ಫ್ಯಾಕ್ಟ್‌ಚೆಕ್: ಹಾವಿಗೆ ರೆಕ್ಕೆ ಇದೆ ಎಂಬುದು ನಿಜವೇ?

ರೆಕ್ಕೆ ಇರುವ ಹಾವನ್ನು ನೀವು ನೋಡಿದ್ದೀರಾ, ನೋಡಿರದಿದ್ದರೆ ಇಲ್ಲಿ ನೋಡಿ ಎಂದು ಹಾವಿಗೆ ರೆಕ್ಕೆ ಇರುವಂತೆ ಕಾಣುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ವೈರಲ್ ಪೋಸ್ಟ್‌ಅನ್ನು ನಿಜವೆಂದು ಹಲವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿರುವ ರೆಕ್ಕೆಯ ಹಾವಿನ ಬಗ್ಗೆ ಇರುವ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ ಕಲಾವಿದರು ಮತ್ತು ಕಲಾ ಉತ್ಸಾಹಿಗಳಿಗಾಗಿ ಲಭ್ಯವಿರುವ ಆನ್‌ಲೈನ್ ಸೋಶಿಯಲ್ ಕಮ್ಯುನಿಟಿ ಡಿವಿಯಂಟ್ ಆರ್ಟ್‌ನಲ್ಲಿ ವೈರಲ್ ಚಿತ್ರವನ್ನು ಹೋಲುವ ರೆಕ್ಕೆಯ ಹಾವಿನ ಪೋಟೋ ಲಭ್ಯವಾಯಿತು. ವೈರಲ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚಿತ್ರವು ನಿಜವಾಗಿಯೂ ರೆಕ್ಕೆ ಇರುವ ಜೀವಂತ ಹಾವಲ್ಲ, ಹಾವಿನ ಚಿತ್ರಕ್ಕೆ ರೆಕ್ಕೆ ಇರುವಂತೆ ಡಿಜಿಟಲ್ ಗ್ರಾಫಿಕ್ಸ್ ಬಳಸಿ ರಚಿಸಲಾಗಿದೆ.

‘ಕುರಾಮಯ್’ ಎಂಬ ಹೆಸರಿನ ಬಳಕೆದಾರರು 2010 ರಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅವರು ಅದನ್ನು ಕಂಪ್ಯೂಟರ್ ಗ್ರಾಫಿಕ್ ಯೋಜನೆಗಾಗಿ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಅವರು ಎರಡು ಪ್ರತ್ಯೇಕ ಮೂಲಗಳನ್ನು ಒದಗಿಸಿದ್ದು, ಅದರಲ್ಲಿ ಅವರು ಪ್ರತ್ಯೇಕವಾಗಿ ಹಾವು ಮತ್ತು ರೆಕ್ಕೆಗಳ ಚಿತ್ರಗಳನ್ನು ಸಂಗ್ರಹಿಸಿ, ಡಿಜಿಟಲ್ ಉಪಕರಣಗಳನ್ನು ಬಳಸಿಕೊಂಡು ಚಿತ್ರವನ್ನು ರಚಿಸಲಾಗಿದೆ ಎಂಬ ಅಂಶವನ್ನು ಹೇಳಿದ್ದಾರೆ.


ರೆಕ್ಕೆಯ ಹಾವಿನಂತೆ ಯಾವುದೇ ಜೀವಿ ಅಸ್ತಿತ್ವದಲ್ಲಿಲ್ಲ. ಈ ಹಿಂದೆಯೂ ಇಂತಹ ಜೀವಿಗಳ ಅಸ್ತಿತ್ವವನ್ನು ತೋರಿಸಲು ಯಾವುದೇ ದಾಖಲಿತ ಪುರಾವೆಗಳು ಅಥವಾ ಚಿತ್ರಗಳಿಲ್ಲ. ಆದರೂ, 2017 ರಲ್ಲಿ, ವಿಜ್ಞಾನಿಗಳು ಪೂರ್ವ ಟೆನ್ನೆಸ್ಸಿಯ ಸಿಂಕ್ ರಂಧ್ರದಲ್ಲಿ ರೆಕ್ಕೆಯ ಸರ್ಪದ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಹ-ಲೇಖಕರಾದ ಪ್ಯಾಲಿಯಂಟಾಲಜಿಸ್ಟ್‌ಗಳ  ಸಂಶೋಧನಾ ಪ್ರಬಂಧದ ಪ್ರಕಾರ, ರೆಕ್ಕೆಯುಳ್ಳ ಸರ್ಪವು ಐದು ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿತ್ತು. ಮತ್ತು ಆಶ್ಚರ್ಯಕರವಾಗಿ, ಹಾವಿನ ಪಳೆಯುಳಿಕೆಗಳು, ಜೀವಂತ ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಹೊಂದಿಕೆಯಾಗಲಿಲ್ಲ. ಹಾಗಾಗಿ ರೆಕ್ಕೆ ಇರುವ ಹಾವುಗಳು ಇದೆ ಎಂಬುದಕ್ಕೆ ಯಾವುದೇ ಸುಳಿವುಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರೆಕ್ಕೆಯ ಹಾವಿನ ಡಿಜಿಟಲ್ ಚಿತ್ರವನ್ನು ನಿಜವಾದ ಹಾವು ಎಂದು ಹಂಚಿಕೊಳ್ಳಲಾಗುತ್ತಿದೆ.  2010 ರಲ್ಲಿ ಡಿವಿಯಂಟ್ ಆರ್ಟ್‌ನಲ್ಲಿ ಇದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾವು ಮತ್ತು ರೆಕ್ಕೆಗಳ ಚಿತ್ರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ ಎರಡು ಬೇರೆ ಬೇರೆ ಮೂಲಗಳನ್ನು ಸಹ ಹಂಚಿಕೊಂಡಿದ್ದಾರೆ. ಪ್ರಸ್ತುತ ರೆಕ್ಕೆಯ ಹಾವಿನಂತಹ ಯಾವುದೇ ಜೀವಿ ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದಕ್ಕೆ, ಅರ್ನಾಬ್ ಗೋಸ್ವಾಮಿ ಡ್ಯಾನ್ಸ್ ಮಾಡಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights