ಫ್ಯಾಕ್ಟ್‌ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಉಪ್ಪಿನಿಂದ ಮುಚ್ಚುವ ಮೂಲಕ  ಮತ್ತೆ ಬದುಕಿಸಬಹುದು ಎಂಬ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾನು ಅವನ ಜೀವವನ್ನು ಮರಳಿ ತರಬಲ್ಲೆ, ಯಾರಾದರೂ ಅಂತಹ ಅಪಘಾತವನ್ನು ನೋಡಿದ್ದರೆ ಅಥವಾ ಕೇಳಿದರೆ, ತಕ್ಷಣ ನಮಗೆ ತಿಳಿಸಿ. ಮುಳುಗುವಿಕೆಗೆ ಚಿಕಿತ್ಸೆ ನೀಡುತ್ತಿವೆ ಎಂದು ಪೋಸ್ಟ್‌ನಲ್ಲಿ ಬರೆದು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನೀಡಿದ್ದು ಅದಕ್ಕೆ ಕರೆ ಮಾಡಿದರೆ ಸ್ವಿಚ್ಡ್‌ ಆಫ್ ಬರುತ್ತಿದೆ.

ಫೇಸ್‌ಬುಕ್‌ನಲ್ಲಿ ವೈರಲ್ ಆದ ಪೋಸ್ಟ್‌
ಫೇಸ್‌ಬುಕ್‌ನಲ್ಲಿ ವೈರಲ್ ಆದ ಪೋಸ್ಟ್‌

ಕೆಲವರು ಈ ಪೋಸ್ಟ್‌ಅನ್ನು ನಮ್ಮ ಏನ್‌ಸುದ್ದಿ ವಾಟ್ಸಾಪ್‌ ಗೂ ಕಳುಹಿಸಿ ಫ್ಯಾಕ್ಟ್‌ಚೆಕ್ ಮಾಡಲು ವಿನಂತಿ ಮಾಡಿದ್ದರು, ಹಾಗಾಗಿ ವೈರಲ್ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಾಸತ್ಯತೆಗಳು ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ನೀರಿನಲ್ಲಿ ಮುಳುಗಿ ತೀರಿಕೊಂಡ ವ್ಯಕ್ತಿಯನ್ನು ಬದುಕಿಸಲು  ಪೋಸ್ಟ್‌ನಲ್ಲಿ ಹೇಳಿರುವ ವಿಧಾನದಲ್ಲಿ ಸಾಧ್ಯವಿಲ್ಲ ಅಲ್ಲದೆ ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿಲ್ಲ. ಇದಕ್ಕೆ ಯಾವುದೇ ಆಧಾರಗಳೂ ಕೂಡ ಇಲ್ಲ. ನೀರಿನಲ್ಲಿ ಮುಳಿಗಿ ಸತ್ತ ವ್ಯಕ್ತಿಯ ದೇಹವನ್ನು ಉಪ್ಪಿನಿಂದ ಮುಚ್ಚಿ ಜೀವ ತರಿಸುವ ಚಿಕಿತ್ಸೆ ಯಶಸ್ವಿಯಾದ ಯಾವ ಪ್ರಕರಣವೂ ಕಂಡುಬಂದಿಲ್ಲ. ಆದರೆ ನೀರಿನಲ್ಲಿ ಮುಳುಗಿದ ಜನರಿಗೆ ಚಿಕಿತ್ಸೆ ನೀಡಲು ಸೂಚಿಸಲಾದ ಕೆಲವು ವಿಧಾನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ಹಿಂದೆ ಜನರು ಮೂಢನಂಬಿಕೆಯಿಂದ ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿದ ಅನೇಕ ನಿದರ್ಶನಗಳಿವೆ. ಆದರೆ, ಅವರಲ್ಲಿ ಯಾರೊಬ್ಬರೂ ಮತ್ತೆ ಬದುಕಿದ ಉದಾಹರಣೆ ಇಲ್ಲ. ಅಂತಹ ಕೆಲವು ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಒಟ್ಟಾರೆಯಾಗಿ ಹೇಳುವುದಾದರೆ,  ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯ ದೇಹವನ್ನು ಉಪ್ಪಿನಿಂದ ಮುಚ್ಚುವ ಮೂಲಕ ಬದುಕಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಹಿಂದೆಲ್ಲ ಜನರು ಮೂಢನಂಬಿಕೆಯಿಂದ ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿದ ಅನೇಕ ನಿದರ್ಶನಗಳಿವೆ. ಆದರೆ, ಅವರಲ್ಲಿ ಯಾರೊಬ್ಬರೂ ಮತ್ತೆ ಬದುಕಿದ ಉದಾಹರಣೆಯಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. ಮತ್ತು ಇಂತವುಗಳನ್ನು ನಂಬಿ ಸಂದೇಶವನ್ನು ಮತ್ತೊಬ್ಬರಿಗೆ ಹಂಚಬೇಡಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಜಾಬ್ ತೆಗಿಸಲು ಬಂದ ವ್ಯಕ್ತಿ ಮೇಲೆ ಹಲ್ಲೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights