ಮುಂಬೈ ತಾಜ್‌ ಹೋಟೆಲ್‌ಗಳಿಗೆ ಭಯೋತ್ಪಾದಕ ಕರೆಗಳು; 26/11 ರೀತಿಯಲ್ಲಿ ದಾಳಿಯ ಬೆದರಿಕೆ

ದಕ್ಷಿಣ ಮುಂಬೈನಲ್ಲಿರುವ ಎರಡು ತಾಜ್ ಹೋಟೆಲ್‌ಗಳಿಗೆ ನಿನ್ನೆ ರಾತ್ರಿ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ. ಕರೆ ಮಾಡಿದವರು 26/11 ದಾಳಿಯಂತೆಯೇ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.

ಕರೆಗಳ ನಂತರ ಹೋಟೆಲ್‌ ಉದ್ಯಮವು ಆತಂಕಕ್ಕೆ ಒಳಗಾಗಿದ್ದು, ಎರಡೂ ಹೋಟೆಲ್‌ಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿನ್ನೆ (ಸೋಮವಾರ) ರಾತ್ರಿ ಕೊಲಾಬಾದ ತಾಜ್ ಮಹಲ್ ಪ್ಯಾಲೇಸ್‌ ಮತ್ತು ಬಾಂದ್ರಾದಲ್ಲಿನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ಗಳ ಲ್ಯಾಂಡ್‌ಲೈನ್ ಫೋನ್‌ಗಳಿಗೆ ಕರೆಗಳು ಬಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ಹೋಟೆಲ್‌ಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಒದಗಿನಲಾಗಿಸಲಾಗಿದೆ. ತನಿಖೆ ನಡೆಸುತ್ತಿದ್ದು, ಕರೆ ಮಾಡಿದವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಗುರಿಯಿಟ್ಟಿದ್ದ ಮುಂಬೈನ ಸ್ಥಳಗಳಲ್ಲಿ ಕೊಲಾಬಾದ ತಾಜ್ ಮಹಲ್ ಪ್ಯಾಲೇಸ್‌ ಹೋಟೆಲ್‌ ಕೂಡ ಒಂದಾಗಿತ್ತು. ಭಾರಿ ಶಸ್ತ್ರಸಜ್ಜಿತ ಲಷ್ಕರ್-ಎ-ತೈಬಾ ಭಯೋತ್ಪಾದಕರು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣ ಮತ್ತು ಲಿಯೋಪೋಲ್ಡ್ ಕೆಫೆಯ ಮೇಲೆ ದಾಳಿ ನಡೆಸಿದ್ದರು. ಮೂರು ದಿನಗಳ ದಾಳಿಯಿಂದಾಗಿ ಕನಿಷ್ಠ 174 ಜನರು ಸವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ನವೆಂಬರ್ 2008 ರಲ್ಲಿ ನಡೆದ ದಾಳಿಯಲ್ಲಿ ಮರಣ ಹೊಂದಿದವರಲ್ಲಿ ನಗರವನ್ನು ರಕ್ಷಿಸಲು ಭಯೋತ್ಪಾದಕರೊಂದಿಗೆ ಸೆಣೆಸಾಡಿದ್ದ ಹಲವಾರು ಪೊಲೀಸರು ಮತ್ತು ಎನ್ಎಸ್‌ಜಿ (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್) ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights