ಪಿಂಚಣಿ ಹಣ ನೀಡಲು ನಿರಾಕರಿಸಿದ ಬ್ಯಾಂಕ್; ನೂರು ವರ್ಷದ ತಾಯಿಯನ್ನು ಮಂಚದಲ್ಲಿಯೇ ಎಳೆದೊಯ್ದ ಮಗಳು

ವ್ಯಕ್ತಿಯ ಹಾಜರಿ ಇಲ್ಲದೆ ಹಣವನ್ನು ನೀಡಲಾಗುವುದಿಲ್ಲ ಎಂದು ಪಿಂಚಣಿ ಹಣವನ್ನು ನೀಡಲು  ಬ್ಯಾಂಕ್‌ ಅಧಿಕಾರಿಗಳು ನಿರಾಕರಿಸಿದ್ದರು. ಆ ಕಾರಣಕ್ಕಾಗಿ ಮಹಿಳೆಯೊಬ್ಬರು ತನ್ನ ನೂರು ವರ್ಷದ ತಾಯಿಯನ್ನು ಬ್ಯಾಂಕ್‌ವೆರೆಗೂ ಬಿಸಿಲಿನಲ್ಲಿಯೇ ಎಳೆಯೊಯ್ದ ಘಟನೆ ಒಡಿಶಾದಲ್ಲಿ ನಡೆದಿದೆ.

ಇದು ಕೊರೊನಾ ವೈರಸ್‌ ಸಾಂಕ್ರಾಮಿಕದ ನಂತರ ಒಡಿಶಾದ ಬಡತನದ, ಹತಾಶೆಯ ಮತ್ತು ಅಸೂಕ್ಷ್ಮ ವ್ಯವಸ್ಥೆಯ ಮತ್ತೊಂದು ಯಾತನಾಮಯ ಚಿತ್ರಣವನ್ನು ತೆರೆದಿಟ್ಟಿದ್ದು, ಘಟನೆಗೆ ನೂರಾರು ಜನ ಮರುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ ಬ್ಯಾಂಕ್‌ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ.

ಘಟನೆಯು ಭುವನೇಶ್ವರದಿಂದ 433 ಕಿ.ಮೀ ದೂರದಲ್ಲಿರುವ ನುವಾಪಾ ಜಿಲ್ಲೆಯಲ್ಲಿ ವರದಿಯಾಗಿದ್ದು, ವಯಸ್ಸಾದ ಮಹಿಳೆಯೊಬ್ಬಳು ತನ್ನ 100 ವರ್ಷದ ತಾಯಿಯನ್ನು ತನ್ನ ಪಿಂಚಣಿ ಹಣವನ್ನು ಹಿಂಪಡೆಯಲು ಮಂಚದ ಮೇಲೆ ಮಲಗಿಸಿ ಎಳೆದೊಯ್ಯುವ ವಿಡಿಯೋ ವೈರಲ್‌ ಆಗಿದೆ.

ಘಟನೆ ಕುರಿತು “ಇದನ್ನು ಪರಿಶೀಲಿಸುವಂತೆ ರಾಜ್ಯದ ನವೀನ್ ಪಟ್ನಾಯಕ್ ಸರ್ಕಾರವನ್ನು ಕೇಳಿಕೊಂಡಿದ್ದೇನೆ” ಎಂದು ಬಿಜೆಪಿಯ ನುವಾಪಾ ಶಾಸಕ ರಾಜು ಧೋಲಾಕಿಯಾ ಹೇಳಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಬಿಟ್ಟು ಶಾಸಕರಾಗಿ ಪಲಾಯನ ಮಾಡುತ್ತಿದ್ದಾರೆ ಎಂದು ಹಲವಾರು ಜನ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಮಹಿಳೆಯೊಬ್ಬರನ್ನು ಮಂಚದ ಮೇಲೆ ಮಲಗಿಸಿ ಎಳೆದೊಯ್ಯುವ ದೃಶ್ಯವನ್ನು ನೋಡಿದ್ದೇನೆ. ಅವರ ಪಿಂಚಣಿ ಹಣವನ್ನು ಹಿಂಪಡೆಯಲು ಬ್ಯಾಂಕಿಗೆ ಕರೆದೊಯ್ಯಲಾಯಿತು. ಈ ಬಗ್ಗೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಸರ್ಕಾರವನ್ನು ಕೋರುತ್ತೇನೆ” ನುವಾಪಾ ಶಾಸಕ ಧೋಲಾಕಿಯಾ ಭಾನುವಾರ ಹೇಳಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಪಿಂಚಣಿ ಹಣ ನೀಡಲು ನಿರಾಕರಿಸಿದ ಬ್ಯಾಂಕ್; ನೂರು ವರ್ಷದ ತಾಯಿಯನ್ನು ಮಂಚದಲ್ಲಿಯೇ ಎಳೆದೊಯ್ದ ಮಗಳು

  • September 14, 2020 at 2:28 pm
    Permalink

    An intriguing discussion is worth comment. I believe that you need to
    write more about this subject, it may not be a taboo subject but usually folks don’t discuss such issues.
    To the next! Cheers!!

    Reply

Leave a Reply

Your email address will not be published.

Verified by MonsterInsights