ನಟಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಗೂ ಕೊರೊನಾ ಸೋಂಕು ದೃಢ!

ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್​ ಬಚ್ಚನ್​ ಅವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಬಂದಿತ್ತು. ಇದರಿಂದಾಗಿ ಅವರ ಕುಟುಂಬದ ಸದಸ್ಯೆ, ನಟಿ ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾದ್ಯ ಅವರೂ ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಅವರಿಗೂ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

“ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಸಮೀಪ ಬಂದಿದ್ದ ಯಾರೇ ಆದರೂ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಬಚ್ಚನ್ ಟ್ವೀಟ್ ಮಾಡಿದ್ದರು.

ಅಮಿತಾಬ್ ಮತ್ತು ಅಭಿಷೇಕ್‌ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದಾಗಿ ಅವರ ಮನೆಯಲ್ಲಿ ಮತ್ತು ಅವರೊಂದಿಗೆ ಒಡನಾಟದಲ್ಲಿದ್ದ, ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಐಶ್ವರ್ಯಾ ರೈ ಮತ್ತು ಮಗಳ ಆರಾಧ್ಯ ಬಚ್ಚನ್ ಅವರಿಗೆ ಕರೊನಾ ದೃಢಪಟ್ಟಿದ್ದು, ಮುಂಬೈನ ನಾನಾವತಿ ಕೊರೊನಾ ಆಸ್ಪತ್ರೆಯಲ್ಲಿ ಅವರನ್ನುಇ  ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights