ಕಾಂಗ್ರೆಸ್‌ನ ಐವರು ಶಾಸಕರಿಗೆ ಕೊರೊನಾ; ಕೆಪಿಸಿಸಿ ಕಚೇರಿ ಸೀಲ್‌ಡೌನ್‌!

ಕಾಂಗ್ರೆಸ್​ನ ಐವರು ಶಾಸಕರಿಗೆ ಕೊರೊನಾ ಧೃಢಪಟ್ಟ ಹಿನ್ನಲೆಯಲ್ಲಿ ಕ್ವೀನ್ಸ್​ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯನ್ನ ಬಿಬಿಎಂಪಿ ಅಧಿಕಾರಿಗಳು ಸೀಲ್​ ಡೌನ್​ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯೊಂದಿಗೆ ಸಂಪರ್ಕ ಹೊಂದಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಜೇವರ್ಗಿ ಶಾಸಕ ಅಜಯ್‌ ಸಿಂಗ್‌, ಶೃಂಗೇರಿ ಶಾಸಕ ರಾಜೇಗೌಡ, ಗುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್ ಮತ್ತು ಕುಣಿಗಲ್‌ ಶಾಸಕ ರಂಗನಾಥ್‌ ಅವರಿಗೆ ಕೊರೊನಾ ದೃಢಪಟ್ಟಿದೆ. ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿಕೆಶಿ ಕಾರ್ಯಕ್ರಮದಲ್ಲಿ ಇವರೆಲ್ಲರೂ ಭಾಗಿಯಾಗುದಲ್ಲದೆ, ಕೆಪಿಸಿಸಿ ಕಚೇರಿಯೊಂದಿಗೆ ಒಡನಾಟ ಹೊಂದಿದ್ದರು.

ಕೆಲವು ದಿನಗಳ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ಈ ಐವರು ಶಾಸಕರು ಮತ್ತು ಸಿಬ್ಬಂದಿಗಳು ಓಡಾಡಿದ್ದರು. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸೋಂಕು ತಗಲಿರುವುದು ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯನ್ನೆ ಸೀಲ್​ ಡೌನ್​ ಮಾಡಲಾಗಿದೆ. ಇದರ ಜೊತೆಗೆ ಹಳೆಯ ಮತ್ತು ಹೊಸ ಕಚೇರಿಗೆ ಸ್ಯಾನಿಟೈಸರ್​ ಅನ್ನ ಸಿಂಪಡಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights