ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿಗೆ ಮಂಗಳಾರತಿ ಮಾಡಲು ಬರುವುದಿಲ್ಲವೇ?

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿರುವ ನರ್ಮದಾ ಘಾಟ್‌ನಲ್ಲಿ ಆರತಿ ಬೆಳಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. BJP ಯ ಅಮಿತ್ ಮಾಳವೀಯ ತಮ್ಮ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್‌ ಹಂಚಿಕೊಂಡಿದ್ದು. ‘ಚುನಾವಣೆಗಾಗಿ ಹಿಂದೂ ಆದರೆ, ಹೀಗೇ ಆಗುತ್ತದೆ. ಎಡದಿಂದ ಬಲಕ್ಕೆ (ಕ್ಲಾಕ್‌ವೈಸ್‌) ಆರತಿ ಮಾಡುವುದು ಸಂಪ್ರದಾಯ. ಭೂಮಿಯೂ ಎಡದಿಂದ ಬಲಕ್ಕೆ ತಿರುಗುತ್ತದೆ. ಆದರೆ ರಾಹುಲ್ ಗಾಂಧಿ ಬಲದಿಂದ ಎಡಕ್ಕೆ (ಆ್ಯಂಟಿ ಕ್ಲಾಕ್‌ವೈಸ್‌) ಆರತಿ ಮಾಡಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ. ರಾಹುಲ್ ಅವರು ಆರತಿ ಮಾಡುತ್ತಿರುವ ವಿಡಿಯೊವನ್ನೂ ಅವರು ಟ್ವೀಟ್‌ ಮಾಡಿದ್ದಾರೆ.

 

ಸ್ಮೃತಿ ಇರಾನಿ ಕೂಡ ತಮ್ಮ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಆರತಿ ಮಾಡುತ್ತಿರುವ ಫೋಟೋವನ್ನು ತಲೆಕೆಳಗಾಗಿ ಹಂಚಿಕೊಳ್ಳುವ ಮೂಲಕ ರಾಹುಲ್ ಗಾಂಧಿ ತಿರುಗ ಮುರಗಾ ಆರತಿ ಮಾಡಿದ್ದಾರೆ ಎಂದು ಪೋಸ್ಟ್‌ ಮಾಡಿದ್ದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಆರತಿ ಮಾಡಲು ಬರುವುದಿಲ್ಲ ಎಂದು ಬಿಜೆಪಿಯ ಹಲವು ನಾಯಕರು ಟೀಕಿಸಿದ್ದಾರೆ. ಹಾಗಿದ್ದರೆ ರಾಹುಲ್ ಗಾಂಧಿ ಆರತಿ ಮಾಡುವಾಗ ತಪ್ಪಾಗಿದೆ ಎಂದು ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ,ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಟ್ವೀಟ್‌ನಲ್ಲಿರುವ ವಿಡಿಯೋದಲ್ಲಿ ಇರುವ ಮಾಹಿತಿ ಸುಳ್ಳು. ಇದು ತಪ್ಪು ಮಾಹಿತಿ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್‌ ವರದಿ ಮಾಡಿದೆ.

ಆರತಿಯನ್ನು ಯಾವ ದಿಕ್ಕಿನಲ್ಲಿ ಮಾಡಬೇಕು ಎಂಬುದನ್ನು ದೃಢೀಕರಿಸಲು ಅರ್ಚಕರನ್ನು ಸಂಪರ್ಕಿಸಿರುವ ಆಲ್ಟ್‌ನ್ಯೂಸ್  ಅರ್ಚಕರಿಂದ ಮಾಹಿತಿ ಪಡೆದುಕೊಂಡಿದೆ. ಆರತಿ ಸಮಾರಂಭದಲ್ಲಿ ದೀಪವನ್ನು ಪ್ರದಕ್ಷಿಣಾಕಾರವಾಗಿ ಮಾಡಬೇಕು ಎಂದು ಖಚಿತಪಡಿಸಿದರು. ಅಮಿತ್ ಮಾಳವಿಯಾ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಪ್ರದಕ್ಷಿಣಾಕಾರವಾಗಿ ಆರತಿ ಮಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಕ್ಯಾಮರಾ ಲೆನ್ಸ್ ಗಾಂಧಿಯವರ ಮುಖದ ಕಡೆಗೆ ತಿರುಗಿರುವುದರಿಂದ, ಅವರ ಬಲಭಾಗದಲ್ಲಿ ಮಾಡಿದ ಚಲನೆಗಳು ಪ್ರತಿಬಿಂಬಿಸಲ್ಪಡುತ್ತವೆ ಮತ್ತು ಕ್ಯಾಮರಾದ ಸ್ಕ್ರೀನ್ನಲ್ಲಿ ಎಡಭಾಗಕ್ಕೆ ಮಾಡುವಂತೆ ತೊರುತ್ತವೆ.

ಕಾಂಗ್ರೆಸ್ ಪಕ್ಷದ ಹ್ಯಾಂಡಲ್ ಕೂಡ ರಾಹುಲ್ ಗಾಂಧಿ ಆರತಿ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಈ ವೀಡಿಯೊದಲ್ಲಿ, ಗಾಂಧಿ ಮತ್ತು ಪುರೋಹಿತರಿಬ್ಬರೂ ಪ್ರದಕ್ಷಿಣಾಕಾರವಾಗಿ ಆರತಿ ಮಾಡುತ್ತಿರುವುದನ್ನು ಕಾಣಬಹುದು. ಅಂದರೆ ಪುರೋಹಿತರಂತೆಯೇ ರಾಹುಲ್ ಗಾಂಧಿ ಕೂಡ ಸರಿಯಾದ ದಿಕ್ಕಿನಲ್ಲಿ ಆರತಿಯನ್ನು ಮಾಡುತ್ತಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಸಹ ಗಂಗಾ ಆರತಿ ಸಂದರ್ಭದಲ್ಲಿ ಎಡದಿಂದ ಬಲಕ್ಕೇ ಆರತಿ ಮಾಡಿದ್ದಾರೆ. ಆದರೆ, BJP ಯ ಅಮಿತ್ ಮಾಳವೀಯ ಅವರು ತಪ್ಪು ಮಾಹಿತಿ ಹಂಚಿಕೊಂಡು ಜನರ ಹಾದಿ ತಪ್ಪಿಸಿದ್ದಾರೆ. ಭೂಮಿ ಬಲದಿಂದ ಎಡಕ್ಕೆ ತಿರುಗುತ್ತದೆ. ಇದನ್ನು ಪ್ರಾಥಮಿಕ ಶಾಲೆಯಲ್ಲಿಯೇ ಹೇಳಿಕೊಡಲಾಗುತ್ತದೆ. ಈ ಮಾಹಿತಿಯನ್ನೂ ಮಾಳವೀಯ ಅವರು ತಪ್ಪಾಗಿ ಹಂಚಿಕೊಂಡಿದ್ದಾರೆ’ ಎಂದು ಆಲ್ಟ್‌ ನ್ಯೂಸ್‌ ತನ್ನ ವರದಿಯಲ್ಲಿ ವಿವರಿಸಿದೆ.

ಒಟ್ಟಾರೆಯಾಗಿ ಹೇಳುವುದಾರೆ, BJP ಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ರಾಹುಲ್ ಗಾಂಧಿ ಮಾಡಿರು ನರ್ಮದಾ ಆರತಿಯನ್ನು ತಪ್ಪಾಗಿ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಮಾಡಿರುವ ಟ್ವೀಟ್ ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೆಸ್ಸಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಸೌದಿ ಆಟಗಾರ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights