ಡಿ. 27ಕ್ಕೆ ಮೋದಿ ಮನ್‌-ಕೀ-ಬಾತ್: ‘ಅಂಬಾನಿ ಮೊಮ್ಮಗನಿಗೆ ಹೆಸರು ಸೂಚಿಸಿ’ ಪೋಸ್ಟ್‌ ವೈರಲ್‌!

ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿ ತಿಂಗಳು ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಡಿಸೆಂಬರ್‌ ತಿಂಗಳ ಕಾರ್ಯಕ್ರಮವನ್ನು ಡಿ. 27ರಂದು ನಡೆಸುವುದಾಗಿ ಟ್ವೀಟ್‌ ಮಾಡಿದ್ದಾರೆ

ಈ ಹಿನ್ನೆಲೆಯಲ್ಲಿ, ಮೋದಿಯ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಟೀಕಿಸಿ ಹಂಚಿಕೊಳ್ಳಲಾಗಿರುವ “ಬಾಯಿಯೂ ಓರ್ ಬಹಿನೋ ಅಂಬಾನಿ ಮೊಮ್ಮಗನಿಗೊಂದು ಒಳ್ಳೆಯ ಹೆಸರು ಹುಡುಕಿಕೊಡಿ” ಎಂಬ ಫೇಸ್‌ಬುಕ್‌ ಪೋಸ್ಟ್‌ ವೈರಲ್‌ ಆಗುತ್ತಿದೆ.

ಕಳೆದ ಹಲವು ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮೋದಿಯವರು, ಚನ್ನಪಟ್ಟಣದ ಗೊಂಬೆ, ಮುಧೋಳ ನಾಯಿ ಸೇರಿದಂತೆ ಇಂತಹ ವಿಚಾರಗಳ ಬಗ್ಗೆ ಮಾತನಾಡಿದ್ದರು.

ದೇಶವನ್ನು ಕಾಡುತ್ತಿರುವ ಲಾಕ್‌ಡೌನ್‌ ಎಫೆಕ್ಟ್‌, ಆರ್ಥಿಕ ಕುಸಿತ, ಚೀನಾ ಜೊತೆಗಿನ ಗಡಿ ವಿವಿಧ ಇಂತಹ ಗಂಭೀರ ಸಮಸ್ಯೆ-ಸವಾಲುಗಳ ನಡುವೆಯೂ, ಈ ವಿಚಾರಗಳನ್ನು ಮಾತನಾಡುವುದರ ಬದಲಿಗೆ ಗೊಂಬೆ, ನಾಯಿ ಎಂದು ಮಾತನಾಡಿದ್ದ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ರೈತರ ಹೋರಾಟದ ನಡುವೆಯೂ ಕಳೆದ ತಿಂಗಳು ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ, ಕೃ‍ಷಿ ನೀತಿಗಳು, ರೈತ ಪ್ರತಿಭಟನೆ ಬಗ್ಗೆ ಮಾತನಾಡಲಿಲ್ಲ. ಬದಲಾಗಿ ಧರ್ಮಗ್ರಂಥ-ಸಂಸ್ಕೃತಿ ಎಂದು ಮಾತನಾಡಿದ್ದರು.

ಈ ಹಿನ್ನೆಲೆಯಲ್ಲಿ ಈ ಬಾರಿಯ ಮನ್‌ ಕೀ ಬಾತ್‌ನಲ್ಲಿ ಅಂಬಾನಿ ಮೊಮ್ಮಗನಿಗೆ ನಾಮಕರಣ ಮಾಡುವ ಬಗ್ಗೆ ಮೋದಿ ಮಾತನಾಡುತ್ತಾರೆ. ಅವರಿಗೆ ಒಂದೊಳ್ಳೆ ಹೆಸರು ಸೂಚಿಸಿ ಎಂಬ ವ್ಯಂಗ್ಯದ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ.

ತಮ್ಮ ಮನ್‌ ಕೀ ಬಾತ್‌ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಈ ವರ್ಷವನ್ನು ಹೇಗೆ ಕಳೆದಿರಿ? ಮುಂದಿನ 2021ನೇ ವರ್ಷವನ್ನು ಯಾವ ರೀತಿ ಮುನ್ನಡೆಸುವಿರಿ? ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಈ ವರ್ಷದ ಕೊನೆಯ ಮನ್ ಕಿ ಬಾತ್ ಡಿಸೆಂಬರ್ 27 ರಂದು ನಡೆಯಲಿದೆ. ನಿಮ್ಮ ಸಂದೇಶವನ್ನು ನೀವು 1800-11-7800 ಗೆ ಕಳುಹಿಸಬಹುದು ಅಥವಾ ನಮೋ ಅಪ್ಲಿಕೇಶನ್ ಅಥವಾ ಮೈಗೋವಿ ಅಪ್ಲಿಕೇಶನ್‌ನಲ್ಲಿ ಕಳುಹಿಸಬಹುದು. ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.


ಇದನ್ನೂ ಓದಿ: ಕರ್ನಾಟಕದ ಚೆನ್ನಪಟ್ಟಣದ ಆಟಿಕೆಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕು: ಮನ್‌ ಕಿ ಬಾತ್‌ನಲ್ಲಿ ಮೋದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights