ಫ್ಯಾಕ್ಟ್‌ಚೆಕ್: BJP ಕಾರ್ಯಕಾರಿಣಿ ಸಭೆಯಲ್ಲಿ ಹೆಂಡದ ಹೊಳೆ! ವೈರಲ್ ವಿಡಿಯೊದ ಹಿಂದಿನ ಅಸಲಿಯತ್ತೇನು?

BJPಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಹೈದರಾಬಾದ್‌ನಲ್ಲಿ ನಡೆಯಿತು.  ಭಾನುವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದ್‌ನಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮದ್ಯ ಹಂಚಲಾಗಿದೆ ಎಂದು ಪ್ರತಿಪಾದಿಸಿ ಹಲವು ವಿಡಿಯೋಗಳು ಹರಿದಾಡುತ್ತಿವೆ.

ವ್ಯಕ್ತಿಯೊಬ್ಬ ಬಿಜೆಪಿ ಟೋಪಿ ಮತ್ತು ಶಾಲು ಧರಿಸಿ ಮದ್ಯ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ವಕೀಲ ಪ್ರಶಾಂತ್ ಭೂಷಣ್ ಈ ವಿಡಿಯೋವನ್ನು ಟ್ವೀಟ್ ಮಾಡಿ, “ವಾವ್ ಮೋದಿ ಜೀ, ನಿಮ್ಮ ಪಕ್ಷವು ತೆಲಂಗಾಣವನ್ನೂ ಗೋವಾವನ್ನಾಗಿ ಮಾಡಿದೆ, ಸಖತ್ ಮಜಾ ಅಲ್ವಾ” ಎಂದು ಹೇಳುತ್ತ ಹೈದರಾಬಾದ್‌ನಲ್ಲಿ ನಡೆದ BJP ಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ದೃಶ್ಯ ಎಂದು ಇದನ್ನು ಹಂಚಿಕೊಂಡಿದ್ದಾರೆ.

ಲೋಕಸಭೆಯ ಮಾಜಿ ಸಂಸದ ಕೀರ್ತಿ ಆಜಾದ್ ಟ್ವೀಟ್ ಮಾಡಿ, “ಪ್ರಧಾನಿ ನರೇಂದ್ರ ಮೋದಿ ಅವರು ಒಳಗೆ ಭಾಷಣ ಮಾಡುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ಹೊರಗೆ ಭಾರತದ ಗೌರವಾರ್ಥ ವೈನ್ ಮತ್ತು ಕಬಾಬ್ ಅನ್ನು ಆನಂದಿಸುತ್ತಿದ್ದರು. ಇದು ಅವರ ಹಿಂದೂ ಧರ್ಮದ ನಿಜವಾದ ಮುಖ. ಇದು ಅಪಹಾಸ್ಯಕ್ಕೆ ಯೋಗ್ಯವಾಗಿಲ್ಲ. ಅವಮಾನದ ಪರಮಾವಧಿ” ಎಂದು ಹೇಳಿದ್ದಾರೆ.

ಇದೇ ವೀಡಿಯೋವನ್ನು ಹಲವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ತೆಲಂಗಾಣದವರು ಎಂದು ಹೇಳಿಕೊಂಡಿದ್ದಾರೆ. ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಿಂದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮಜ್ ಮೂಲಕ ಸರ್ಚ್ ಮಾಡಿದಾಗ,ವೈರಲ್ ವಿಡಿಯೊ ಕನಿಷ್ಠ 2021 ರಿಂದ ಇಂಟರ್ನೆಟ್‌ನಲ್ಲಿ ಪ್ರಸಾರವಾಗುತ್ತಿದೆ. ಈ ವೀಡಿಯೊವನ್ನು ಹಲವು ಕಾಂಗ್ರೆಸ್ ನಾಯಕರು ಮತ್ತು ಉತ್ತರ ಪ್ರದೇಶ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಡಿಸೆಂಬರ್ 20, 2021 ರಂದು ಟ್ವೀಟ್ ಮಾಡಿದೆ.

ಉತ್ತರ ಪ್ರದೇಶದ ಹರಿದ್ವಾರದಲ್ಲಿ 2021 ರ ಡಿಸೆಂಬರ್‌ನಲ್ಲಿ ಬಿಜೆಪಿ ನಾಯಕ ಜೆಪಿ ನಡ್ಡಾ ಅವರ ರ್ಯಾಲಿಯ ಸಂದರ್ಭದಲ್ಲಿ ವೈರಲ್ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆ ಸಮಯದಲ್ಲಿ ಹಲವಾರು ಸುದ್ದಿವಾಹಿನಿಗಳು ಈ ವೀಡಿಯೊವನ್ನುಪ್ರಸಾರ ಮಾಡಿದ್ದವು. ಆದರೂ ಈ ವಿಡಿಯೊವನ್ನು ಯಾವ ಸಂದರ್ಭದಲ್ಲಿ ಸೆರೆಹಿಡಯಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲ. ಆದರೂ ಹಲವು ಸಂದರ್ಭದಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ವೀಡಿಯೊ ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಭೆಯದ್ದಲ್ಲ ಎಂದು ತೀರ್ಮಾನಿಸಬಹುದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಮತಯಾಚನೆಗೆ ಬಂದ ಕೌನ್ಸಿಲರ್‌ನನ್ನು ಅಪಹರಿಸಲಾಗಿದೆ ಎಂಬುದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights