ಕೊರೊನಾ ಸೋಂಕು ತಗುಲಿದ್ದಕ್ಕೆ ಕಾಂಗ್ರೆಸ್ ನಾಯಕ ಆತ್ಮಹತ್ಯೆ!
ಕೊರೊನಾ ಸೋಂಕು ತಗುಲಿದ್ದಕ್ಕಾಗಿ ಹೆದರಿದ ಕಾಂಗ್ರೆಸ್ ನಾಯಕ ಸಿರಿಗಿರಿರೆಡ್ಡಿ ಗಂಗಿ ರೆಡ್ಡಿ ಯವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದಿದೆ.
ಕಡಪಾ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿರಿಗಿರಿರೆಡ್ಡಿ ಗಂಗಿ ರೆಡ್ಡಿ ಎಂಬುವವರಿಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ಕಾರಣ ರೈಲಿಗೆ ಸಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ಮೇಲೆ ಗಂಗಿ ರೆಡ್ಡಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಕಳೆದ ಭಾನುವಾರ ಅವರು ಆಸ್ಪತ್ರೆಯಿಂದ ಕಾಣೆಯಾಗಿದ್ದರು. ಇಂದು ಅವರ ಶವ ರೈಲು ಹಳಿಗಳ ಮೇಲೆ ದೊರೆತಿದ್ದು, ಕೊರೊನಾ ಸೋಂಕು ತಗುಲಿರುವ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆಗೆ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಅವರ ಸಾವಿಗೆ ಯಾರೂ ಜವಾಬ್ದಾರರಾಗಿರುವುದಿಲ್ಲ. ತನಗೆ ಕೋವಿಡ್ ಸೋಂಕು ಕಂಡು ಬಂದಿದ್ದು ಅದಕ್ಕಾಗಿ ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಬರೆದಿದೆ ಎಂದು ಡೆತ್ನೋಟ್ ವಶಕ್ಕೆ ಪಡೆದಿರುವ ರೈಲ್ವೆ ಸಬ್ ಇನ್ಸ್ಪೆಕ್ಟರ್ ವೈ ಶ್ರೀನಿವಾಸುಲು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಬಡವರಿಗೆ ಹಣ ನೀಡಬೇಕೇ ಹೊರತು ಕೈಗಾರಿಕೋದ್ಯಮಿಗಳಿಗೆ ತೆರಿಗೆ ಕಡಿತ ಮಾಡಬಾರದು – ರಾಹುಲ್ ಗಾಂಧಿ

