Package 5 : 7 ವಲಯಗಳಿಗೆ ಹೊಸ ಯೋಜನೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್..
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ‘ಆತ್ಮ ನಿರ್ಭರ್ ಭಾರತ’ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಮೊದಲ ನಾಲ್ಕು ಕಂತುಗಳಲ್ಲಿ ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯಕ್ಕೆ, ಮಹಿಳೆಯರಿಗೆ ಸೇರಿದಂತೆ ನಾಲ್ಕು ಕಂತಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು…
ಐದನೇ ಕಂತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ವಲಯಗಳಿಗೆ ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯಕ್ಕೆ, ಮಹಿಳೆಯರಿಗೆ ಸೇರಿದಂತೆ ನಾಲ್ಕು ಕಂತಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
‘ಆತ್ಮ ನಿರ್ಭರ್ ಭಾರತ’ ಅಭಿಯಾನದ ಕೊನೆಯ ಕಂತಿನಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಪ್ರಕಟಿಸಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಮೊದಲ ನಾಲ್ಕು ಹಂತದಲ್ಲಿ 18.5 ಲಕ್ಷ ಮೌಲ್ಯದ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಇಂದು ಐದನೇ ಹಂತದಲ್ಲಿ ಉಳಿದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಈ ಪ್ಯಾಕೇಜ್ಗೆ ಸಂಬಂಧಿಸಿದಂತೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯಕ್ಕೆ, ಮಹಿಳೆಯರಿಗೆ ಸೇರಿದಂತೆ 5 ಕಂತಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ರಾಜ್ಯಗಳಿಗೆ 4113 ಕೋಟಿ ಹಣ ಬಿಡುಗಡೆ ಮಾಡಿರುವ ನಿರ್ಮಲಾ ಸೀತಾರಾಮನ್ ಅಗತ್ಯ ವಸ್ತುಗಳ ಖರೀದಿಗೆ 3750 ಕೋಟಿ, ಮತ್ತು ಕೊರೊನಾ ವಾರಿಯರ್ಸ್ ಗೆ 50 ಲಕ್ಷ ವಿಮೆ ಟೆಸ್ಟಿಂಗ್ ಕಿಟ್, ಟೆಸ್ಟಿಂಗ್ ಕಿಟ್ಗೆ 550 ಕೋಟಿ ಪ್ರಕಟಿಸಿದ್ದಾರೆ..
ಐದನೇ ಹಂತದ ಪ್ಯಾಕೇಜ್ ನಲ್ಲಿ ಆನ್ಲೈನ್ ಎಜುಕೇಶನ್ ದೊಡ್ಡಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ ಜೊತೆಗೆ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಅವಕಾಶ, ಆನ್ಲೈನ್ ಶಿಕ್ಷಣ ಪ್ರಸಾರಕ್ಕಾಗಿ 3 ಪ್ರತ್ಯೇಕ ಚಾನೆಲ್ ಡಿಟಿಎಚ್, ಸ್ಕೈಪ್ ಮೂಲಕ ವಿದ್ಯಾರ್ಥಿಗಳಿಗೆ ಇ-ಪಾಠ ಹಾಗು ಒಟ್ಟಾರೆಯಾಗಿ ಶಿಕ್ಷಣ ಕುರಿತು 12 ಹೊಸ ಚಾನಲ್ಗಳು ಕಾರ್ಯನಿರ್ವಹಿಸಲಿದೆ ಇದಕ್ಕಾಗಿ ಆನ್ಲೈನ್ ಶಿಕ್ಷಣ ನೀಡಲು 200 ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಲಾಗುತ್ತದೆ ಎಂದು ಅವರು ತಿಳಿಸಿದರು…
ಗ್ರಾಮೀಣ ಭಾಗದ ಆರ್ಥಿಕತೆ ಅಭಿವೃದ್ದಿಗೆ ಒತ್ತು ನೀಡಲು ಮನ್ರೇಗಾ ಯೋಜನೆಗಾಗಿ 40 ಸಾವಿರ ಕೋಟಿ ಹೆಚ್ಚು ಹಣ ನೀಡಲಾಗುತ್ತದೆ, ಜೊತೆಗೆ ನರೇಗಾ ಯೋಜನೆಗಾಗಿ 61 ಸಾವಿರ ಕೋಟಿ ಮೀಸಲಾಗಿಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ ಮತ್ತು ಮೂಲ ಸೌಕರ್ಯವೃದ್ದಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು…
ಹೊಂದಿರುತ್ತದೆ

