ಭಾರತ vs ಇಂಗ್ಲೆಂಡ್: ಮೊದಲ ಇನ್ನಿಂಗ್ಸ್‌ನಲ್ಲಿ ಮುಗ್ಗಿರಿಸುತ್ತಿದೆ ಟೀಂ ಇಂಡಿಯಾ; ಕೋಹ್ಲಿ ಪಡೆಗೆ ಆತಂಕ!

ಭಾರತ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ತಂಡಗಳ ನಡುವೆ ಮೊದಲ ಟೆಸ್ಟ್‌ ಮ್ಯಾಚ್‌ ನಡೆಯುತ್ತಿದ್ದು, ಮೊಲದ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಮುಗ್ಗರಿಸುತ್ತಿದೆ. ಈಗಾಗಲೇ 230 ರನ್‌ಗಳನ್ನು ಭಾರಿಸಿರುವ ಇಂಡಿಯಾ ತಂಡ 06 ವಿಕೆಟ್‌ ಕಳೆದುಕೊಂಡಿದೆ.

ಇಂಗ್ಲೆಂಡ್ ತಂಡ ನೀಡಿದ 578 ರನ್ ಗಳ ಬೆನ್ನತ್ತಿರುವ ಟೀಂ ಇಂಡಿಯಾದ ಆಟ ಆರಂಭಿಸಿದ  ರೋಹಿತ್ ಶರ್ಮಾ ಮತ್ತು ಶುಬ್ ಮನ್ ಗಿಲ್ ಅತೀ ಕಡಿಮೆ ರನ್‌ಗಳಿಗೆ ತಮ್ಮ ವಿಕೆಟ್‌ ನೀಡಿದ್ದಾರೆ. ಆರು ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ಅವರು ಜೋಫ್ರಾ ಆರ್ಚರ್ ಬೌಲಿಂಗ್‌ಗೆ ಔಟ್‌ ಆಗಿದ್ದಾರೆ. ರೋಹಿತ್ ಶರ್ಮಾ ಬೆನ್ನಲ್ಲೇ 29 ರನ್ ಗಳಿಸಿ ಭರವಸಿದ ಶುಭ್ ಮನ್ ಗಿಲ್ ಕೂಡ ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಚೇತೇಶ್ವರ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 11 ರನ್ ಗಳಿಸಿ, ಡೋಮ್ ಬೆಸ್ಸ್ ಅವರ ಬೌಲಿಂಗ್‌ನಲ್ಲಿ ಔಟ್‌ ಆಗಿದ್ದಾರೆ. ಇದರ ಬೆನ್ನಲ್ಲೇ ಅಜಿಂಕ್ಯಾ ರಹಾನೆ ಕೂಡ ಡೋಮ್ ಬೆಸ್ ಬೌಲಿಂಗ್ ನಲ್ಲಿ 1 ರನ್ ಗಳಿಸಿ ಕ್ಯಾಚ್ ಔಟ್‌ ಆಗಿದ್ದಾರೆ.

ಚೇತೇಶ್ವರ್‌ ಪುಜಾರ 70 ರನ್‌ಗಳಿಗೆ ಓಟ್‌ ಆದರೆ, ರಿಷಬ್‌ ಪಟಾಣ್‌ 91 ರನ್‌ಗಳಿಗೆ ವಿಕೆಟ್‌ ನೀಡಿದ್ದಾರೆ.

ಇದೀಗ, ವಾಷಿಂಗ್ಟನ್‌ ಸುಂದರ್ ಮತ್ತು ರವಿಚಂದ್ರನ್ ಅಶ್ವಿನ್‌ ಜೊತೆಯಾಟ ಆಡುತ್ತಿದ್ದಾರೆ.

ಇದನ್ನೂ ಓದಿ: 2023ರ ವರೆಗೆ BCCI ಕ್ರಿಕೆಟ್‌ ವೇಳಾಪಟ್ಟಿ ಬಿಡುಗಡೆ: ಟೀಂ ಇಂಡಿಯಾಗೆ ಬ್ಯಾಕ್‌ ಟು ಬ್ಯಾಕ್‌ ಟೂರ್ನಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights