100 ಪ್ರಯಾಣಿಕರಿದ್ದ ಪಾಕಿಸ್ತಾನ ವಿಮಾನ ಅಪಘಾತ: ಕರಾಚಿಯ ವಸತಿ ಪ್ರದೇಶದ ಮೇಲೆ ಪತನ

ಲಾಹೋರ್‌ನಿಂದ ಕರಾಚಿಗೆ ಹೋಗುವ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನವು ಇಳಿಯುವ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ. ವಿಮಾನವು ಸುಮಾರು 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ವಸತಿ ವಸಾಹತು ಮೇಲೆ ಪಿಐಎ ವಿಮಾನ ಅಪಘಾತಕ್ಕೀಡಾಗಿದೆ. ಹಾನಿ ಅಥವಾ ಪ್ರಾಣಹಾನಿ ಎಷ್ಟು ಎಂದು ಇನ್ನೂ ಖಚಿತವಾಗಿ ತಿಳಿದಿಲ್ಲವಾದರೂ ವಸತಿ ಕಾಲೊನಿಯಲ್ಲಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯೂ ಇದ್ದು ಸಾವು ನೋವುಗಳು ಅಧಿಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಿಐಎ ವಕ್ತಾರ ಅಬ್ದುಲ್ ಸತ್ತಾರ್ ಅಪಘಾತವನ್ನು ಖಚಿತಪಡಿಸಿದ್ದಾರೆ.” ಪಿಐಎ ವಿಮಾನ ಪಿಕೆ 8303, 91 ಪ್ರಯಾಣಿಕರು ಮತ್ತು 8 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು. ಬದುಕುಳಿದವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಏನನ್ನೂ ಹೇಳುವುದು ಅಕಾಲಿಕವಾಗಿರುತ್ತದೆ. ತುರ್ತು ಲ್ಯಾಂಡಿಂಗ್‌ಗಳನ್ನು ನಿರ್ವಹಿಸಲು ನಮ್ಮ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ನನ್ನ ಎಲ್ಲಾ ಪ್ರಾರ್ಥನೆಗಳು ಕುಟುಂಬಗಳೊಂದಿಗೆ ಇವೆ. ನಾವು ಮಾಹಿತಿಯನ್ನು ಪಾರದರ್ಶಕ ರೀತಿಯಲ್ಲಿ ಒದಗಿಸುವುದನ್ನು ಮುಂದುವರಿಸುತ್ತೇವೆ” ಎಂದು ಪಿಐಎ ವಕ್ತಾರರು ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳಲ್ಲಿನ ದೃಶ್ಯಗಳಲ್ಲಿ ಕರಾಚಿಯ ಮಾಡೆಲ್ ಕಾಲೋನಿಯ ಕೆಲವು ಮನೆಗಳಿಂದ ಹೊಗೆ ಹೊರಬರುವ ದೃಶ್ಯ ಸೆರೆಹಿಡಿಯಲಾಗಿದೆ.

ಅಪಘಾತದಲ್ಲಿ ತನ್ನ ಹಿರಿಯ ಸಿಬ್ಬಂದಿ ಅನ್ಸಾರ್ ನಖ್ವಿ ಜೀವ ಕಳೆದುಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ಚಾನೆಲ್ ಖಚಿತಪಡಿಸಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದು, “ಪಿಐಎ ಅಪಘಾತದಿಂದ ಆಘಾತಕ್ಕೊಳಗಾಗಿದ್ದು ದುಃಖಿತರಾಗಿದ್ದೇವೆ. ತಕ್ಷಣದ ವಿಚಾರಣೆಯನ್ನು ಪ್ರಾರಂಭಿಸಲಾಗುವುದು. ಸತ್ತವರ ಕುಟುಂಬಗಳಿಗೆ ಪ್ರಾರ್ಥನೆ ಮತ್ತು ಸಂತಾಪ ಸೂಚಿಸಿದ್ದಾರೆ.”

ವಿಮಾನ ಅಪಘಾತದಿಂದಾಗಿ ಪಾಕಿಸ್ತಾನದ ಆರೋಗ್ಯ ಮತ್ತು ಜನಸಂಖ್ಯಾ ಕಲ್ಯಾಣ ಸಚಿವರು ಕರಾಚಿಯ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೋವಿಡ್ -19 ಕಾರಣದಿಂದ ರಾಷ್ಟ್ರವ್ಯಾಪಿ ದೀರ್ಘಕಾಲದವರೆಗೆ ಸಡಿಲಗೊಂಡ ನಂತರ ಏಕಾಏಕಿ ಪಾಕಿಸ್ತಾನವು ಮೇ 16 ರಂದು ವಾಣಿಜ್ಯ ಪ್ರಯಾಣಿಕರ ವಿಮಾನ ಪ್ರಯಾಣವನ್ನು ಪುನರಾರಂಭಿಸಿತ್ತು. ಹೀಗಾಗಿ ಘಟನೆಗೂ ಕಾರಣಗಳು ತಿಳಿದು ಬಂದಿಲ್ಲ.

ಪರಿಹಾರ ಕಾರ್ಯಾಚರಣೆಗಳು

“ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ಟೆಂಡರ್‌ಗಳು ಮತ್ತು ಪರಿಹಾರ ತಂಡಗಳು ಅಪಘಾತದ ಸ್ಥಳವನ್ನು ತಲುಪಿವೆ. ಆದಾಗ್ಯೂ, ಅಪಘಾತದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದವರು ರಕ್ಷಣಾ ಕಾರ್ಯಕರ್ತರಿಗೆ ತೊಂದರೆಗಳನ್ನುಂಟುಮಾಡುತ್ತಿದ್ದಾರೆ. ಪಾಕಿಸ್ತಾನದ ಸಶಸ್ತ್ರ ಪಡೆಗಳೂ ತಮ್ಮ ತಂಡಗಳು ಸ್ಥಳದಲ್ಲೇ ಇವೆ ಎಂದು ಹೇಳಿಕೆ ನೀಡಿವೆ. ಆರ್ಮಿ ಕ್ವಿಕ್ ರಿಯಾಕ್ಷನ್ ಫೋರ್ಸ್ ಮತ್ತು ಪಾಕಿಸ್ತಾನ ರೇಂಜರ್ಸ್ ಸಿಂಧ್ ಪಡೆಗಳು ನಾಗರಿಕ ಆಡಳಿತದ ಜೊತೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಘಟನಾ ಸ್ಥಳವನ್ನು ತಲುಪಿವೆ. ಅನುಸರಿಸಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿವೆ” ಎಂದು ಪಾಕಿಸ್ತಾನ ಸೇನೆಯ ವಕ್ತಾರ ಡಿಜಿ ಐಎಸ್ಪಿಆರ್ ಟ್ವೀಟ್ ಮಾಡಿದ್ದಾರೆ.

ಅಪಘಾತದ ಸ್ಥಳ

ಕರಾಚಿ ವಿಮಾನ ನಿಲ್ದಾಣದಿಂದ ಕೊಂಚ ದೂರಳತೆಯಲ್ಲಿರುವ ಜಿನ್ನಾ ಗಾರ್ಡನ್ ಪ್ರದೇಶದ ಮಾಡೆಲ್ ಕಾಲೋನಿ ಮೇಲೆ ಪಿಐಎ ವಿಮಾನ ಪಿಕೆ 8303  ಅಪ್ಪಳಿಸಿದೆ.

ಈ ಪ್ರದೇಶದಲ್ಲಿ ಹೆಚ್ಚಿನವರು 1947 ರಲ್ಲಿ ವಿಭಜನೆಯ ಸಮಯದಲ್ಲಿ ಭಾರತದಿಂದ ವಲಸೆ ಬಂದ ಜನರು ಇದ್ದರು ಎನ್ನಲಾಗುತ್ತಿದೆ. ಸ್ಥಳೀಯ ಇಂಡಿಯಾ ಟುಡೆ ಟಿವಿ ಪತ್ರಕರ್ತರ ಪ್ರಕಾರ,ಈ ಜನರಲ್ಲಿ ಹೆಚ್ಚಿನವರು ಅಥವಾ ಅವರ ಪೂರ್ವಜರು ಉತ್ತರ ಪ್ರದೇಶ ಅಥವಾ ಬಿಹಾರದಿಂದ ಬಂದವರು ಎಂದಿದ್ದಾರೆ.

ಕುಸಿತಕ್ಕೆ ಸಂಭವನೀಯ ಕಾರಣ

ಪಿಐಎ ವಿಮಾನ ಪಿಕೆ 8303 ಮಧ್ಯಾಹ್ನ 1 ಗಂಟೆಗೆ ಲಾಹೋರ್‌ನಿಂದ ಹೊರಟಿದ್ದು, ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ 2:45 ಕ್ಕೆ ಅಪಘಾತ ಸಂಭವಿಸಿದೆ.

ವಿಮಾನವು “ತಾಂತ್ರಿಕ ತೊಂದರೆಗಳನ್ನು” ಅನುಭವಿಸುತ್ತಿದೆ ಎಂದು ಪಿಕೆ 8303 ರ ಪೈಲಟ್ ಎಟಿಸಿಗೆ ತಿಳಿಸಿದ್ದಾರೆ ಎಂದು ಪಿಐಎ ಸಿಇಒ ಏರ್ ವೈಸ್ ಮಾರ್ಷಲ್ ಅರ್ಷದ್ ಮಲಿಕ್ ಹೇಳುತ್ತಾರೆ.  ನಿಖರವಾಗಿ ಏನಾಯಿತು ಎಂದು ಕಂಡುಹಿಡಿಯಲು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗುವ ಮೊದಲು ಏರ್‌ಬಸ್ ಎ 320 ಎರಡು ಅಥವಾ ಮೂರು ಬಾರಿ ಇಳಿಯಲು ಪ್ರಯತ್ನಿಸುತ್ತಿದೆ ಎಂದು ಸಾಕ್ಷಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಹಿರಿಯ ನಾಗರಿಕ ವಾಯುಯಾನ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದು, ಇಳಿಯುವ ಮೊದಲು ತಾಂತ್ರಿಕ ದೋಷದಿಂದಾಗಿ ವಿಮಾನವು ತನ್ನ ಚಕ್ರಗಳನ್ನು ತೆರೆಯಲು ಸಾಧ್ಯವಾಗಲಿಲ್ಲ.

ಫ್ಲೈಟ್ ಮಾನಿಟರಿಂಗ್ ಸೈಟ್ ಫ್ಲೈಟ್ ರಾಡರ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪಿಐಎ ಫ್ಲೈಟ್ ಪಿಕೆ 8303 ಲಾಹೋರ್‌ನಿಂದ 1:05 PM (ಪಾಕ್ ಸಮಯ) ನಿಂದ ಹೊರಟಿತು. ಮಧ್ಯಾಹ್ನ 2:34 ಕ್ಕೆ, ವಿಮಾನವು ಲ್ಯಾಂಡಿಂಗ್ ಪ್ರಯತ್ನವನ್ನು ಮಾಡಿತು, ಅದನ್ನು 275 ಅಡಿಗಳಷ್ಟು ಸ್ಥಗಿತಗೊಳಿಸಲಾಯಿತು. ವಿಮಾನವು 3175 ಅಡಿಗಳವರೆಗೆ ಏರಿತು. 525 ಅಡಿಗಳಲ್ಲಿ 02:40 ಕ್ಕೆ ಸಿಗ್ನಲ್ ಕಳೆದುಹೋಯಿತು ಎಂದಿದ್ದಾರೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights