ಟಿಎಂಸಿ ಎಂದರೆ ದೇವಾಲಯ, ಮಸೀದಿ, ಚರ್ಚ್; ಗೋವಾದಲ್ಲಿ ಮಮತಾ ಬ್ಯಾನರ್ಜಿ

ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಟಿಎಂಸಿ ಘೋಷಿಸಿದ ನಂತರ, ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ, ಮಾಜಿ ಟಿನಿಸ್‌ ಆಟಗಾರ ಲಿಯಾಂಡರ್‌ ಪೇಸ್‌, ನಟಿ ನಫೀಸಾ ಅಲಿ ಮತ್ತು ಇನ್ನೂ ಹಲವರು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಮತಾ, ಟಿಎಂಸಿ ಎಂದರೆ ‘ದೇವಾಲಯ, ಮಸೀದಿ, ಚರ್ಚ್’ (Temple, Mosque, Church) ಎಂದು ಹೇಳಿದ್ದಾರೆ.

ಬ್ಯಾನರ್ಜಿ ಅವರು ನಿನ್ನೆ ಮೀನು ಮಾರುಕಟ್ಟೆ ಮತ್ತು ಮೂರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ನಾನು ನಿಮ್ಮ ಸಹೋದರಿ ಇದ್ದಂತೆ. ನಾನು ಅಧಿಕಾರ ಹಿಡಿಯಲು ಬಂದಿಲ್ಲ. ಆದರೆ ಜನರು ತೊಂದರೆ ಎದುರಿಸುತ್ತಿರುವಾಗ ಅವರನ್ನು ನೋಡಲು ನನ್ನ ಹೃದಯ ಕಾತರಿಸುತ್ತದೆ ಎಂದು ಹೇಳಿದ್ದಾರೆ.

ಗೋವಾದಲ್ಲಿ ಟಿಎಂಸಿ ಸ್ಪರ್ಧೆಯು ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುತ್ತದೆ ಮತ್ತು ಬಿಜೆಪಿಗೆ ಲಾಭವಾಗುತ್ತದೆಯೇ ಎಂದು ಹೇಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಟಿಎಂಸಿ ಮಾತ್ರ ಮತಗಳನ್ನು ವಿಭಜಿಸುತ್ತೇವೆಯೇ? ಇತರ ಪಕ್ಷಗಳ ಬಗ್ಗೆ ಏನು?… ಯಾವುದೇ ಊಳಿಗಮಾನ್ಯ, ಭೂಮಾಲೀಕಗಿರಿ ಅಥವಾ ದಾದಾಗಿರಿ ಇರಲು ಸಾಧ್ಯವಿಲ್ಲ. ದೆಹಲಿಯ ಜನರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಮತ್ತು ಇತರರು ಸ್ಪರ್ಧಿಸಬಾರದೇ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಮಧ್ಯಹ್ನದ ಊಟದಲ್ಲಿ ‘ಫಾರ್ಟಿಫಿಲ್ಡ್‌’ ಅಕ್ಕಿ ಬಳಕೆಗೆ ಕೇಂದ್ರ ನಿರ್ದೇಶನ!

ಕೊಂಕಟಿ ಭಾಷೆಯಲ್ಲಿ ಹೇಳಿದ ಅವರು,  “ದಿಲ್ಲಿಚಿ ದಾದಾಗಿರಿ ಅನಿಕ್ ನಾಕಾ (ಇನ್ನು ಮುಂದೆ ದೆಹಲಿಯರಿಗೆ ಹೆದರುವ ಅಗಶ್ಯವಿಲ್ಲ)”… ಗೋವಾದಲ್ಲಿ ಎಲ್ಲವೂ ಇದೆ. ಆದರೆ ಅದು ನಾಯಕರಹಿತವಾಗಿದೆ. ಇಲ್ಲಿಯ ಸಮಸ್ಯೆ ದೆಹಲಿಯ ದಾದಾಗಿರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯು ತನ್ನನ್ನು ‘ಹಿಂದೂ ವಿರೋಧಿ’ ಎಂದು ಆಗಾಗ್ಗೆ ಆರೋಪಿಸುತ್ತದೆ. “ನಾನು ಹಿಂದೂ. ನನಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡಲು ಅವರು ಯಾರು?… ನಾನಿನ್ನೂ ಬ್ರಾಹ್ಮಣ ಕುಟುಂಬದಿಂದ ಬಂದವಳು. ಆದರೆ ಇದೆಲ್ಲವನ್ನೂ ಹೇಳುವ ಅಗತ್ಯವಿಲ್ಲ… ನಾನು ಸೋಲುತ್ತೇನೆ. ಆದರೆ, ದೇಶವನ್ನು ಎಂದಿಗೂ ವಿಭಜಿಸುವುದಿಲ್ಲ. ನಾವು ಜನರನ್ನು ಒಗ್ಗೂಡಿಸುತ್ತೇವೆ, ನಾವು ಅವರನ್ನು ವಿಭಜಿಸುವುದಿಲ್ಲ. TMC ಅರ್ಥವು Temple, Mosque, Church ಆಗಿದೆ” ಎಂದು ಅವರು ವಿವರಿಸಿದ್ದಾರೆ.

ಗೋವಾದ ವಿರೋಧ ಪಕ್ಷವು ತನ್ನ ಶಾಸಕರನ್ನು ಬಿಜೆಪಿಗೆ “ಮಾರಾಟ” ಮಾಡುತ್ತಿದೆ. “ಬಿಜೆಪಿಗೆ (ಗೋವಾದಲ್ಲಿ) ಸರ್ಕಾರ ರಚನೆ ಮಾಡುವ ಸಾಮರ್ಥ್ಯವಿರಲಿಲ್ಲ. ಆದರೆ, ಅವರು 10-12 ಶಾಸಕರನ್ನು ಹೇಗೆ ಕದ್ದು ಸರ್ಕಾರ ರಚಿಸಿದರು?… ಸಮಸ್ಯೆಯೆಂದರೆ ಇತರ ಪಕ್ಷಗಳು ಅವರಿಗೆ ಶರಣಾಗುತ್ತಿರುವುದು. ಆದರೆ, ನಾವು ಎಂದಿಗೂ ಈ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಬೆಟಿಮ್‌ನಲ್ಲಿನ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಅವರು, ಮೀನುಗಾರ ಸಮುದಾಯಕ್ಕೆ ನಾಲ್ಕು ಭರವಸೆಗಳನ್ನು ನೀಡಿದ್ದಾರೆ – ಪಕ್ಷವು ಅಧಿಕಾರಕ್ಕೆ ಬಂದರೆ, ಮೀನುಗಾರರಿಗೆ ಸರ್ಕಾರದ ಸಹಾಯಧನವನ್ನು 2.5 ಪಟ್ಟು ಅಂದರೆ 75,000 ರೂ.ಗೆ ಹೆಚ್ಚಿಸಲಾಗುವುದು, ಮೀನು ಖರೀದಿಸುವ ಕನಿಷ್ಠ ಮಾರಾಟ ಬೆಲೆ ನಿಗಧಿ ಪಡಿಸಲಾಗುವುದು, ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಮಾಸಿಕ ರೂ 4,000 ಭತ್ಯೆ ನೀಡುವುದು ಮತ್ತು ಮೀನುಗಾರರ ಕಲ್ಯಾಣ ಮಂಡಳಿಯ ರಚನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Fact Check: ಬನಾರಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಆಜಾನ್ ಪಠಿಸಿದ್ದು ಮುಸ್ಲಿಂ ಮತಗಳಿಗಾಗಿಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights