BSY cabinet : ಮಂತ್ರಿಗಿರಿಗೆ ಗೆದ್ದ ಅನರ್ಹರ ಕಾಯುವಿಕೆಗೆ ಸದ್ಯಕ್ಕಿಲ್ಲ ತೆರೆ..

ಉಪಚುನಾವಣೆ ಗೆದ್ದು ಮೂರು ವಾರ ಕಳೆದರೂ ಅನರ್ಹರಾಗಿದ್ದ ಶಾಸಕರಿಗೆ ಮಂತ್ರಿ ಭಾಗ್ಯ ಇನ್ನೂ ಮರೀಚಿಕೆಯೇ ಆಗಿದೆ. ಧರ್ನುಮಾಸದ ನೆಪವೊಡ್ಡಿ ಮುಂದಕ್ಕೆ ಹಾಕಲಾಗಿದ್ದ ಸಂಪುಟ ವಿಸ್ತರಣೆ ಸಂಕ್ರಾಂತಿಗೂ ಡೌಟೆ ಎಂಬಂತಾಗಿದೆ.
ಜನವರಿ ಮೂರನೇ ವಾರದಲ್ಲಿ ಸಿಎಂ ಯಡಿಯೂರಪ್ಪ ವಿದೇಶ ಪ್ರಯಾಣಕ್ಕೆ ತೆರಳುತ್ತಿದ್ದು, ಅಲ್ಲಿಂದ ವಾಪಸಾದ ಬಳಿಕವಷ್ಟೇ ಸಂಪುಟ ವಿಸ್ರಣೆ ಕಸರತ್ತು ಆರಂಭವಾಗಬಹುದು ಎಂಬ ಮಾಹಿತಿ ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ.

ಪಕ್ಷದ ದಿಲ್ಲಿ ನಾಯಕರು ಪೌರತ್ವ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿರುವುದನ್ನೇ ನೆಪವಾಗಿಟ್ಟುಕೊಂಡು ಸಂಪುಟ ವಿಸ್ತರಣೆ ಬಗೆಗೆ ಹೈಕಮಾಂಡ್ ಜೊತೆ ಬಿಎಸ್ವೈ ಈವರೆಗೂ ಯಾವುದೇ ರೀತಿಯ ಚರ್ಚ ನಡೆಸಿಲ್ಲ. ಮತ್ತು ಈಗ ವಿದೇಶ ಪ್ರವಾಸಕ್ಕೆ ಮುಂದಾಗಿರುವುದು ವಿಸ್ತರಣೆಯನ್ನು ಮತ್ತೂ ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ.

ಡಾವೋಸ್‍ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿರುವ ಯಡಿಯೂರಪ್ಪ ನಂತರ ಯೂರೋಪ್ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಇದೇ ಕಾರಣಕ್ಕೆ ವಿಧಾನ ಮಂಡಲದ ಅಧಿವೇಶನವನ್ನು ಜನವರಿಗೆ ಬದಲು ಫೆಬ್ರುವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights