ಫ್ಯಾಕ್ಟ್‌ಚೆಕ್ : ಮಗುವಿಗೆ ಕಚ್ಚಿದ 30 ಸೆಕೆಂಡುಗಳಲ್ಲಿ ಸಾವನಪ್ಪಿದ ಹಾವು! ನಡೆದಿದ್ದೇನು?

ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಾಲ್ಕು ವರ್ಷದ ಮಗುವನ್ನು ಕಚ್ಚಿರುವ ವಿಷಕಾರಿ ನಾಗರ ಹಾವೊಂದು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಹೊಲದಲ್ಲಿ ಆಟವಾಡುತ್ತಿದ್ದ ವೇಳೆ 4 ವರ್ಷದ ಮಗುವಿಗೆ ನಾಗರ ಹಾವು ಕಚ್ಚಿದ್ದು 30 ಸೆಕೆಂಡುಗಳಲ್ಲಿ ನಾಗರ ಹಾವು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

Fact Check: Did This Snake Die After Biting a 4-Year-Old Kid in Gopalganj? Here's The Truth Behind Viral Video

ಘಟನೆಯಲ್ಲಿ ಹಾವು ಕಚ್ಚಿದ ರೋಹಿತ್ ಕುಮಾರ್ ಅವರ ನಾಲ್ಕು ವರ್ಷದ ಮಗ ಅನುಜ್ ಎಂದು ತಿಳಿದುಬಂದಿದೆ. ಮಾಧೋಪುರ ಗ್ರಾಮದ ಕುಚಯ್‌ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಸಾಮುಸಾ ಖಜೂರಿ ತೋಲಾ ಎಂಬಲ್ಲಿನ ತನ್ನ ಅಜ್ಜನ ಮನೆಗೆ ಬಂದಿದ್ದ ಈತ ಬುಧವಾರ ಸಂಜೆ ತನ್ನ ಮಾವನ ಮನೆಯ ಮುಂದೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಈ ವೇಳೆ ಹೊಲದಿಂದ ಬಂದ ನಾಗರ ಹಾವು  ಅನುಜ್‌ಗೆ ಕಚ್ಚಿತು. ಹಾವನ್ನು ನೋಡಿ ಉಳಿದ ಮಕ್ಕಳೆಲ್ಲ ಓಡಿಹೋಗಿದ್ದಾರೆ ಎನ್ನಲಾಗಿದೆ. ವೈರಲ್ ವಿಡಿಯೊದ ಸುದ್ದಿ ನಿಜವೇ ಎಂದು  ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮಾಧ್ಯಮ ವರದಿಗಳ ಪ್ರಕಾರ, ಬುಧವಾರ (ಜೂನ್ 22) ಸಂಜೆ ಕುಚೈಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನೊಬ್ಬ ತನ್ನ ಚಿಕ್ಕಪ್ಪನ ಮನೆಯ ಹೊರಗೆ ಆಟವಾಡುತ್ತಿದ್ದನು. ಆಗ ನಾಗರ ಹಾವು ಮಗುವಿನ ಕಾಲಿಗೆ ಕಚ್ಚಿದೆ. ಆಟವಾಡುತ್ತಿದ್ದ ಮಕ್ಕಳೆಲ್ಲ ಭಯದಿಂದ ಮನೆಗಳಿಗೆ ಓಡಿದರು. ನಂತರ ಬಾಲಕ ತನಗೆ ಹಾವು ಕಚ್ಚಿದೆ ಎಂದು ಕುಟುಂಬದವರಿಗೆ ತಿಳಿಸಿದ್ದಾನೆ, ತಕ್ಷಣವೆ ಆತನನ್ನು ತುರ್ತು ಚಿಕಿತ್ಸೆಗೆ ಸದರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ನ್ಯೂಸ್‌ 18 ವರದಿ ಮಾಡಿದೆ.

ನ್ಯೂಸ್ 18 ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಬಾಲಕನ ಸಂಬಂಧಿಯೊಬ್ಬರು ಆಟವಾಡುವಾಗ ಮಗುವಿಗೆ ನಾಗರ ಹಾವೊಂದು ಕಚ್ಚಿದ್ದು, ಅವನು ಓಡಿ ಬಂದು ನಮಗೆ ವಿಷಯ ಹೇಳಿದ ತಕ್ಕಣವೇ ನಾವು ಹೊರಗೆ ಹೋಗಿ ನೋಡಿದಾಗ ಹಾವು ಸತ್ತು ಹೋಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಬಾಲಕನಿಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದು, ಆತ ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಬಾಲಕನನ್ನು ಕಚ್ಚಿದ 30 ಸೆಕೆಂಡುಗಳಲ್ಲಿ ನಾಗರಹಾವು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಹಾವು ಬಾಲಕನಿಗೆ ಕಚ್ಚಿದೆ ಎಂಬ ಸುದ್ದಿ ತಿಳಿದ ಸ್ಥಳಿಯರು  ಅದನ್ನು ಕೊಲ್ಲಲು ಹೋಗುವಷ್ಟರಲ್ಲೆ ಹಾವು ಸಾವನ್ನಪ್ಪಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಹಾವು ಸಾವನಪ್ಪಿದ ಹಿಂದಿನ ರಹಸ್ಯವೇನು?

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ನಾಗರ ಹಾವು ಸಾವನಪ್ಪಿದ ಕುರಿತು ವಾಸ್ತವಾಂಶವನ್ನು ಪರಿಶೀಲಿಸಲು ಆಸ್ಪತ್ರ ವೈದ್ಯರನ್ನು ಸಂಪರ್ಕಿಸಿದಾಗ ವಾಸ್ತವವಾಗಿ ಹಾವು ಮಗುವಿಗೆ ಕಚ್ಚಿಯೇ ಇಲ್ಲ ವೈದ್ಯರು ಎಂದು ದೃಢಪಡಿಸಿದ್ದಾರೆ. ಸ್ಥಳಿಯರು ಹಾವನ್ನು ಕೊಂದಿರುವ ಸಾಧ್ಯತೆ ಇದೆ ಎಂದಿದಾರೆ, ಆದರೆ ಅದರ ಸಾವಿನ ಹೊಣೆಯನ್ನು ಹೊರಲು ಯಾರು ಸಿದ್ದರಿಲ್ಲ ಹಾಗಾಗಿ ಮಗುವಿಗೆ ಕಚ್ಚಿದ ಹಾವು 30 ಸೆಕೆಂಡುಗಳಲ್ಲಿ ಸತ್ತಿದೆ ಎಂದು ಹೇಳಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ ಮಗುವಿಗೆ ಹಾವು ಕಚ್ಚಿದ ತಕ್ಷಣವೆ ಹಾವು ಸತ್ತಿದೆ ಎಂಬ ಹೇಳಿಕೆಯ ವೈರಲ್ ಸುದ್ದಿಯು ಸಂಪೂರ್ಣ ಸುಳ್ಳು. ವಾಸ್ತವವಾಗಿ ಮಗುವಿಗೆ ಹಾವು ಕಚ್ಚಿಲ್ಲ ಆದರೆ ಹಾವನ್ನು ನೋಡಿದ ಅಕ್ಕಪಕ್ಕದ ಮನೆಯವರು ಮತ್ತು ಸ್ಥಳೀಯರು ಹಾವನ್ನು ಹೊಡೆದು ಕೊಂದಿದ್ದಾರೆ. ನಂತರ ಹಾವನ್ನು ಕೊಂದ ಆರೋಪವನ್ನು ಹೊರಲು ತಯಾರಿಲ್ಲದ ಸ್ಥಳೀಯರು ಮಗುವನ್ನು ಕಚ್ಚಿದ ಹಾವು ಸತ್ತು ಹೋಗಿದೆ ಎಂದು ಸುಳ್ಳು ಹೇಳಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಾವಿಗೆ ರೆಕ್ಕೆ ಇದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights