ಲಾಕ್ ಡೌನ್ ಎಫೆಕ್ಟ್ : ಹೊರಬರಲು ಪಾಸ್ ಕಡ್ಡಾಯ – ಯಾರಿಗೆಲ್ಲಾ ಪಾಸ್ ಕೊಡ್ತಾರೆ ಗೊತ್ತಾ..?

ಕೊರೊನಾ ಎಫೆಕ್ಟ್ ಗೆ ಇಡೀ ವಿಶ್ವವೇ ಕಂಗಾಲಾಗಿದೆ. ಜನ ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಬರಲು ಯೋಚಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಕೊರೊನಾ ಸೃಷ್ಟಿದ್ದು ಕೇವಲ ದೇಹಕ್ಕೆ ಹೊಕ್ಕುವ ಭಯ ಮಾತ್ರವಲ್ಲ, ಪ್ರಾಣ ಬಲಿ ಪಡೆಯುವ ಭಯ. ದೇಶದಲ್ಲಿ ಎಂಥಹ ಸಂಧಿಗ್ದ ಪರಿಸ್ಥಿತಿಯೇ ಎದುರಾಗಲಿ ಜನ ಒಂದಲ್ಲಾ ಒಂದು ಕಾರಣಕ್ಕಾಗಿ ಹೊರ ಬರಲೇಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡಲೇಬೇಕು. ಆದರೆ ಇದಕ್ಕೆ ಈ ವರೆಗೆ ಅವಕಾಶಗಳಿರಲಿಲ್ಲ. ಆದರೂ ಜನ ಪೊಲೀಸ್ ಕಣ್ಣು ತಪ್ಪಿಸಿ ಓಡಾಡುತ್ತಲೇ ಇದ್ರು. ಯಾರಿಗೆ ತುರ್ತು ಪಡಿಸ್ಥಿತಿ ಯಾರಿಗಿಲ್ಲ ಅನ್ನೋದೇ ಗೊಂದಲವಾಗಿ ಹೋಗಿತ್ತು. ಜನ ಈ ನೆಪದಲ್ಲಿ ಗುಂಪು ಗುಂಪಾಗಿ ಸೇರ್ತಾಯಿದ್ರು. ಆದ್ರೆ ಇದಕ್ಕೆಲ್ಲ ಸದ್ಯ ಕಡಿವಾಣ ಬಿದ್ದಿದೆ.

ಹೌದು… ತುರ್ತು ಸಂದರ್ಭ ಹೊರತುಪಡಿಸಿ, ಕೆಲವು ಸೇವೆಗಳಲ್ಲಿ ಕೆಲಸಕ್ಕೆ ಹೋಗುವವರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಹೊರಗಡೆ ಕಾಲಿಡುವ ಹಾಕಿಲ್ಲ. ಕೊರೊನಾ ಹರಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ಮುಂದೆ ಹೊರಗಡೆ ಕಾಲಿಡಬೇಕಾದ್ರೆ ಸೂಕ್ತ ಕಾರಣವಿರಬೇಕು. ನಿಮ್ಮ ಬಳಿ ಕಚೇರಿ ಐಡಿ ಇರಬೇಕು. ಆಗ ಮಾತ್ರ ಪಾಸ್ ವಿತರಿಸಲಾಗುತ್ತದೆ. ಅಂಥವರು ಮಾತ್ರ ಹೊರಗಡೆ ಓಡಾಡುವ ಅವಕಾಶವನ್ನು ನೀಡಲಾಗುತ್ತದೆ.

ಇಂದಿನಿಂದ 180 ಬಿಎಂಟಿಸಿ ಬಸ್ ಗಳನ್ನು ಓಡಾಡಲು ನಿರ್ಧರಿಸಲಾಗಿದೆ.15ಕ್ಕೂ ಹೆಚ್ಚು ಬಸ್​ಗಳು ಮೆಜೆಸ್ಟಿಕ್​ನಿಂದ ಹೊರಡಲು ಸಿದ್ಧವಾಗಿವೆ. ವಿಕ್ಟೋರಿಯಾ, ಕಿಮ್ಸ್​​, ಜಯದೇವ, ನಿಮ್ಹಾನ್ಸ್​​​, ಕಿದ್ವಾಯಿ, ಫೋರ್ಟಿಸ್​, ಅಪೊಲೋ, ಸಾಗರ್​ ಹೀಗೆ ನಗರದ ನಾನಾ ಆಸ್ಪತ್ರೆಗಳಿಗೆ ಬಿಎಂಟಿಸಿ ಬಸ್​ ಸೇವೆ ಆರಂಭವಾಗಿದೆ. ಆದರೆ ಸಾರ್ವಜನಿಕರು ಈ ಬಸ್ ಗಳನ್ನು ಹತ್ತುವಂತಿಲ್ಲ. ಬೆಂಗಳೂರು ಸಿಟಿ ಪೊಲೀಸ್ ನೀಡಿದ ಕರ್ಫ್ಯೂ ಪಾಸ್‌  ಇದ್ದರಷ್ಟೇ ಓಡಾಡಲು ಅನುಮತಿ ಕೊಡಲಾಗಿದೆ. ಜೊತೆಗೆ ಒಂದು ಬಸ್ ನಲ್ಲಿ 20 ಜನ ಮಾತ್ರ ಪ್ರಯಾಣ ಮಾಡಬಹುದಾಗಿದೆ.

ಬಿಎಂಟಿಸಿಯಲ್ಲಿ ಯಾರೆಲ್ಲ ಪ್ರಯಾಣ ಮಾಡಬಹುದು ಎಂದರೆ ಬೆಸ್ಕಾಂ ಸಿಬ್ಬಂದಿ- ಒಳಚರಂಡಿ ಮಂಡಳಿ, ಬಿಬಿಎಂಪಿ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯರು( ಖಾಸಗಿ, ಸರ್ಕಾರಿ),ಔಷಧಾಲಯದ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ರಕ್ತದಾನಿಗಳು, ಬ್ಯಾಂಕ್ ಸಿಬ್ಬಂದಿ, ಪತ್ರಕರ್ತರು, ಬಿಎಂಟಿಸಿ ಸಿಬ್ಬಂದಿಗಳು ಮಾತ್ರ ಪ್ರಯಾಣ ಮಾಡಬಹುದಾಗಿದೆ.

ಸಿಬ್ಬಂದಿ ತಾವು ಕೆಲಸ ಮಾಡುವ ಕಚೇರಿಯಲ್ಲಿ ಕೊಟ್ಟಿರುವ ಐಡಿ ಕಾರ್ಡ್ ಜೆರಾಕ್ಸ್ ಪ್ರತಿ , ತಮ್ಮ ಫೋಟೋ, ತಮ್ಮ ಕಚೇರಿಯ ಮೇಲಾಧಿಕಾರಿಗಳು ಸಹಿ ಮಾಡಿರುವ ಪತ್ರ ನೀಡಿ ಪಾಸ್ ನ್ನು ಪಡೆಯಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights