ವಿಡಿಯೋ: BJP ಮುಖಂಡನ ಮೇಲೆ ಇಂಕ್‌ ಸುರಿದು- ಸೀರೆ ತೊಡಿಸಿ ಅವಮಾನ ಮಾಡಿದ ಶಿವಸೇನಾ ಕಾರ್ಯಕರ್ತರು!

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಟೀಕಿಸಿದ ಸೋಲಾಪುರ ಜಿಲ್ಲೆಯ ಬಿಜೆಪಿ ಮುಖಂಡರ ಮೇಲೆ ಶಿವಸೇನೆ ಕಾರ್ಯಕರ್ತರು ಇಂಕ್‌ ಸುರಿದು ಅವಮಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಿಜೆಪಿ ಮುಖಂಡನ ತಲೆಯ ಮೇಲೆ ಬಾಟಲಿಗಳಲ್ಲಿದ್ದ ಇಂಕ್‌ ಸುರಿದು, ಆತನನ್ನು ಎಳೆದಾಡಿ, ಸಾರ್ವಜನಿಕರ ಮಧ್ಯೆ ಸೀರೆ ಧರಿಸುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಅದನ್ನು ತಡೆಯಲು ಯತ್ನಿಸಿದರೂ ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಿದ್ದು, ವಿಡಿಯೋ ವೈರಲ್‌ ಆಗಿದೆ.

“ಬಿಜೆಪಿ ಮುಖಂಡ ಕಟೇಕರ್‌ ಅವರು ನಮ್ಮ ನಾಕಯರ ವಿರುದ್ಧ ಆಕ್ಷೇಪಾಹ್ ಪದಗಳನ್ನು ಬಳಸಿದ್ದಾರೆ. ಇದು ಸೇನಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಪೂಜ್ಯ ಭಾವನೆಯಿಂದ ನೋಡುವ ವ್ಯಕ್ತಿಯ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡುವುದನ್ನು ಕಾರ್ಯಕರ್ತರು ಸಹಿಸುವುದಿಲ್ಲ. ಬಿಜೆಪಿ ಮುಖಂಡನ ಮೇಲಿನ ದಾಳಿಯ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಈ ಘಟನೆಗಾಗಿ ನಾವು ಜೈಲಿಗೆ ಹೋಗಲು ಸಿದ್ದರಿದ್ದೇವೆ” ಎಂದು ಶಿವಸೇನಾ ಮುಖಂಡ ಪುರುಶೋತ್ತಮ್‌ ಬಾರ್ಡೆ ಹೇಳಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಮುಖಂಡ ರಾಮ್ ಕದಮ್ ಈ ಘಟನೆಯನ್ನು ಖಂಡಿಸಿದ್ದಾರೆ. ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮಧ್ಯಪ್ರವೇಶಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕದಮ್‌ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ನಡುವೆ ಪಂಜಾಬ್‌ ಚುನಾವಣೆ: BJPಗೆ ಸೋಲೆಂದು ಕೇಸರಿ ಮುಖಂಡರ ಸ್ವತಂತ್ರ ಸ್ಪರ್ಧೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights