Bihar: ಸರಳ ಬಹುಮತ ಪಡೆದ NDA; 5ನೇ ಬಾರಿಯೂ ನಿತೀಶ್‌ ಮುಖ್ಯಮಂತ್ರಿ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ NDA ಮೈತ್ರಿಕೂಟ ಗೆಲುವಿನ ನಗೆ ಬೀರಿದೆ.  ಹೆಚ್ಚಿನ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಮಹಾಘಟಬಂಧನ್ ಗೆಲ್ಲುತ್ತದೆ ಎಂದಿದ್ದವಾದರೂ ಎಲ್ಲಾ ಸಮೀಕ್ಷೆಗಳು ನೆಲಕಚ್ಚಿವೆ.

NDA ಕೂಟ ಒಟ್ಟು 125 ಸ್ಥಾನಗಳನ್ನು ಗೆದ್ದಿದೆ, ಮಹಾಘಟಬಂಧನ್ ಕೂಟ 110 ಸ್ಥಾನಗಳನ್ನು ಗೆದ್ದು NDAಗೆ  ತೀವ್ರ ಪೈಪೋಟಿ ನೀಡಿತು. ಅಸಾದುದ್ದೀನ್ ಒವೈಸಿ ನೇತೃತ್ವದ AIMIM ತನ್ನ ಮೊದಲನೇ ಭಾರಿ 5 ಸೀಟುಗಳನ್ನು ಪಡೆದು ಅಚ್ಚರಿ ಮೂಡಿಸಿದೆ. ಒಟ್ಟು 13 ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದ AIMIM ಸ್ಫರ್ಧೆಯು ಮಹಾಘಟಬಂಧನ್‌ ಮೈತ್ರಿ ಕೂಟಕ್ಕೆ ದುಬಾರಿಯಾಗಿ ಪರಿಣಮಿಸಿತು.

ಮಹಾಘಟಬಂಧನ್‌ನ ಪ್ರಮುಖ ಪಕ್ಷವಾಗಿದ್ದ ಕಾಂಗ್ರೆಸ್ 70 ಕ್ಷೇತ್ರದಲ್ಲಿ ಸ್ಫರ್ಧಿಸಿತ್ತಾದರೂ ಕೇವಲ 19 ಕ್ಷೇತ್ರಗಳಲ್ಲಿ ಗೆದ್ದು ತೀರಾ ಕಳಪೆ ಪ್ರದರ್ಶನ ತೋರಿದೆ. ಮೈತ್ರಿಯ ಇನ್ನೊಂದು ಮಿತ್ರಪಕ್ಷವಾದ RJD 144 ಕ್ಷೇತ್ರದಲ್ಲಿ ಸ್ಫರ್ಧಿಸಿದ್ದು 75 ಕ್ಷೇತ್ರದಲ್ಲಿ ಜಯಗಳಿಸಿದೆ. ಇನ್ನುಳಿದಂತೆ ಮೈತ್ರಿಯ ಭಾಗವಾಗಿದ್ದ ಎಡಪಕ್ಷಗಳು ತಮಗೆ ನೀಡಿದ್ದ ಒಟ್ಟು 29 ಕ್ಷೇತ್ರದಲ್ಲಿ 16 ಕ್ಷೇತ್ರದಲ್ಲಿ ಜಯಗಳಿಸಿದೆ.

NDA ಕೂಟದಲ್ಲಿ ಬಿಜೆಪಿ 110 ಸ್ಥಾನಗಳಿಗೆ ಸ್ಫರ್ಧಿಸಿ 73 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಇನ್ನೂ ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. 115 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ JDU 41 ಕ್ಷೇತ್ರದಲ್ಲಿ ಗೆದ್ದಿದ್ದು, 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.. ಕಳೆದ ವಿಧಾನಸಭೆಯಲ್ಲಿ RJD 67 ಸ್ಥಾನಗಳನ್ನು ಗೆದ್ದಿತ್ತು. ಇನ್ನುಳಿದಂತೆ NDA ಕೂಟದ ಇತರ ಪಕ್ಷಗಳು 8 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಇನ್ನು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷವಾದ ಚಿರಾಜ್ ಪಾಸ್ವಾನ್ ನೇತೃತ್ವದ ಎಲ್‌‌ಜೆಪಿ ಪಕ್ಷವು 135 ಕ್ಷೇತ್ರದಲ್ಲಿ ಸ್ಫರ್ಧಿಸಿದ್ದು ಕೇವಲ ಒಂದು ಕ್ಷೇತ್ರವನ್ನಷ್ಟೇ ಗೆದ್ದುಕೊಂಡಿದೆ. BSP ಒಂದು ಸ್ಥಾನವನ್ನು ಗೆದ್ದುಕೊಂಡರೆ, ಒಂದು ಕ್ಷೇತ್ರವನ್ನು ಪಕ್ಷೇತರ ಗೆದ್ದು ಕೊಂಡಿದೆ.


ಇದನ್ನೂ ಓದಿ: ಬಿಜೆಪಿಯದ್ದು ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ದುರುಪಯೋಗದ ಗೆಲವು: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights