ಬಂಗಾಳದಲ್ಲಿ ಮಳೆಯ ಅರ್ಭಟ : ಗೋಡೆ ಕುಸಿದು ಮತ್ತು ವಿದ್ಯುತ್ ಸ್ಪರ್ಶದಿಂದ 14 ಜನ ಸಾವು!

ಪಶ್ಚಿಮ ಬಂಗಾಳದಲ್ಲಿ ಮಳೆಯ ಅರ್ಭಟ ಹೆಚ್ಚಾಗಿದ್ದು ಗೋಡೆ ಕುಸಿದು ಮತ್ತು ವಿದ್ಯುತ್ ಸ್ಪರ್ಶದಿಂದ 14 ಜನ ಸಾವನ್ನಪ್ಪಿದ್ದಾರೆ.

ಭಾರೀ ಮಳೆಗೆ ತುಂಬಿದ್ದ ದಾಮೋದರ್ ವ್ಯಾಲಿ ಕಾರ್ಪೊರೇಶನ್ ಅಣೆಕಟ್ಟೆಗಳಿಂದ ನೀರು ಹರಿಬಿಟ್ಟ ಪರಿಣಾಮ ಬೀದಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಪಶ್ಚಿಮ ಬಂಗಾಳದ ಪ್ರವಾಹ ಪೀಡಿತ ಆರು ಜಿಲ್ಲೆಗಳಲ್ಲಿ ಸುಮಾರು 2.5 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯ ಸರ್ಕಾರ ಸ್ಥಳಾಂತರಗೊಂಡವರಿಗೆ ಆಶ್ರಯ ಮನೆಗಳನ್ನು ಸ್ಥಾಪಿಸಿದೆ. ಪ್ರವಾಹದಲ್ಲಿ ಗೋಡೆ ಕುಸಿದು ಮತ್ತು ವಿದ್ಯುತ್ ಸ್ಪರ್ಶದಿಂದ 14 ಜನ ಸಾವನ್ನಪ್ಪಿದ್ದಾರೆ.

14 Dead, 2.5 Lakh Displaced As Heavy Rain, Water Discharged From Dams Flood Bengal

ಪುರ್ಬ ವರ್ಧಮಾನ್, ಪಶ್ಚಿಮ ಬರ್ಧಮಾನ್, ಪಶ್ಚಿಮ ಮೇದಿನೀಪುರ್, ಹೂಗ್ಲಿ, ಹೌರಾ ಮತ್ತು ಹಲವಾರು ಪ್ರದೇಶಗಳಲ್ಲಿ ಸೊಂಟದೆತ್ತರಕ್ಕೆ ನೀರು ನಿಂತಿದೆ. ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವ ದೃಶ್ಯಗಳು ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿವೆ.

ಒಂದು ಲಕ್ಷ ಟಾರ್ಪಾಲಿನ್, 1,000 ಮೆ.ಟನ್ ಅಕ್ಕಿ, ಸಾವಿರಾರು ಕುಡಿಯುವ ನೀರಿನ ಪಾಕೇಟ್ ಗಳು ಮತ್ತು ಸ್ವಚ್ಛ ಬಟ್ಟೆಗಳನ್ನು ಆಶ್ರಯ ಮನೆಗಳಿಗೆ ಕಳುಹಿಸಲಾಗಿದ್ದು ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಚರಣೆ ಮೂಮದುವರೆದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights