ಆಸಿಡ್‌ ದಾಳಿ ವೈಭವೀಕರಿಸಿದ ವಿಡಿಯೋ: ಟಿಕ್‌ಟಾಕ್‌ ನಿಷೇಧಕ್ಕೆ ಆಗ್ರಹ

ಟಿಕ್‌ಟಾಕ್‌ ಮತ್ತೆ ಸುದ್ದಿಯಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್‌, ಧಾರ್ಮಿಕ ದ್ವೇಷ, ಹಿಂಸೆಗಳಿಗೆ ಪ್ರೇರಣೆಯಾಗುತ್ತಿರುವ ಬಗ್ಗೆ ಕಳೆದೊಂದು ವರ್ಷದಿಂದ ವರದಿಗಳು ಪ್ರಕಟವಾಗುತ್ತಲೇ ಇವೆ.

ಟಿಕ್‌ಟಾಕ್‌ ಮತ್ತೆ ಸುದ್ದಿಯಲ್ಲಿದೆ. ಭಾರತದ ಅತ್ಯಂತ ಜನಪ್ರಿಯವಾದ ಶಾರ್ಟ್‌ ವಿಡಿಯೋ ಸೋಷಿಯಲ್‌ ಮೀಡಿಯಾ ವೇದಿಕೆ ಈಗ ನಿಷೇಧದ ಒತ್ತಡವನ್ನು ಎದುರಿಸುತ್ತಿದೆ. ಕೆಲವು ದಿನಗಳ ಹಿಂದೆ ಚೀನಾ ಮೂಲದ ಆಪ್‌ ಎಂಬ ಕಾರಣಕ್ಕೆ ಟಿಕ್‌ಟಾಕ್‌ ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.

ಈಗ ಇಬ್ಬರು ಯುವಕರು ಸಿದ್ಧಪಡಿಸಿದ ವಿಡಿಯೋ ಒಂದು ತೀವ್ರ ಟೀಕೆಗೆ ಕಾರಣವಾಗಿದ್ದು, ಈ ವಿಡಿಯೋ ಪ್ರಕಟಣೆ ಅವಕಾಶ ಮಾಡಿದ ಟಿಕ್‌ಟಾಕ್‌ವನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಫೈಜಲ್‌ ಸಿದ್ದಿಕಿ ಮತ್ತು ಆಮಿರ್‌ ಸಿದ್ದಿಕಿ ಎಂಬ ಟಿಕ್‌ಟಾಕ್‌ ಸ್ಟಾರ್‌ಗಳು ಒಂದು ವಿಡಿಯೋ ನಿರ್ಮಿಸಿದ್ದರು. ಅದರಲ್ಲಿ ವ್ಯಕ್ತಿಯೊಬ್ಬ ಯುವತಿಯೊಬ್ಬಳ ಮುಖದ ಮೇಲೆ ನೀರು ಎರಚುತ್ತಾನೆ. ನಂತರ ಆ ಯುವತಿಯ ಮುಖದ ಸುಟ್ಟ ಗಾಯದ ಮೇಕಪ್‌ನೊಂದಿಗೆ ಕಾಣಿಸಿಕೊಳ್ಳುತ್ತಾಳೆ.

ಕೆಲವು ದಿನಗಳ ಹಿಂದೆ ನಿರ್ಮಿಸಿದ ಈ ವಿಡಿಯೋ ಈಗ ವೈರಲ್‌ ಆಗಿದ್ದು, ಆಸಿಡ್‌ ದಾಳಿಗೆ ಗುರಿಯಾಗಿದ್ದ ಲಕ್ಷ್ಮಿ ಅಗರ್‌ವಾಲ್‌ ಈ ವಿಡಿಯೋವನ್ನು ಮಹಿಳಾ ಆಯೋಗದ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ನಿಮಗೆ ನೆನಪಿರಬಹುದು. ಲಕ್ಷ್ಮಿ ಅಗರ್‌ವಾಲ್‌ ಅವರ ಜೀವನವನ್ನು ಆಧರಿಸಿ ಛಪಾಕ್‌ ಹೆಸರಿನ ಚಿತ್ರ ಬಿಡುಗಡೆಯಾಗಿತ್ತು. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದರು.

ತೀವ್ರ ವಿಮರ್ಶೆಗೆ ಗುರಿಯಾಗಿ ರಾಷ್ಟ್ರೀಯ ಮಹಿಳಾ ಆಯೋಗ ವಿಡಿಯೋ ಟಿಕ್‌ಟಾಕ್‌ ಸಂಸ್ಥೆಗೆ ಬರೆದಿದ್ದು ಫೈಝಲ್‌ ಖಾತೆಯನ್ನು ಡಿಲೀಟ್‌ ಮಾಡಲು ಮನವಿ ಮಾಡಿದೆ. ಸುಮಾರು 90 ಸಾವಿರ ಟ್ವೀಟ್‌ಗಳು ಟ್ರೆಂಡ್‌ ಆಗಿದ್ದು, ಟಿಕ್‌ಟಾಕ್‌ ಬ್ಯಾನ್‌ ಮಾಡಲು ಒತ್ತಡ ಹಾಕಿವೆ.

ಕೃಪೆ: techkannada.in

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights