ಫ್ಯಾಕ್ಟ್‌ಚೆಕ್ : ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದಕ್ಕೆ, ಅರ್ನಾಬ್ ಗೋಸ್ವಾಮಿ ಡ್ಯಾನ್ಸ್ ಮಾಡಿದರೆ?

ಮಹಾರಾಷ್ಟ್ರದ  ಉದ್ಧವ್ ಠಾಕ್ರೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರು ನೃತ್ಯ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ವಿಡಿಯೊದ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 2010 ರಲ್ಲಿ ಯೂಟ್ಯೂಬ್‌ನಲ್ಲಿ ಅದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.  ಯೂಟ್ಯೂಬ್‌ನಲ್ಲಿರುವ ಮೂಲ ವೀಡಿಯೊವನ್ನು 3:15 ಸಮಯದ ವಿಡಿಯೊವನ್ನು ಎಡಿಟ್ ಮಾಡಿ ವೈರಲ್ ವಿಡಿಯೊವನ್ನು ಮಾಡಲಾಗಿದೆ. ಯೂಟ್ಯೂಬ್ ವೀಡಿಯೋ ಪ್ರಕಾರ, ಈ ದೃಶ್ಯಗಳು ‘ಟೈಮ್ಸ್ ನೌ’ ಸುದ್ದಿ ವಾಹಿನಿಯ ಪ್ರಾರಂಭದಲ್ಲಿ ಆಯೋಜಿಸಲಾದ ಪಾರ್ಟಿಯ ಸಂದರ್ಭದಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗಿದೆ. ರಿಪಬ್ಲಿಕ್ ಟಿವಿಯನ್ನು ಪ್ರಾರಂಭಿಸುವ ಮೊದಲು, ಅರ್ನಾಬ್ ಗೋಸ್ವಾಮಿ ಟೈಮ್ಸ್ ನೌ ನಲ್ಲಿ ಪ್ರೈಮ್ ಟೈಮ್ ಆಂಕರ್ ಆಗಿ ಕೆಲಸ ಮಾಡಿದರು. ಟೈಮ್ಸ್ ನೌ ಅನ್ನು 2006 ರಲ್ಲಿ ಪ್ರಾರಂಭಿಸಲಾಯಿತು.

ವಿಡಿಯೋವನ್ನು ಯಾವಾಗ ತೆಗೆದಿರಿಸಲಾಗಿದೆ ಎಂದು ನಮಗೆ ಕಂಡುಹಿಡಿಯಲಾಗಲಿಲ್ಲವಾದರೂ, ವೀಡಿಯೊವನ್ನು ಕನಿಷ್ಠ 2010 ರಿಂದ ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಿದ ನಂತರ ಅರ್ನಾಬ್ ಗೋಸ್ವಾಮಿ ನೃತ್ಯದ ಯಾವುದೇ ಇತ್ತೀಚಿನ ವೀಡಿಯೊಗಳನ್ನು ನಾವು ಕಂಡುಹಿಡಿಯಲಾಗಲಿಲ್ಲ. 2020ರಲ್ಲಿ ಮಹಾರಾಷ್ಟ್ರ ಸರ್ಕಾರ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಬಂಧಿಸಿತ್ತು, ಈಗ ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅರ್ನಾಬ್ ಗೋಸ್ವಾಮಿಗೆ ಖುಷಿಯಾಗಿದೆ ಎಂದು ಎರಡಕ್ಕೂ ಸಂಬಂಧ ಕಲ್ಪಿಸಿ ಅರ್ನಾಬ್ ನೃತ್ಯ ಮಾಡಿದ್ದಾರೆ ಹಳೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅರ್ನಾಬ್ ಗೋಸ್ವಾಮಿ ನೃತ್ಯದ ಹಳೆಯ ವೀಡಿಯೊವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವೀಡಿಯೊ ಕನಿಷ್ಠ 2010 ರಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ ನಂತರ ಅರ್ನಾಬ್ ಗೋಸ್ವಾಮಿ ನೃತ್ಯ ಮಾಡಿದ ಯಾವುದೇ ಇತ್ತೀಚಿನ ವೀಡಿಯೊಗಳು ಕಂಡುಬಂದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights