ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಚಿನ್ನದ ಪದಕ ಗೆದ್ದ ಕುಸ್ತಿಪಟು ಪ್ರಿಯಾ ಮಲಿಕ್!

ಟೋಕಿಯೋ ಒಲಿಂಪಿಕ್ಸ್‌ ನಡೆಯುತ್ತಿರುವ ಸಂದರ್ಭದಲ್ಲಿಯೇ, ಮೊತ್ತೊಂದೆಡೆ ಭಾರತದ ಕುಸ್ತಿ ಕ್ರೀಡೆಯ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಕುಸ್ತಿಪಟು ಪ್ರಿಯಾ ಮಲಿಕ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಹಂಗೇರಿಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಅವರು ಚಿನ್ನವನ್ನು ಗೆದ್ದಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಹೆಮ್ಮೆ ಪಡಿಸಿದ್ದಾರೆ.

ಟೋಕಿ ಒಲಿಂಪಿಕ್ಸ್ 2020 ರಲ್ಲಿ ನಿನ್ನೆ ನಡೆದ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದಿದ್ದಾರೆ. ಇದಾದ ಒಂದು ದಿನದ ನಂತರ ಪ್ರಿಯಾ ಮಲಿಕ್‌ ಅವರು ಚಿನ್ನ ಗೆದ್ದು ದೇಶಕ್ಕೆ ವೈಭವ ತಂದಿದ್ದಾರೆ.

 

ಪ್ರಿಯಾ ಅವರ ದೊಡ್ಡ ಸಾಧನೆಗೆ ನಾವು ಅಭಿನಂದಿಸುತ್ತೇವೆ ಮತ್ತು ಅವರ ಮುಂದಿನ ಆಟಗಳಿಗೆ ನಾವು ಶುಭ ಹಾರೈಸುತ್ತೇವೆ.

Spread the love

Leave a Reply

Your email address will not be published. Required fields are marked *