ಫ್ಯಾಕ್ಟ್‌ಚೆಕ್: ಇದು ಕೇರಳದ ದೀಪಾವಳಿಯ ದೀಪೋತ್ಸವವಲ್ಲ! ಹಾಗಿದ್ದರೆ ಮತ್ತೇನು?
ಕೇರಳದಲ್ಲಿ ದೀಪಾವಳಿಯ ಸಂದರ್ಭದಲ್ಲಿ ನಡೆದ ದೀಪೋತ್ಸವದ ಸಂಭ್ರಮ ಎಂದು ಅದ್ಭುತ ದೀಪಾಲಂಕಾರಗಳಿಂದ ಕೂಡಿದ ದೋಣಿಗಳು ಚಲಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಲೇಖಕಿ ಹಾಗೂ ಚಿತ್ರ ವಿಮರ್ಶಕಿಯೂ ಆಗಿರುವ ಭಾವನಾ ಸೋಮಯ್ಯ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದು, “ಕೇರಳದಲ್ಲಿ ದೀಪೋತ್ಸವಂ. 240 ದೋಣಿಗಳು ದೀಪಗಳೊಂದಿಗೆ ನದಿಯಲ್ಲಿ ಸಾಗುತ್ತಿವೆ. ದೀಪಾವಳಿ ಆಚರಣೆಗಳು ಮುಂದುವರಿಯುತ್ತವೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
#Deepotsavam in Kerala. 240 boats sailing in the river with lamps.#Diwali celebrations continue… pic.twitter.com/rHKoT4LUGt
— Bhawana Somaaya (@bhawanasomaaya) November 7, 2022
ಇದೇ ರೀತಿಯ ಪೋಸ್ಟ್‌ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಕೇರಳದ ದೀಪಾವಳಿಯ ದೀಪೋತ್ಸವ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ವೈರಲ್ ವಿಡಿಯೋ ಈ ದೃಶ್ಯಗಳು ಚೀನಾದ “12 ನೇ ಚೀನಾ ಪ್ರವಾಸೋದ್ಯಮ ದಿನ “ದ ಅಂಗವಾಗಿ ನಡೆದ ಕಾರ್ಯಕ್ರಮದ ಬಾಗ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ತಂಡ ವರದಿ ಮಾಡಿದೆ.
https://twitter.com/SukranDr/status/1564268791927824384?ref_src=twsrc%5Etfw%7Ctwcamp%5Etweetembed%7Ctwterm%5E1564268791927824384%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-golden-dragon-china-deepotsavam-hyderabad-kerala-2294492-2022-11-07
“ಗೋಲ್ಡನ್ ಡ್ರ್ಯಾಗನ್” ದಕ್ಷಿಣ ಚೀನಾದ ಯುಲಾಂಗ್ ನದಿಯಲ್ಲಿ ನೌಕಾಯಾನ. 88 ಬಿದಿರಿನ ರಾಫ್ಟ್‌ಗಳನ್ನು ಬಳಸಿ ರಚಿಸಲಾಗಿದೆ. ಚೀನೀ ಡ್ರ್ಯಾಗನ್‌ಗಳು ಸಾಂಪ್ರದಾಯಿಕವಾಗಿ ಕರುಣೆ ಮತ್ತು ವೈಭವದ ಶಕ್ತಿಯ ಸಂಕೇತಿಸುತ್ತವೆ ಹಾಗೂ ಮಳೆ, ಬಿರುಗಾಳಿಗಳು ಮತ್ತು ಪ್ರವಾಹಗಳನ್ನು ಬೇಧಿಸುವ ಶಕ್ತಿಯನ್ನು ಪ್ರತಿನಿಧಿಸುತ್ತವೆ.
ಇದರಿಂದ ಕೆಲವು ಕ್ಲೂಗಳನ್ನು ತೆಗೆದುಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, ಗುವಾಂಗ್ಕ್ಸಿ ಎಂಬ ಚೀನಾದ ಸರ್ಕಾರಿ ವೆಬ್‌ಸೈಟ್‌ನಲ್ಲಿ ಇದೇ ಫೋಟೋ ಲಭ್ಯವಾಗಿದ್ದು, ದೀಪಗಳಿಂದ ಅಲಂಕೃತಗೊಂಡ ದೋಣಿಗಳ ಚಿತ್ರಗಳನ್ನು ಒಳಗೊಂಡ ಸುದ್ದಿ ಲೇಖನ ಕಂಡುಬಂದಿದೆ. ಗುವಾಂಗ್ಕ್ಸಿ ದಕ್ಷಿಣ ಚೀನಾದಲ್ಲಿ ವಿಯೆಟ್ನಾಂ ಗಡಿಯಲ್ಲಿರುವ ಸ್ವಾಯತ್ತ ಪ್ರದೇಶವಾಗಿದೆ.
ವರದಿ ಪ್ರಕಾರ ಮೇ 19 ರಂದು, ಬೆಳಕಿನ ದೀಪಗಳನ್ನು ಹೊಂದಿರುವ ಎಂಭತ್ತು ಬಿದಿರಿನ ದೋಣೀಗಳು 70 ಮೀಟರ್ ಉದ್ದದ ಡ್ರ್ಯಾಗನ್ ರೀತಿಯ ರಚನೆಯನ್ನು ರೂಪಿಸಿ ಚೀನಾದ ಗುವಾಂಗ್ಸಿಯಲ್ಲಿ ನದಿಯ ಸಣ್ಣ ಉಪನದಿಯಾದ ಯುಲಾಂಗ್ ನದಿಯ ಉದ್ದಕ್ಕೂ ಅಲೆದಾಡಿದವು. ಈ ಕಾರ್ಯಕ್ರಮವನ್ನು 12 ನೇ ಚೀನಾ ಪ್ರವಾಸೋದ್ಯಮ ದಿನದ ಭಾಗವಾಗಿ ನಡೆಸಲಾಗಿದೆ, ಇದು ಯುಲಾಂಗ್ ನದಿಯ ಖ್ಯಾತಿಯನ್ನು ಹೆಚ್ಚಿಸುವ ಜೊತೆಗೆ ರಾತ್ರಿ ಪ್ರವಾಸೋದ್ಯಮ ಮಾದರಿಗಳನ್ನು ರಚಿಸುವ ಗುರಿಯನ್ನು ಹೊಂದಿರುವ ಸ್ಮರಣಾರ್ಥ ದಿನವಾಗಿದೆ.
ಡೈಲಿ ಮೇಲ್ ಮತ್ತು ಚೈನೀಸ್ ರಾಜ್ಯ-ನಿಯಂತ್ರಿತ ಮಾಧ್ಯಮಗಳಾದ CGTN, China Plus Culture ಮತ್ತು Xi’s Moments ಈ ವರ್ಷ Facebook ನಲ್ಲಿ ಹಂಚಿಕೊಂಡಿರುವ ಈ ವಾರ್ಷಿಕ ಈವೆಂಟ್‌ನ ಇದೇ ರೀತಿಯ ವೀಡಿಯೊಗಳು ಪ್ರಸಾರವಾಗಿವೆ. ಹಾಗಾಇ ಇದು ಕೇರಳಾದ ವೀಡಿಯೊದ ಸಾಧ್ಯತೆಯನ್ನು ತಳ್ಳಿಹಾಕಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣ ಚೀನಾದ ಯುಲಾಂಗ್ ನದಿಯಲ್ಲಿ ನಡೆದ 88 ಬಿದಿರಿನ ರಾಫ್ಟ್‌ಗಳನ್ನು ಒಳಗೊಂಡಿರುವ ಗೋಲ್ಡನ್ ಡ್ರಾಗನನ್ನು ಅನ್ನು 12 ನೇ ಚೀನಾ ಪ್ರವಾಸೋದ್ಯಮ ದಿನದ ಭಾಗವಾಗಿ ನಡೆಸಲಾಗಿದೆ. ಇದನ್ನು ಕೇರಳದಲ್ಲಿ ಮತ್ತು ಹೈದರಾಬಾದ್‌ನಲ್ಲಿ ನಡೆದ ದೀಪೋತ್ಸವ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಈ ಅಜ್ಜಿಗೆ 250 ವರ್ಷ ವಯಸ್ಸಾಗಿದೆ ಎಂಬುದು ನಿಜವೇ?