By election : ಯಾರ ಒತ್ತಡಕ್ಕೂ ಮಣಿಯದೆ ತಟಸ್ತರಾದ ಸಂಸದರು…

ಸಂಸದರಾದ ಸುಮಲತಾ ಹಾಗೂ ಬಚ್ಚೇಗೌಡರು ಉಪ ಚುನಾವಣೆ ಕಣದಿಂದ ತಟಸ್ತರಾಗಿರುಲು ನಿರ್ಧರಿಸಿದ್ದು, ಇದು ಸ್ಪರ್ಧಾ ಕಣದಲ್ಲಿರುವ ಅನರ್ಹ ಶಾಸಕರಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.

ಕೆಆರ್‍ ಪೇಟೆಯಿಂದ ಸ್ಪರ್ಧಿಸಿರುವ ನಾರಾಯಣ ಗೌಡ ಹಾಗೂ ಹೊಸಕೋಟೆಯಿಂದ ಸ್ಪರ್ಧೆ ಮಾಡುತ್ತಿರುವ ಎಂಟಿಬಿ ನಾಗರಾಜ್ ಅವರು ಸಂಸದರ ಈ ನಡೆಯಿಂದ ಕೊಂಚ ಆತಂಕಕ್ಕೆ ಒಳಗಾಗಿದ್ದಾರೆ ಎಂದು ನಿಕಟ ಮೂಲಗಳು ಹೇಳುತ್ತಿವೆ.

ಮಂಡ್ಯ ಸಂಸದೆ ಸುಮಲತಾ ಕಡೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ತಮ್ಮ ಅಭ್ಯರ್ಥಿಯ ಪರ ಪ್ರಚಾರ ನಡೆಸಬಹುದು ಎಂದು ಕಾದು ಕುಳಿತಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಚುನಾವಣೆಯಿಂದ ತಟಸ್ತತರಾಗುಳಿಯುವುದಾಗಿ ಸುಮಲತಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್‍ಯಕರ್ತರು ಶ್ರಮಿಸಿದ್ದರು. ಈಗ ಯಾವುದೇ ಒಂದು ಪಕ್ಷಕ್ಕೆ ಬೆಂಬಲ ಸೂಚಿಸುವುದು ಮತ್ತೊಂದು ಪಕ್ಷದ ಕಾರ್‍ಯಕರ್ತರಿಗೆ ನೋವುಂಟು ಮಾಡುತ್ತದೆ. ಹಾಗಾಗಿ ಯಾರನ್ನು ಬೆಂಬಲಿಸದೆ ಅಲಿಪ್ತರಾಗಿ ಉಳಿಯಲು ಸುಮಲತಾ ನಿರ್ಧರಿಸಿದ್ದಾರೆ.

ಇನ್ನು ಹೊಸಕೋಟೆಯಲ್ಲಿ ಯಾವುದೇ ಕಾರಣಕ್ಕೂ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪರ ಪ್ರಚಾರ ಮಾಡದಿರುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿರಲು ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಚ್ಚೇಗೌಡರು ತೀರ್ಮಾನಿಸಿದ್ದಾರೆ.

ಶಿಸ್ತು ಕ್ರಮದ ಬೆದರಿಕೆ, ಖುದ್ದು ಮುಖ್ಯಮಂತ್ರಿಗಳ ಮನವಿಗೂ ಬಚ್ಚೇಗೌಡರು ಕಿವುಡಾಗಿದ್ದಾರೆ. ಹೊಸಕೋಟೆಯಲ್ಲಿ ಬಚ್ಚೇಗೌಡರ ಪುತ್ರ ಶರತ್ ಪಕ್ಷೇತರರಾಗಿ ಕಣದಲ್ಲಿದ್ದು, ಎಂಟಿಬಿ ನಾಗರಾಜ್‌ಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ.

ಈ ಇಬ್ಬರು ಸಂಸದರ ನಡೆ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯಲು ಡಿಸೆಂಬರ್ ಒಂಭತ್ತರ ತನಕ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights