ಉತ್ತರ ಖಂಡದ ಹಿಮನದಿಯಲ್ಲಿ ಭಾರೀ ಹಿಮ ಪ್ರವಾಹ; 150 ಜನರು ಕಣ್ಮರೆ!

ಉತ್ತರಾಖಂಡದ  ’ನಂದಾ ದೇವಿ’ ಹಿಮನದಿಯಲ್ಲಿ ಭಾನುವಾರ ಬೆಳಗ್ಗೆ ಭಾರಿ ಹಿಮ ಪ್ರವಾಹ ಉಂಟಾಗಿದ್ದು, ಇದರಲ್ಲಿ ಕನಿಷ್ಠ 150 ಮಂದಿ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ತಪೋವನ್ ಪ್ರದೇಶದಲ್ಲಿ ಈ ಹಿಮಪಾತವಾಗಿದ್ದು, ರೈನಿ ಗ್ರಾಮದ ಸಮೀಪವಿರುವ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯಗಿದ್ದು, ಕಾಣೆಯಾದ 150 ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಡಿಐಜಿ ರಿಧಿಮ್ ಅಗರ್‌ವಾಲ್ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಹೇಳಿಕೆಯಂತೆ, “ವಿದ್ಯುತ್ ಯೋಜನೆಯ ಪ್ರತಿನಿಧಿಗಳಿಗೆ, ಯೋಜನಾ ಸ್ಥಳದಲ್ಲಿದ್ದ ತಮ್ಮ ಸುಮಾರು 150 ಕೆಲಸಗಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು, “ರಾಜ್ಯ ವಿಪತ್ತು ನಿರ್ವಹಣೆ ಮತ್ತು ಚಮೋಲಿ ಆಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಎಲ್ಲಾ ಜಿಲ್ಲೆಗಳು ತೀವ್ರ ಎಚ್ಚರಿಕೆ ವಹಿಸುತ್ತಿದೆ. ಗಂಗಾ ನದಿಯ ಬಳಿ ಎಚ್ಚರಿಕೆಯಲ್ಲಿ ಇರುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಹಳೆಯ ಪ್ರವಾಹ ವೀಡಿಯೊಗಳ ಮೂಲಕ ವದಂತಿಗಳನ್ನು ಹರಡಬಾರದು” ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

ಪ್ರವಾಹ ಪೀಡಿತ ಸ್ಥಳದಲ್ಲಿ ರಕ್ಷಣಾ ತಂಡಗಳನ್ನು ಕರೆದೊಯ್ಯಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಅಸ್ಸಾಂನಲ್ಲಿ BJPಗೆ ಭರ್ಜರಿ ಜಯ; ಉಳಿದ ರಾಜ್ಯಗಳ ಕತೆ ಏನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights