ಟೋಕಿಯೊ ಒಲಿಂಪಿಕ್ಸ್: ಪಿ.ವಿ ಸಿಂಧು ಭರ್ಜರಿ ಆರಂಭ; ಮೊದಲ ಆಟದಲ್ಲೇ ಭಾರೀ ಅಂತರದ ಗೆಲುವು!

ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವಿಭಾಗದ ಬ್ಯಾಡ್‌ಮಿಂಟನ್‌ ಸಿಂಗಲ್ಸ್‌ನಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೋಲಿಕಾರ್ಪೋವಾ ಅವರ ವಿರುದ್ಧ ಆರಾಮದಾಯಕವಾಗಿ ಗೆದ್ದಿದ್ದಾರೆ. 58 ನೇ ಶ್ರೇಯಾಂಕದ ಪೋಲಿಕಾರ್ಪೋವಾ ಅವರನ್ನು 21-7 ಮತ್ತು 21-10ರ ಅಂತರದಲ್ಲಿ ಸೋಲಿಸಿದ್ದು, ಈ ಮೂಲಕ ಅವರು ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದಾರೆ.

ಬ್ಯಾಡ್‌ಮಿಂಡನ್‌ ಆಟದಲ್ಲಿ ವಿಶ್ವದ 7 ನೇ ಸ್ಥಾನ ಪಡೆದುಕೊಂಡಿರುವ ಸಿಂಧು ಮುಂದಿನ ಹಂತದಲ್ಲಿ ಹಾಂಗ್ ಕಾಂಗ್‌ನ ವಿಶ್ವದ 34 ನೇ ಶ್ರೇಯಾಂಕದ ಚೆಯುಂಗ್ ನ್ಗಾನ್ ಯಿ ವಿರುದ್ದ ಆಡಲಿದ್ದಾರೆ.

“ಮಾನಸಿಕವಾಗಿ, ದೈಹಿಕವಾಗಿ ಮತ್ತು ಅನುಭವದ ಪ್ರಕಾರ ಬಹಳಷ್ಟು ಬದಲಾಗಿದೆ. ಟೋಕಿಯೊ 2020 ಕ್ಕೆ ಬರುವುದು ಸಂಪೂರ್ಣವಾಗಿ ಭಿನ್ನವಾಗಿದೆ” ಎಂದು ಸಿಂಧು ಹೇಳಿದ್ದಾರೆ.

ಅವರು 2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಇದನ್ನೂ ಓದಿ: ಟೋಕಿಯೋ ಒಲಂಪಿಕ್‌: ಬೆಳ್ಳಿ ಪದಕ ಗೆದ್ದ ಭಾರತದ ಮೀರಾಬಾಯಿ ಚಾನು!

Spread the love

Leave a Reply

Your email address will not be published. Required fields are marked *