶಿವಸೇನೆ ಪರವಾಗಿಯೂ ಮತ್ತೆ ಕೆಲವರು ಅದಾನಿ ಏರ್‌ಪೋರ್ಟ್ ಪರವಾಗಿಯೂ ವಾದಿಸುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ ನಿರ್ವಹಣೆ ಅದಾನಿಗೆ; ಕೇಂದ್ರದ ನಡೆಗೆ ಕೇಂದ್ರ ಇಲಾಖೆಗಳೇ ಆಕ್ಷೇಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights