ಆರ್ಥಿಕ ಕುಸಿತದ ನಡುವೆಯೂ ಶ್ರೀಮಂತನಾದ ಅಂಬಾನಿ! ಗಂಟೆ ಲೆಕ್ಕದ ಆದಾಯ ಎಷ್ಟು ಗೊತ್ತೇ?

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ, ಕಳೆದ 6 ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಗಂಟೆಗೆ 90 ಕೋಟಿಯಂತೆ ಆದಾಯ ಗಳಿಸಿದ್ದು, ಪ್ರಸ್ತುತ ಒಟ್ಟು 6 ಲಕ್ಷದ 58 ಸಾವಿರದ 400 ಕೋಟಿ ಸಂಪತ್ತನ್ನು ಹೊಂದಿದ್ದಾರೆ ಎಂದು IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2020ರ ವರದಿ ಹೇಳಿದೆ.

ಲಾಕ್‌ಡೌನ್ ಅವದಿಯಲ್ಲಿ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ, ಮುಖೇಶ್ ಅಂಬಾನಿಯವರ ಸಂಪತ್ತು ಮಾತ್ರ ಗಣನೀಯವಾಗಿ ಏರಿಕೆಯಾಗಿದ್ದು, ಈ ಪಟ್ಟಿಯಲ್ಲಿ ತಮ್ಮ ಮುಂದಿನ ಐದು ಜನ ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತಿಗಿಂತ ಅಂಬಾನಿಯವರ ಸಂಪತ್ತು ಹೆಚ್ಚಾಗಿದೆ.

ಮುಖೇಶ್ ಅಂಬಾನಿ ಕಳೆದ 9 ನೇ ವರ್ಷದಿಂದಲೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅಂಬಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಆರ್‌ಐಎಲ್ ಭಾರತದಲ್ಲಿ ಲಾಕ್‌ಡೌನ್ ಹೊರತಾಗಿಯೂ 13,248 ಕೋಟಿ ರೂ. ಆದಾಯ ಗಳಿಸಿದ್ದಾರೆ.

“ಕೊರೊನಾ ಸಾಂಕ್ರಾಮಿಕದ ಆರಂಭದಲ್ಲಿ, ಅಂಬಾನಿಯ ಸಂಪತ್ತು 28% ನಷ್ಟು ಇಳಿದು 3,50,000 ಕೋಟಿ ರೂ.ಗಳಿಗೆ ತಲುಪಿತ್ತು. ನಂತರ ಫೇಸ್‌ಬುಕ್, ಗೂಗಲ್ ಮತ್ತು ಇತರ ಜಿಯೋ ಮತ್ತು ರಿಲಯನ್ಸ್ ರಿಟೇಲ್‌ನಿಂದ ಧನಸಹಾಯ ಮತ್ತು ಕಾರ್ಯತಂತ್ರದ ಹೂಡಿಕೆಯ ಬೆಂಬಲದೊಂದಿಗೆ ‘ವಿ-ಆಕಾರದ ಚೇತರಿಕೆ’ ಕಂಡುಬಂದು, 4 ತಿಂಗಳಲ್ಲಿ 85% ಸಂಪತ್ತು ಹೆಚ್ಚಾಗಿದೆ” ಎಂದು ವರದಿ ತಿಳಿಸಿದೆ.

88.3 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿರುವ ಅಂಬಾನಿ ಕುಟುಂಬವು ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬವಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದ ಜಿಡಿಪಿ ಕುಸಿದು, ಇತ್ತೀಚಿನ ವರ್ತಮಾನದ ಪ್ರಕಾರ ಅದು ಶೇ. -23ರಷ್ಟು ಕುಸಿದಿತ್ತು. ನಿರುದ್ಯೋಗ ದಾಖಲೆ ಪ್ರಮಾಣದಲ್ಲಿ ಏರಿತ್ತು. ಕೃಷಿಯೊಂದನ್ನು ಹೊರತುಪಡಿಸಿದರೆ ಉತ್ಪಾದನೆ, ಸೇವಾ ವಲಯ, ನಿರ್ಮಾಣ ವಲಯ ಸೇರಿದಂತೆ ಮಿಕ್ಕೆಲ್ಲಾ ಕ್ಷೇತ್ರಗಳು ತೀವ್ರ ಸಂಕಷ್ಟ ಅನುಭವಿಸಿದ್ದವು. ಹೀಗಿದ್ದಾಗ ಅಂಬಾನಿ ಆಸ್ತಿ ಮತ್ತು ಸಂಪಾದನೆ ಮಾತ್ರ ಏರಿದ್ದು ಹೇಗೆ ಎಂಬುದು ಮಹತ್ವದ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಬಂಗಾಳದ ಮಮತಾ ಅವರ ಕಿಚನ್‌ನಲ್ಲಿ ವಲಸಿಗರಿಗಾಗಿ 5ರೂ.ಗೆ ಊಟ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights