2022ರ ಕಾಮನ್‌ವೆಲ್ತ್‌ನಲ್ಲಿ ಹಿಮ ದಾಸ್ ಇನ್ನೂ ಚಿನ್ನ ಗೆದಿಲ್ಲ: ವೈರಲ್ ವಿಡಿಯೋ 2018ರದ್ದು

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ದಿನವಾದ ಇಂದು ಭಾರತ ಪದಕದ ಖಾತೆ ತೆರೆದಿದೆ. 55 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ 113 ಕೆಜಿ ಭಾರ ಎತ್ತಿರುವ ಭಾರತದ ಸ್ಪರ್ಧೆಯಲ್ಲಿ ಸಂಕೇತ್ ಸರ್ಗರ್ ಕ್ಲೀನ್ ಅಂಡ್ ಜರ್ಕ್‌ನಲ್ಲಿ ಒಟ್ಟು 135 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು. ಆದರೆ ಇದೇ ಸಂದರ್ಭದಲ್ಲಿ ಭಾರತದ ಖ್ಯಾತ ಓಟಗಾರ್ತಿ ಹಿಮ ದಾಸ್ ಕೂಡ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಸೇರಿದಂತೆ ನೂರಾರು ಮಂದಿ ಅದನ್ನು ಹಂಚಿಕೊಂಡಿದ್ದಾರೆ.

https://twitter.com/srao7711/status/1553234554718420992?ref_src=twsrc%5Etfw%7Ctwcamp%5Etweetembed%7Ctwterm%5E1553234554718420992%7Ctwgr%5E78ce107b3717806b2ae80f124df371bc9fca1900%7Ctwcon%5Es1_&ref_url=https%3A%2F%2Fwww.latestly.com%2Fsports%2Fdid-hima-das-win-gold-medal-at-commonwealth-games-2022-heres-the-fact-check-about-the-video-being-passed-off-as-recent-4017764.html

ಫ್ಯಾಕ್ಟ್‌ಚೆಕ್

ಸದ್ಯ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಹಿಮ ದಾಸ್ ಇನ್ನೂ ಚಿನ್ನ ಗೆದ್ದಿಲ್ಲ. ಅವರ ಸ್ಪರ್ಧೆ ಇನ್ನೂ ನಡೆದಿಲ್ಲ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ 2018 ರ ಜೂನಿಯರ್ ಚಾಂಪಿಯನ್‌ಶಿಪ್‌ ನದ್ದಾಗಿದೆ. ಹಾಗಾಗಿ ಪೋಸ್ಟ್ ಮೂಲಕ ಹಂಚಿಕೊಳ್ಳುತ್ತಿರುವುದು ಹಳೆಯ ವಿಡಿಯೋ ಆಗಿದೆ.

ಈ ಸತ್ಯ ತಿಳಿಯುತ್ತಿದ್ದಂತೆ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ತಮ್ಮ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

ಒಟ್ಟಾರೆ ಹೇಳುವುದಾದರೆ ಪ್ರಸ್ತುತ ನಡೆಯುತ್ತಿರುವ 2022ರ ಕಾಮನ್‌ವೆಲ್ತ್‌ನಲ್ಲಿ ಹಿಮ ದಾಸ್ ಇನ್ನೂ ಚಿನ್ನ ಗೆದಿಲ್ಲ. ಅವರು ಗೆಲ್ಲಲಿ ಎಂದು ಹಾರೈಸೋಣ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಹಳೆಯದ್ದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸರ್ಕಾರಿ ಶಾಲೆಯಲ್ಲಿ ನಕಲಿ ಶಿಕ್ಷಕ – ವೈರಲ್ ವಿಡಿಯೋದ ವಾಸ್ತವವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights