ಅಭಿಷೇಕ್ ಬ್ಯಾನರ್ಜಿ ಕಾರಿನ ಮೇಲೆ ದಾಳಿ : ಬಿಜೆಪಿ ಕಾರ್ಯಕರ್ತರಿಗೆ ಟಿಎಂಸಿ ನಾಯಕ ಎಚ್ಚರಿಕೆ!
ಅಭಿಷೇಕ್ ಬ್ಯಾನರ್ಜಿ ಕಾರಿನ ಮೇಲೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರಿಗೆ ಟಿಎಂಸಿ ನಾಯಕ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಅಗರ್ತಲಾದ ಗೋಮತಿ ಜಿಲ್ಲೆಯ ತ್ರಿಪುರಸುಂದರಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅವರ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ವಿಡಿಯೋದಲ್ಲಿ, ಬಿಜೆಪಿ ಧ್ವಜಗಳನ್ನು ಹೊತ್ತ ಕೆಲವರು ಅಭಿಷೇಕ್ ಬ್ಯಾನರ್ಜಿಯ ಬೆಂಗಾವಲಿನ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೀಡಿಯೋವನ್ನು ಅಭಿಷೇಕ್ ಬ್ಯಾನರ್ಜಿ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಇದರಿಂದ ಹಿರಿಯ ಟಿಎಂಸಿ ನಾಯಕ ಉದಯನ್ ಗುಹಾ, “ಬಿಜೆಪಿ ನಾಯಕರು ಮತ್ತು ದಿನ್ಹಾಟಾದ ಕಾರ್ಯಕರ್ತರು ತಮ್ಮ ಬಗ್ಗೆ ಕಾಳಜಿ ವಹಿಸಬೇಕು” ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಆಗಮನಕ್ಕೂ ಹಿಂದಿನ ದಿನ ಟಿಎಂಸಿ ಪೋಸ್ಟರ್‌ಗಳನ್ನು ಬಿಜೆಪಿ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತೃಣಮೂಲ ಕಾಂಗ್ರೆಸ್‌ನ ರಾಜ್ಯ ಘಟಕ ಟ್ವಿಟರ್ ನಲ್ಲಿ, “ ತ್ರಿಪುರ ಸರ್ಕಾರದಿಂದ ಗೂಂಡಾಗಿರಿ ಪ್ರದರ್ಶನ ಮಾಡುತ್ತಿದೆ. ಬಿಜೆಪಿ ಇದೇ ರೀತಿ ನಾಚಿಕೆಗೇಡಿನ ಪ್ರಯತ್ನ ಮಾಡುತ್ತಲೇ ಇರಬಹುದು. ಆದರೆ ತ್ರಿಪುರದ ಜನರ ಹೃದಯದಿಂದ ನಮ್ಮನ್ನು ಅಳಿಸಲು ಸಾಧ್ಯವಿಲ್ಲ” ಎಂದು ಟೀಕಿಸಿದೆ.
ಅಭಿಷೇಕ್ ಬ್ಯಾನರ್ಜಿ ತ್ರಿಪುರಾಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ತ್ರಿಪುರಾ ಪೋಲಿಸ್ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಅವರು ತ್ರಿಪುರಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು.