ನಿರ್ಗತಿಕ ಮಹಿಳೆಯ ಹತ್ಯೆಗೈದು, ಮೃತ ದೇಹವನ್ನು ಅತ್ಯಾಚಾರಗೈದ ಕಾಮುಕ: ಹಾಸನದಲ್ಲಿ ಅಮಾನವೀಯ ಘಟನೆ

ನಿರ್ಗತಿಕ ಮಹಿಳೆಯು ತನ್ನ ಕಾಮ ವಾಂಛೆಗೆ ಸಹಕರಿಸಲು ನಿರಾಕರಿಸಿದ  ಕಾರಣಕ್ಕಾಗಿ, ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಲ್ಲದೇ, ಮೃತಪಟ್ಟ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ಮೃತ ಶರೀರದ ಮೇಲೆ ಅತ್ಯಾಚಾರ ಎಸಗಿರುವ ಕ್ರೂರ ಘಟನೆ ಹಾಸನದಲ್ಲಿ ನಡೆದಿದೆ.

ಮಹಿಳೆಯನ್ನು ಹತ್ಯೆ ಮಾಡಿ ಮೃತದೇಹದ ಮೇಲೆ ಅತ್ಯಾಚಾರ ಮಾಡಿದ ಈ ಬರ್ಬರ ಪೈಶಾಚಿಕ ಕೃತ್ಯ ಸೋಮವಾರ ಮಧ್ಯ ರಾತ್ರಿ ಹಾಸನದ ಬಿ.ಎಂ. ರಸ್ತೆಯ ಎನ್‍.ಆರ್. ವೃತ್ತದ ಸಮೀಪವಿರುವ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಬಳಿ ನಡೆದಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ.

ಆ ಮಹಿಳೆ ಯಾರು ಎಂದು ತಿಳಿದುಬಂದಿಲ್ಲ. ಮೃತ ದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಹಾಸನ ನಗರ ಪೊಲೀಸರು ಪ್ರಕರಣ ದಾಖಲಿಸಿ, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಹೆಣ್ಣು ಮಕ್ಕಳ ಮೇಲೆ ಹಲ್ಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದರೂ ಮಹಿಳೆಯರಿಗೆ ರಕ್ಷಣೆ ನೀಡುವುಲ್ಲ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಭಿಕ್ಷುಕಿಯನ್ನು ಕೊಂಡು ಅತ್ಯಾಚಾರಗೈಯ್ಯುವ ಮಟ್ಟಕ್ಕೆ ಸಮಾಜ ಕೊಳೆತುಬಿಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗುತ್ತಿದೆಯಾದರೂ ಘಟನೆ ನಡೆದು ದಿನಕಳೆದರೂ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.


Read Also: ಮುಟ್ಟಿನ ಸಂದರ್ಭದಲ್ಲಿ ಕೊರೊನಾ ಕಿಟ್ ಜೊತೆಗೆ ಸ್ಯಾನಿಟರಿ ಪ್ಯಾಡ್ ಮತ್ತು ಡೈಪರ್ ಕೂಡ ಧರಿಸಬೇಕು: ವೈದ್ಯೆಯರ ಸಂಕಷ್ಟ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights