ಸಾಮಾಜಿಕ ಮಾಧ್ಯಮ-ಗಾಸಿಪ್: ಟ್ರಂಪ್-ಮೋದಿಯಂತಹ ಜನರು ಪ್ರಚಾರ ಪಡೆದುಕೊಂಡಿದ್ದು ಹೇಗೆ?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಕಾಣಿಸಿಕೊಂಡಿಲ್ಲ. ಟ್ರಂಪ್‌ ಮತ್ತು ಅವರ ಮಿತ್ರರಿಂದ ಪ್ರಚೋದಿಸಲ್ಪಟ್ಟ ಜನವರಿ 6 ರ ಕ್ಯಾಪಿಟಲ್ ಗಲಭೆಯ ನಂತರ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳು ಅವರ ಖಾತೆಗಳನ್ನು ನಿಷೇಧಿಸಿವೆ. ಇದರಿಂದಾಗಿ ಟ್ರಂಪ್‌ ದಿಢೀರ್‌ ಕಣ್ಮರೆಯಾಗಿದ್ದಾರೆ. ಅದೂ, ಜೋ ಬಿಡೆನ್ ಅವರು ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಟ್ರಂಪ್‌ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದಂತಾಗಿತ್ತು.

ಸಾಮಾಜಿಕ ಮಾಧ್ಯಮವು ಮೋದಿ-ಟ್ರಂಪ್‌ರಂತಹ ಜನಪ್ರಚಾರಿತ ವ್ಯಕ್ತಿಗಳನ್ನು ಪ್ರಚಾರಕ್ಕೆ ತರುತ್ತದೆ ಎಂದು ಇದರ ಅರ್ಥವೇ? ಅಥವಾ ಸಾಮಾಜಿಕ ಮಾಧ್ಯಮವು ಅಲ್ಲಿನ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಟ್ರಂಪ್‌ರಂತಹ ರಾಜಕಾರಣಿಗಳ ದ್ವೇ‍ಷದ ಹರಡುವಿಕೆಯ ಮೇಲೆ ನಿಗಾ ಇಡಲು ನಮಗೆ ಅನುವು ಮಾಡಿಕೊಡುತ್ತದೆ ಎಂದರ್ಥವೇ?

ಈ ಪ್ರಶ್ನೆಗೆ ಉತ್ತರಿಸಲು ಒಂದು ಮಾರ್ಗವೆಂದರೆ ಸಾಮಾಜಿಕ ಮಾಧ್ಯಮ ಏನು ಮಾಡುತ್ತದೆ ಎಂಬುದನ್ನು ನೋಡುವುದು. ಇದು ಒಂದು ರೀತಿಯ ರಾಜಕೀಯ ವೇದಿಕೆಯೇ ಅಥವಾ ಇದು ಗಾಸಿಪ್ ಆಗಿದೆಯೇ? ಎಂಬುದನ್ನು ಅರಿತುಕೊಳ್ಳಬೇಕು.

ಸಂವಹನ ಸಾಧನ

ರಾಜಕೀಯ ಪ್ರತಿಭಟನೆಗಳನ್ನು ಸಂಘಟಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಬಹುದು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದು ಸಂವಹನದ ಚಾನಲ್ ಆಗಿ ತನ್ನ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇದು ಸಾಮಾಜಿಕ ಮಾಧ್ಯಮವನ್ನು ರಾಜಕೀಯ ಕ್ರಿಯೆಯ ವೇದಿಕೆಯನ್ನಾಗಿ ಮಾಡುವುದಿಲ್ಲ. ಮಿಗಿಲಾಗಿ ಇದು ಬದಲಾವಣೆಯನ್ನು ಯೋಜಿಸಬಹುದಾದ, ಮಾತುಕತೆ ನಡೆಸುವಂತಹ ಸ್ಥಳವಾಗಿದೆ.

ವ್ಯಾಖ್ಯಾನದಂತೆ, ರಾಜಕೀಯ ಕ್ರಿಯೆಗೆ ಭೌತಿಕ ಉಪಸ್ಥಿತಿಯ ಅಗತ್ಯವಿದೆ. ಸಾಮಾಜಿಕ ಮಾಧ್ಯಮವು ದೂರವಾಣಿಯಂತಿದೆ. ದೂರವಾಣಿ ರಾಜಕೀಯ ವೇದಿಕೆಯಾಗಿದೆ ಎಂದು ಯಾರೂ ವಾದಿಸಿಲ್ಲ.

ಪರಿಣಾಮ, ಸಾಮಾಜಿಕ ಮಾಧ್ಯಮವು ದೂರವಾಣಿಯಂತಹ ಸಂವಹನ ಸಾಧನವಾಗಿದೆ – ಆದರೆ, ದೂರವಾಣಿ ಮುಖ್ಯವಾಗಿ ಒನ್‌ ಟು ಒನ್‌ ಸಂವಹನದ ಮೂಲವಾಗಿತ್ತು. ವಾಟ್ಸಾಪ್ ಅಥವಾ ಜೂಮ್‌ನಂತಹ ಡಿಜಿಟಲೀಕೃತ ಸಾಮಾಜಿಕ ಮಾಧ್ಯಮಗಳಿಂದಾಗಿ ನಾವು ಅನೇಕ ಜನರನ್ನು ಒಂದೇ ಸಮಯದಲ್ಲಿ ಒಳಗೊಳ್ಳಬಹುದಾಗಿದೆ.

ಇದನ್ನೂ ಓದಿ: ಮೋದಿ ಆಡಳಿತದಲ್ಲಿ ಭಾರತಕ್ಕೆ ವಿಶ್ವ ಮಟ್ಟದಲ್ಲಿ ‘ಭವ್ಯ’ ಅವಮಾನ: ಬೃಂದಾ ಕಾರಟ್

ಸಾಮಾಜಿಕ ಮಾಧ್ಯಮದ ಪ್ರಮುಖ “ಪ್ರಯೋಜನ”ವೆಂದರೆ, ಇದು ಸಾಮೂಹಿಕ ಸಂವಹನವನ್ನು ಸಕ್ರಿಯಗೊಳಿಸುತ್ತದೆ. ನೀವು ಒಂದೇ ಸಮಯದಲ್ಲಿ ಐದು ಜನರಿಗೆ ಕರೆ ಮಾಡಬಹುದು ಅಥವಾ ಸಂದೇಶ ಕಳುಹಿಸಬಹುದು. ನೀವು ಫೇಸ್‌ಬುಕ್ ಅಥವಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಬಹುದು. ಏಕಕಾಲದಲ್ಲಿ ಸಾವಿರಾರು ಜನರನ್ನು ತಲುಪಬಹುದು.

ಆದರೆ ಈ “ಅನುಕೂಲ” ಸಹ ಸಂವಹನದ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಈಗ ಗಾಸಿಪ್(ಗಾಳಿಸುದ್ದಿ)‌ಗಳಂತೆ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ಗಾಸಿಪ್‌ನ ವಿಷಯವೆಂದರೆ ಅದು ವಿಶ್ವಾಸಾರ್ಹವಾದುದು ಅಥವಾ ಅಲ್ಲ, ಅದು ನಿಜ ಅಥವಾ ಸುಳ್ಳು. ಇಂತಹ ಗಾಸಿಪ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ತ್ವರಿತವಾಗಿ ನಿಲ್ಲಿಸಲೂ ಸಾಧ್ಯವಿಲ್ಲ. ಅದು ತನ್ನದೇ ರೀತಿಯಲ್ಲಿ ಪ್ರಸಾರವಾಗುತ್ತದೆ. ಮತ್ತು ಅದನ್ನು ಆತ್ಮೀಯರ ನಡುವೆ ಹಂಚಿಕೊಳ್ಳಲಾಗಿದೆ. ಅದರ ವಸ್ತುನಿಷ್ಟತೆ ಅಸ್ಪಷ್ಟವಾಗಿರುವಂತೆ, ಅದರ ಮೂಲವೂ ಅಪ್ರಸ್ತುತವಾಗುತ್ತದೆ. ಇಲ್ಲಿ ಎರಡು ವಿಷಯಗಳು ಮುಖ್ಯವಾಗುತ್ತವೆ: 1. ನಿಮಗೆ ಗಾಸಿಪ್ ಅನ್ನು ರವಾನಿಸಿದವರು ಯಾರು? 2. ನೀವು ಈಗಾಗಲೇ ಅದನ್ನು ನಂಬಲು ಮುಂದಾಗಿದ್ದೀರಿ. ಎಂಬುದು. ನಿಮ್ಮ ಆತ್ಮೀಯರು ಗಾಸಿಪ್‌ಗಳನ್ನು ನಿಮಗೆ ಕಳಿಸಿದರೆ ಅದನ್ನು ನೀವು ಬೇಗನೇ ನಂಬುತ್ತೀರಿ ಇದು ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್‌ ರವಾನೆಗೆ ಬಹಳ ಸಹಕಾರಿಯಾಗಿದೆ.

ಸಾಮಾಜಿಕ ಮಾಧ್ಯಮ ಮತ್ತು ಗಾಸಿಪ್‌

ಸಾಮಾಜಿಕ ಮಾಧ್ಯಮದ ಸ್ವರೂಪವು ಗಾಸಿಪ್‌ಗಳತ್ತ ಒಲವು ತೋರುತ್ತದೆ: ಮಾಹಿತಿಯ ಮೂಲವನ್ನು ಇತ್ಯರ್ಥಪಡಿಸಲಾಗದ ಕಾರಣ ಮತ್ತು ಮಾಹಿತಿಯನ್ನು ಎಲ್ಲಿಂದಲೋ-ಯಾರೋ ಹಂಚಿಕೊಳ್ಳುವುದರಿಂದ ಅದನ್ನು ನಂಬುವುದು ವೈಯಕ್ತಿಕ ನಂಬಿಕೆಯ ವಿಷಯವಾಗಿದೆ.

ಇದು ವಿಮರ್ಶಾತ್ಮಕ ಚಿಂತನೆಯನ್ನು ಒಳಗೊಂಡಿರುವುದಿಲ್ಲ. ಅದು ಸಂವಹನ ಮಾಡುತ್ತದೆ. ಅದರ ಮಾನ್ಯತೆಯನ್ನು ಪರೀಕ್ಷಿಸದೆ ಯಾರು ಏನು ಹೇಳುತ್ತಾರೋ, ಅದನ್ನು ನಾವೂ ನಂಬುತ್ತೇವೆ. ಇಷ್ಟ ಪಡುತ್ತೇವೆ, ಹಂಚಿಕೊಳ್ಳುತ್ತೇವೆ. ಆದರೆ, ಅದು ನಮ್ಮ ಮನೆ-ಕುಟುಂಬವನ್ನು ದಾಟಿ, ಅಪರಿಚಿತರ ನಡುವೆ “ರಾಜಕೀಯ”, “ಸಾಮಾಜಿಕ”, “ಆರ್ಥಿಕ” ಮತ್ತು ಇತರ ರೀತಿಯ “ಮಾತುಕತೆ”ಯನ್ನು ಹುಟ್ಟು ಹಾಕುತ್ತದೆ. ಕೆಲವೊಮ್ಮೆ ಲಕ್ಷಾಂತರ ಜನರನ್ನೂ ತಲುಪಿಸುತ್ತದೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳು: ಗೆದ್ದು ಸೋಲುತ್ತಿರುವ ಮೋದಿ; ಸೋತು ಗೆಲ್ಲುತ್ತಿದ್ದಾರೆ ರೈತರು!

ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ಏನೆಲ್ಲಾ ಲಾಭಗಳು: ವಿಶ್ಲೇಷಣೆ, ಚರ್ಚೆ, ವ್ಯಾಖ್ಯಾನ, ಸಂವಹನವಲ್ಲ. ಆದರೂ ಇದು ತರಗತಿಯಲ್ಲಿ ಅಥವಾ ದೂರವಾಣಿಯಲ್ಲಿ ನಡೆಯುವ ರೀತಿಯಲ್ಲಿಯೇ ನಡೆಯುತ್ತದೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಷಯಗಳನ್ನು ನಂಬುತ್ತೇವೆ ಏಕೆಂದರೆ ನಾವು ಅವುಗಳನ್ನು ನಂಬಬೇಕೆಂದು ಬಯಸುತ್ತೇವೆ. ಯಾರೊಬ್ಬರು ತನ್ನ ನೆರೆಹೊರೆಯವರ ಬಗ್ಗೆ ಗಾಸಿಪ್ ಮಾಡುವುದನ್ನು ನಾವು ನಂಬುತ್ತೇವೆ. ಏಕೆಂದರೆ ನಾವೂ ಆ ಗಾಸಿಪ್‌ ಮಾಡಲು ಬಯಸುತ್ತೇವೆ.

ಮೋದಿ-ಟ್ರಂಪ್‌ರಂತಹ ಜನಪ್ರಿಯ ವ್ಯಕ್ತಿಗಳು ಇಂತಹವುಗಳಿಂದ ಬೆಳವಣಿಗೆ ಹೊಂದುತ್ತಾರೆ. ಅವರು ನಿಮ್ಮ ಮುಂದೆ ಯಾವುದೇ ವಾದಗಳನ್ನು ಅಥವಾ ಕಾರಣಗಳನ್ನು ನೀಡುವುದಿಲ್ಲ. ಅವರು ಸತ್ಯಗಳ ಬಗ್ಗೆ ಹೆದರುವುದಿಲ್ಲ. ಅವರು ನಿಮಗಾಗಿ ಸರಿಯಾದ ಗುಂಡಿಗಳನ್ನು ತೋಡುತ್ತಿದ್ದಾರೆ. ಅವು ನಿಮ್ಮ ಕುಂದುಕೊರತೆ, ಹತಾಶೆಗಳು, ಅಸಮಾಧಾನಗಳು, ವೈಫಲ್ಯಗಳು, ಆಕಾಂಕ್ಷೆಗಳು, ಕೋಪ ಇತ್ಯಾದಿಗಳ ಗುಂಡಿಗಳು.

ಟ್ರಂಪ್‌ನಂತಹ ಜನರು ಬುದ್ಧಿವಂತರು ಮತ್ತು ಇದನ್ನು ಬಳಸಲು ಸಾಕಷ್ಟು ವ್ಯವಸ್ಥಿತ ತಂಡವನ್ನು ಹೊಂದಿರುತ್ತಾರೆ. ಆ ತಂಡ ತಮಗೆ ಬೇಕಾದ ರೀತಿಯ ಗಾಸಿಪ್‌ಗಳನ್ನು ಸೃಷ್ಟಿಸುತ್ತದೆ. ಅವುಗಳು ಸತ್ಯಆಲೋಚನೆಗಳನ್ನು ಹೊಂದಿರುವುದಿಲ್ಲ. ಆದರೆ ಹೆಚ್ಚು ವ್ಯಕ್ತಿನಿಷ್ಠವಾಗುತ್ತವೆ.

ಟ್ರಂಪ್‌ರಂತಹ ಶ್ರೀಮಂತ ವ್ಯಕ್ತಿಯ ಅಸಮಾಧಾನದ ನಿರ್ಣಯವು ನಿಮ್ಮ ನಿರ್ಣಯದಂತೆಯೇ ಆಗುವುದಿಲ್ಲ. ಆದರೆ ನೀವು ಅದನ್ನು ಅರಿತುಕೊಳ್ಳುವುದಿಲ್ಲ, ಅಥವಾ ಆ ಬಗ್ಗೆ ತಿಳಿಯಲು ಬಯಸುವುದಿಲ್ಲ. ಈ ವಿಶಾಲ ಜಗತ್ತಿನಲ್ಲಿ ನೀವು ಗಾಸಿಬ್‌ಅನ್ನು ಹುಡುಕಲು, ನಂಬಲು ಮತ್ತು ಅವರಿಗೆ ಮತ ಚಲಾಯಿಸಲು ಸಾಮಾಜಿಕ ಮಾಧ್ಯಮವು ನಿಮಗೆ ವೇದಿಕೆಯನ್ನು ಮಾಡಿಕೊಟ್ಟಿದೆ. ಈ ಕಾರಣಕ್ಕಾಗಿಯೇ ಟ್ರಂಪ್‌ನಂತಹ ಜನರು ಭಾರೀ ಪ್ರಚಾರ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣವೇನು?

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights