Corona survey : ದೇಶಕ್ಕೇ ಮಾದರಿ, ರಾಜ್ಯದ 1.5 ಕೋಟಿ ಮನೆಗಳಲ್ಲಿ ಕೊರೋನಾ ಸರ್ವೇ…

ರಾಜ್ಯದ 1.5 ಕೋಟಿ ಮನೆಗಳಲ್ಲಿ ರಾಜ್ಯ ಸರಕಾರ ಕೊರೋನಾ ಸರ್ವೇ ಕೈಗೊಂಡಿದೆ… ಕೊರೋನಾ ಸರ್ವೇ ವಿಷಯದಲ್ಲಿ ದೇಶಕ್ಕೇ  ಕರ್ನಾಟಕ ಮಾದರಿ ರಾಜ್ಯವಾಗಿದೆ… ಕೊರೋನಾ ವಿರುದ್ಧದ ಸಮರದಲ್ಲಿ ದೇಶದ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕವು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ಮುರು ತಿಂಗಳಿನಿಂದ ದೇಶವನ್ನೇ ಅಲುಗಾಡಿಸಿರುವ ಕೊರೋನಾ ವೈರಸ್‌ ಸಂಬಂಧ ರಾಜ್ಯದ 1.5 ಕೋಟಿ ಮನೆಗಳಲ್ಲಿ ಸರ್ವೇ ನಡೆಸಲಾಗಿದ್ದು, ಇದು ದೇಶಕ್ಕೇ ಮೊದಲಾಗಿದೆ. ರಾಜ್ಯದ 1.5 ಕೋಟಿ ಮನೆಗಳಲ್ಲಿ ವೃದ್ಧರು, ಖಾಯಿಲೆಗಳಿಂದ ಬಳಲುತ್ತಿರುವವರ ಮಾಹಿತಿ ಕಲೆ ಹಾಕುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.

ಏಪ್ರಿಲ್‌ ತಿಂಗಳಲ್ಲಿ ಆರಂಭವಾದ ಈ ಸರ್ವೇ ಕಾರ್‍ಯದಲ್ಲಿ ಅನತಿ ಕಾಲದಲ್ಲಿಯೇ ಇಷ್ಟೊಂದು ಸುದೀರ್ಘ ಮಾಹಿತಿ ಸಂಗ್ರಹ ಮಾಡಿರುವುದಕ್ಕೆ ಖುದ್ದು ಕೇಂದ್ರ ಸರಕಾರವೇ ಬೆಚ್ಚಿ ಬೀಳುವಂತೆ ಮಾಡಿದೆ. ಅಷ್ಟೇ ಅಲ್ಲ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಹಾಗು ಅಳವಡಿಸಿಕೊಳ್ಳುವಂತೆ ಅದು ಇತರ ರಾಜ್ಯಗಳಿಗೆ ಕಿವಿ ಮಾತು ಹೇಳಿದೆ.

ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ಮಾದರಿಯನ್ನು, ಅನುಸರಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೇಳಿದೆ. ಈ ಸಾಧನೆಯ ಹಿಂದೆ ದಕ್ಷ, ಪ್ರಾಮಾಣಿಕ ಆಡಳಿತ, ಪರಿಣಾಮಕಾರಿ ನೀತಿಗಳು ಮತ್ತು ತಂತ್ರಜ್ಞಾನದ ಸದ್ಭಳಕೆ, ನಿಖರ ಅನುಷ್ಠಾನಗಳ ಸಾಂಘಿಕ ಪ್ರಯತ್ನಗಳಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಕಧೇವಲ ಸರ್ವೇ ಮಾತ್ರವಲ್ಲ ಕೊರೋನಾ ಪತ್ತೆಗೆ ರಾಜ್ಯವು ತಂತ್ರಜ್ಞಾನವನ್ನು ಬಳಸಿಕೊಂಡಿರುವ ರೀತಿಗೂ ಕೇಂದ್ರ ಸರಕಾರ ಮೆಚ್ಚುಗೆ ಸೂಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “Corona survey : ದೇಶಕ್ಕೇ ಮಾದರಿ, ರಾಜ್ಯದ 1.5 ಕೋಟಿ ಮನೆಗಳಲ್ಲಿ ಕೊರೋನಾ ಸರ್ವೇ…

  • September 14, 2020 at 1:06 pm
    Permalink

    For hottest information you have to go to see internet and on web I found
    this web site as a most excellent web page for newest updates.

    Reply

Leave a Reply

Your email address will not be published.

Verified by MonsterInsights