ರಾಜ್ಯದಲ್ಲಿ ಮತ್ತೆ 12 ದಿನಗಳ ಲಾಕ್‌ಡೌನ್‌? ಯಾವಾಗಿಂದ? ಯಡಿಯೂರಪ್ಪ ನಿರ್ಧಾರವೇನು?

ದಿನದಿಂದ ದಿನಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆಯುತ್ತಿದೆ, ನಿಯಂತ್ರಣಕ್ಕೆ ಸಿಗದೆ ಜನ ಸಮೂಹದ ನಡೆವೆ ವೈರಸ್ ವ್ಯಾಪಕವಾಗಿ ಹರಡುತ್ತಿದೆ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಹರಸಾಹಸ ಪಡುತ್ತಿರುವ ಸರಕಾರ, ವೈರಸ್ ಹರಡದಂತೆ ತಡೆಯಲು ಮತ್ತೆ ಲಾಕ್ ಡೌನ್ ಗೆ ಮೊರೆಹೊಗುವಂತೆ ಕಾಣುತ್ತಿದೆ..

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಆಗೋದು ಪಕ್ಕಾ ಅನ್ನುವಂತೆ ಕಾಣುತ್ತಿದೆ. ಜುಲೈ 6 ರಿಂದ ಜುಲೈ 18ರವರೆಗೆ ಅಂದರೆ 12 ದಿನಗಳ ಕಾಲ ಲಾಕ್‌ಡೌನ್ ಮಾಡಿ ಎಂದು ಟಾಸ್ಕ್‌ಫೋರ್ಸ್ ಸಮಿತಿ ವರದಿ ನೀಡಿದೆ. ಆದ್ರೆ, ಲಾಕ್‌ಡೌನ್ ಮಾಡ್ಬೇಕಾ, ಬೇಡ್ವಾ ಅನ್ನೋದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಒಂದು ವೇಳೆ ಸಿಎಂ ಯಡಿಯೂರಪ್ಪ ಒಪ್ಪಿದ್ರೆ, ಜುಲೈ 6 ರಿಂದ ಜುಲೈ 18ವರೆಗೆ ಸಂಪೂರ್ಣ ರಾಜ್ಯ ಲಾಕ್‌ಡೌನ್ ಆಗಲಿದೆ.

ಬೆಳಗ್ಗೆ ಅಷ್ಟೆ ಲಾಕ್‌ಡೌನ್ ಬಗ್ಗೆ, ಸಚಿವ ಆರ್‌ ಅಶೋಕ್ ಕೂಡ ಸುಳಿವು ನೀಡಿದ್ರು. ಜುಲೈ 7 ರಿಂದ ರಾಜ್ಯದಲ್ಲಿ ಕಠಿಣ ರೂಲ್ಸ್‌ ತರೋದಾಗಿ ಅಶೋಕ್ ಹೇಳಿದ್ದರು. ಅದರಂತೆ ಇದೀಗ, ಟಾಸ್ಕ್‌ ಫೋರ್ಟ್ ಸಮಿತಿ ಕೂಡ ಲಾಕ್‌ಡೌನ್ ಬಗ್ಗೆ ಸಿಎಂಗೆ ವರದಿಯನ್ನ ಶಿಫಾರಸ್ಸು ಮಾಡಿದೆ. ಜುಲೈ 5 ರಂದು ಭಾನುವಾರ ಸಂಡೇ ಲಾಕ್‌ಡೌನ್ ಇರುತ್ತೆ. ಜುಲೈ 6 ರಿಂದ 18ರವರೆಗೆ ಲಾಕ್‌ಡೌನ್ ಮಾಡಿದ್ರೆ, ಜುಲೈ 19 ಕೂಡ ಸಂಡೇ ಲಾಕ್‌ಡೌನ್ ಇರುತ್ತೆ, ಅಲ್ಲಿಗೆ ಒಟ್ಟು 14 ದಿನಗಳ ಕಾಲ ಲಾಕ್‌ಡೌನ್ ಆದಂತೆ ಆಗುತ್ತೆ.

ಈ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‌ಗೆ ಬರಬಹುದು ಅನ್ನೋದು ತಜ್ಞರ ಅಭಿಪ್ರಾಯ. 14 ದಿನಗಳ ಲಾಕ್‌ಡೌನ್‌ನಿಂದ ಕೊರೊನಾ ಚೈನ್‌ಲಿಂಕ್ ತಪ್ಪುತ್ತೆ. ಹೀಗಾಗಿ ಲಾಕ್‌ಡೌನ್ ಮಾಡಿ ಅಂತ ತಜ್ಞರು, ಸಲಹೆ ನೀಡಿದ್ದು. ಎಲ್ಲವೂ ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಸಮುದಾಯಕ್ಕೆ ಸಂಪೂರ್ಣವಾಗಿ ಹರಡದಂತೆ, ತಪ್ಪಿಸೋದಕ್ಕೆ ಲಾಕ್‌ಡೌನ್ ಒಂದೇ ಮಾರ್ಗ ಅನ್ನೋದು ತಜ್ಞರ ಅಭಿಪ್ರಾಯ. ಹಾಗಾದ್ರೆ, ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳೋಕೆ ಸಿಎಂ ನಿರ್ಧಾರ ಪ್ರಕಟಿಸೋವರೆಗೂ ಕಾಯಬೇಕಷ್ಟೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights