ಸಿಎಂ ಬಿಎಸ್‌ವೈರನ್ನೇ ಹೊರಗಿಟ್ಟು ಸಭೆ ನಡೆಸಿದ ಅಮಿತ್‌ ಶಾ; ನಾಯಕತ್ವ ಬದಲಾವಣೆಯ ಮುನ್ಸೂಚನೆ?

ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಿಎಂ ಬಿಎಸ್‌ವೈ ಅವರನ್ನು ಹೊರಗಿಟ್ಟು ಪಕ್ಷದ ನಾಲ್ವರು ನಾಯಕರೊಂದಿಗೆ ಪ್ರತ್ಯೇಕವಾಗಿ ಶನಿವಾರ ರಾತ್ರಿ ಸಭೆ ನಡೆಸಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಅಮಿತ್‌ ಶಾ ತಂಗಿದ್ದ ಹೋಟೆಲ್‌ನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹೊರೆಗೆ ಹೋದ ನಂತರ ಬಿ.ಎಲ್‌.ಸಂತೋಷ್, ಪ್ರಲ್ಹಾದ ಜೋಷಿ, ಸಿ.ಟಿ.ರವಿ ಮತ್ತು ನಳಿನ್‌ ಕುಮಾರ್ ಕಟೀಲ್ ಅವರೊಂದಿಗೆ ಅಮಿತ್‌ ಶಾ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಇದು ಬಿಎಸ್‌ವೈ ವಿರೋಧಿ ಬಣದ ಚರ್ಚೆಯಾಗಿದೆ ಎಂಬ ಸಂಶಯಕ್ಕೆ ಕಾರಣವಾಗಿದೆ.

ಏಪ್ರಿಲ್‌ ನಂತರ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ. ಈ ಬಗ್ಗೆ ಆರ್‌ಎಸ್‌ಎಸ್‌ ಮೂಲದಿಂದಲೇ ಮಾಹಿತಿ ದೊರೆತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಯೆ ಹಿನ್ನೆಲೆಯಲ್ಲಿ ಈ ಸಭೆ ಹಲವು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮೊಳಗಿತು ‘ಗೋ ಬ್ಯಾಕ್‌ ಅಮಿತ್‌ ಶಾ’ ಘೋಷಣೆ: ರೈತರ ಬಂಧನ

ಅಮಿತ್‌ ಶಾ ಅವರು ಆರ್‌ಎಸ್‌ಎಸ್‌ ಹಿನ್ನೆಲೆಯನ್ನು ಹೊಂದಿರುವ ನಾಲ್ವರು ನಾಯಕರೊಂದಿಗೆ ಸಭೆ ನಡೆಸಿರುವುದು, ಬಿಎಸ್‌ವೈ ವಿರುದ್ಧ ಆರ್‌ಎಸ್‌ಎಸ್‌ ಹಿನ್ನೆಲೆಯ ನಾಯಕರು ಅಸಮಾಧಾನಗೊಂಡಿದ್ದಾರೆ. ರಾಜ್ಯದಲ್ಲಿ ನಾಕತ್ವ ಬದಲಾಗವಣೆಯಾಗುವ ಸಾಧ್ಯತೆ ಇರುಬಹುದು ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಳಗಾವಿಯಲ್ಲಿ ಭಾಷಣ ಮಾಡಿದ್ದ ಅಮಿತ್‌ ಶಾ, ರಾಜ್ಯದಲ್ಲಿ 2023ರ ವರೆಗೂ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಅಲ್ಲದೆ, ಸಚಿವ ಸ್ಥಾನದ ಅತೃಪ್ತರಿಗೂ ಸೈಲೆಂಟ್‌ ಆಗಿರುವಂತೆ ಖಡಕ್ ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ. ಆದರೆ, ಮುಖ್ಯಮಂತ್ರಿಯನ್ನು ಬಿಟ್ಟು ನಡೆಸಿರುವ ಸಭೆ ಹಲವು ಅನುಮಾನಗಳನ್ನು ಮೂಡಿಸಿದ್ದು, ರಾಜ್ಯ ಬಿಜೆಪಿಯಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಅಮಿತ್‌ ಶಾ ಭಾಗಿಯಾಗಿದ್ದ ಭದ್ರಾವತಿ RAF ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡವೇ ಇಲ್ಲ; ಹೆಚ್‌ಡಿಕೆ ಕಿಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights