ಬೂಸ್ಟರ್‌ ಡೋಸ್‌ ಪಡೆಯಲು ನಿಯಮಗಳು ಜಾರಿ: 2ನೇ ಡೋಸ್‌ ಪಡೆದ 9 ತಿಂಗಳ ನಂತರವೇ 3ನೇ ಡೋಸ್‌!

ಕೊರೊನಾ ವಿರುದ್ದ ನೀಡಲಾಗುತ್ತಿರುವ 2 ಡೋಸ್‌ಗಳ ವ್ಯಾಕ್ಸಿನ್‌ ಜೊತೆಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. 2ನೇ ಡೋಸ್‌ ವ್ಯಾಕ್ಸಿನ್‌ ಪಡೆದ 39 ವಾರಗಳ (9 ತಿಂಗಳು) ಬಳಿಕ ಬೂಸ್ಟರ್‌ ಡೋಸ್‌ ಪಡೆಯಬಹುದು ಎಂದು ಸರ್ಕಾರ ಹೇಳಿದೆ.

ಎರಡು ಮತ್ತು ಮೂರನೇ ಡೋಸ್ ನಡುವೆ 9 ತಿಂಗಳ ಅಂತರವಿರಬೇಕು. 9 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಸಿಗಲಿದೆ ಎಂದು ಸರ್ಕಾರದ ನಿಯಮಗಳು ಹೇಳಿವೆ.

2022ರ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು. ಬೂಸ್ಟರ್ ಡೋಸ್ ಪಡೆಯಲು ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ಬೂಸ್ಟರ್ ಡೋಸ್ ಲಸಿಕೆ ಪಡೆಯಬಹುದು. ನೋಂದಣಿ ವೇಳೆ ವೈದ್ಯರ ಸಲಹೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು ಎಂದು ಹೇಳಲಾಗಿದೆ.

ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಸಹ-ಅಸ್ವಸ್ಥತೆಯಿಂದ ಬಳಲುತ್ತಿರುವವರು ಜನವರಿ 10 ರಿಂದ ಬೂಸ್ಟರ್‌ ಡೋಸ್‌ ಪಡೆಯಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು.

ಆದಾಗ್ಯೂ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್.ಎಸ್. ಶರ್ಮಾ ಅವರು, ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್‌ ಡೋಸ್ ಪಡೆಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಪ್ರತಿದಿನ 14 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುವ ಸ್ಥಿತಿ ಎದುರಾಗಬಹುದು: ಕೇಂದ್ರ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights