ಕೊರೊನಾ ಉಸ್ತುವಾರಿಗೆ ಬಿಜೆಪಿಯಲ್ಲಿ ಕಿತ್ತಾಟ! ಆರ್‌.ಅಶೋಕ್‌ ಮತ್ತು ಸುಧಾರಕ್ ನಡುವೆ ಜಟಾಪಟಿ!

ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಸರಕಾರದಲ್ಲಿ ಎಲ್ಲವು ಸರಿಇಲ್ಲ ಅನ್ನುವುದು ಮತ್ತೊಮ್ಮೆ ಸಾಭೀತಾಗಿದೆ..  ಕರೋನಾ ವೈರಸ್ ಉಸ್ತುವಾರಿ ಅನ್ನುವ ವಿಚಾರದಲ್ಲಿ ಸಂಫೂಟದ ಸಚಿವರ ಮಧ್ಯ ಬಿನ್ನಾಭಿಪ್ರಾಯ ಬಯಲಿಗೆ ಬಂದಿದೆ.. ಬೆಂಗಳೂರು ಕೊರೊನಾ ಉಸ್ತುವಾರಿ ನನ್ನದೇ ಪೋರ್ಟ್ ಪೋಲಿಯೋ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕ್ಲೇಮ್ ಮಾಡಿದ್ರೆ, ಸಿಎಮ್ ನನಗೆ ವಹಿಸಿದ್ದಾರೆ ಅಂತ ಕಂದಾಯ ಸಚಿವ ಆರ್.ಅಶೋಕ್ ವಾದ…

ಕಂದಾಯ ಸಚಿವ ಹಾಗೆ ಕೋವಿಡ್ ಉಸ್ತುವಾರಿ ಸಚಿವ ಆರ್.ಅಶೋಕ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ನಡುವೆ ಎಲ್ಲವೂ ಸರಿ ಇಲ್ಲ . ಬೆಂಗಳೂರು ಕೋವಿಡ್ ಉಸ್ತುವಾರಿ ನನ್ನದೇ ಪೋರ್ಟ್ ಪೋಲಿಯೋ, ಆದ್ರೆ ಕಂದಾಯ ಸಚಿವರಿಗೂ ಸ್ವಲ್ಪ ನೋಡಿಕೊಳ್ಳಲು ಸಿಎಂ ಹೇಳಿದ್ದಾರೆ ಅಷ್ಟೇ ಎಂದು ಸಚಿವ ಡಾ.ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಅನುಭವಿ ಕಂದಾಯ ಸಚಿವರು ತಮ್ಮ ಹೆಚ್ಚುವರಿ ಜವಾಬ್ದಾರಿಯನ್ನ ಬಹಳ ಸಮರ್ಥವಾಗಿ ನೋಡಿಕೊಂಡಿದ್ದಾರೆ. ಸಾಮೂಹಿಕವಾಗಿ ನಾವೆಲ್ಲ ಉಸ್ತುವಾರಿ ನೋಡಿಕೊಳ್ಳುತ್ತೇವೆ. ಆದ್ರೆ, ಸಿಎಂ ನನಗೆ ಪೋರ್ಟ್ ಪೋಲಿಯೋ ಕೊಟ್ಟಿದ್ದಾರೆ, ಇಲ್ಲಿ ಯಾರಿಗೂ ಗೊಂದಲ ಇಲ್ಲ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ತಮ್ಮ ಮಾತಿನುದ್ದಕ್ಕೂ ಎಲ್ಲೂ ಕೂಡ ಆರ್.ಅಶೋಕ್ ಹೆಸರನ್ನ ಹೇಳದೆ ಪದೇ ಪದೇ ಕಂದಾಯ ಸಚಿವರು ಅಂತ ಉಲ್ಲೇಖಿಸಿದ್ದು ತುಂಬಾನೆ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ಕೊನೆಯಲ್ಲಿ ಬೆಂಗಳೂರು ಕೋವಿಡ್ ಉಸ್ತುವಾರಿ ನಾನೇ ಎಂದು ಸುಧಾಕರ್ ಪುನರುಚ್ಚರಿಸಿದ್ರು.

ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ಕೋವಿಡ್ ಉಸ್ತುವಾರಿ ನೀಡಿದ ನಂತರ ಸಚಿವ ಸುಧಾಕರ್ ಅವರಿಂದ ಟೀಕೆಗೊಳಪಟ್ಟಿದ್ದರು. ತಮಗಾಗಿರುವ ಅಸಮಾಧಾನವನ್ನು ಸಾರ್ವಜನಿಕವಾಗಿ ಸಚಿವ ಸುಧಾಕರ್ ಬಹಿರಂಗಪಡಿಸಿದ್ದರು. ನೀತಿ ಕಥೆಯೊಂದರ ಸಾಲುಗಳನ್ನ ಟ್ವೀಟ್ ಮಾಡಿದ್ದರು. ಆ ಬಳಿಕ ಅದಕ್ಕೆ ಪ್ರತಿಕ್ರಿಯಿಸಿದ್ದ ಕಂದಾಯ ಸಚಿವ ಆರ್.ಅಶೋಕ್, ಡಾ. ಸುಧಾಕರ್ ಅವರ ಕುಟುಂಬಸ್ಥರಿಗೆ ಕೋರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸುಧಾಕರ್ ಅವರು ಕೂಡ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ, ಹೀಗಾಗಿ ಬೆಂಗಳೂರು ಕೋವಿದ್ ಉಸ್ತುವಾರಿಯನ್ನು ನನಗೆ ವಹಿಸಿದ್ದಾರೆ ಎಂದಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights