ಮಹಾರಾಷ್ಟ್ರದಲ್ಲಿ ಭವಿಷ್ಯ ಕಳೆದುಕೊಳ್ಳುತ್ತಿದೆ BJP: ಕೇಸರಿ ಪಕ್ಷದ ದೋಷಗಳು ಹೀಗಿವೆ!

ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳೂ, ವಿರೋಧಿಗಳೂ ಆಗಿದ್ದ ಶಿವಸೇನೆ ಮತ್ತು ಕಾಂಗ್ರೆಸ್‌-ಎನ್‌ಸಿಪಿ ಪಕ್ಷಗಳ ಮೈತ್ರಿಯಿಂದ ಬಿಜೆಪಿ ಅಧಿಕಾರದಿಂದ ದೂರ ಉಳಿದಿದೆ. ಅಲ್ಲದೆ, ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕೇಸರಿ ಪಕ್ಷ ಹೆಣಗಾಡುತ್ತಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಹಲವರು ಎನ್‌ಸಿಪಿ ಅಥವಾ ಸೇನಾಗೆ ಸೇರುತ್ತಿದ್ದಾರೆ.

ರಾಜಸ್ಥಾನದಲ್ಲಿ ಪಕ್ಷದ ಮಾಸ್‌ ಲೀಡರ್‌ಗಳಲಾಗಿದ್ದ ಗೋಪಿನಾಥ್ ಮುಂಡೆ ಮತ್ತು ಪ್ರಮೋದ್ ಮಹಾಜನ್ ಅವರ ನಿಧನದ ನಂತರ ಪಕ್ಷವು ಅನಾಥಸ್ಥಿತಿ ಎದುರಿಸುತ್ತಿದೆ. ಇತ್ತೀಚೆಗೆ ಎನ್‌ಸಿಪಿ ಸೇರಿದ ಹಿರಿಯ ರಾಜಕಾರಣಿ ಏಕನಾಥ್ ಖಡ್ಸೆ, ಬಿಜೆಪಿಯು ಪ್ರಾಮಾಣಿಕ ಕಾರ್ಯಕರ್ತರ ಪಕ್ಷವಲ್ಲ ಎಂದು ಹೇಳಿದ್ದರು.

“ನಾನು ಸುಮಾರು 40 ವರ್ಷಗಳನ್ನು ಬಿಜೆಪಿಯಲ್ಲಿ ಕಳೆದಿದ್ದೇನೆ. ರಾಜ್ಯದ ಮೂಲೆ – ಮೂಲೆಯಲ್ಲಿ ಪಕ್ಷವನ್ನು ವಿಸ್ತರಿಸಲು ಶ್ರಮಿಸಿದ್ದೇನೆ. ಬಿಜೆಪಿಗೆ ಯಾರೂ ಸೇರಲು ಇಷ್ಟಪಡದ ದಿನಗಳು ಇದ್ದವು. ಜನರು ನಮ್ಮನ್ನು ‘ಬ್ರಾಹ್ಮಣ-ಬನಿಯಾ ಪಕ್ಷ’ ಎಂದು ಟೀಕಿಸುತ್ತಿದ್ದರು. ಪಕ್ಷದ ಚಿತ್ರಣವನ್ನು ಬದಲಾಯಿಸಲು ನಮ್ಮ ನಾಯಕರಾದ ಮುಂಡೆ ಮತ್ತು ಮಹಾಜನ್ ಅವರೊಂದಿಗೆ ನಾನು ಶ್ರಮಿಸಿದೆ. ಆದರೆ, ಈಗ ಪಕ್ಷದಲ್ಲಿ ನನಗೆ ಅವಮಾನ ಮಾಡಲಾಗಿದೆ. ಈ ಪಕ್ಷಕ್ಕೆ ರಾಜ್ಯದಲ್ಲಿ ಭವಿಷ್ಯವಿಲ್ಲ” ಎಂದು ಖಡ್ಸೆ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಂಕಾದ BJP: ಪಕ್ಷದ ಕಳಪೆ ಸಾಧನೆಗೆ ಸಿಟ್ಟಾದ ಅಮಿತ್‌ ಶಾ ಕಠಿಣ ನಿಲುವು?

ರಾಜ್ಯದ ಈಗಿನ ನಾಯಕತ್ವವು ಸ್ಥಳೀಯ ನಾಯಕರ ಗುಂಪುಗಳನ್ನು ಸಮೂಹವಾಗಿ ಧೀರ್ಘಕಾಲ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಶೀಘ್ರದಲ್ಲೇ ಕಾರ್ಯಕರ್ತರು ಪಕ್ಷವನ್ನು ತೊರೆಯುತ್ತಾರೆ. ಅವರೆಲ್ಲರೂ ಎನ್‌ಸಿಪಿಗೆ ಸೇರಲಿದ್ದಾರೆ. ನಮ್ಮ ಮಹಾವಿಕಾಸ್‌ ಅಘಾಡಿ ಸರ್ಕಾರವು ಸ್ಥಿರವಾಗಿಯೂ, ಸುರಕ್ಷಿತವಾಗಿಯೂ ಇದೆ. ಸರ್ಕಾರ ಬೀಳುವ ಮಾತೆ ಇಲ್ಲ ಎಂದು ರಾಜ್ಯ ಸಚಿವ, ಎನ್‌ಸಿಪಿ ನಾಯಕ ನಾವಾಬ್ ಮಲಿಕ್‌ ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಸಿಪಿ ಮತ್ತು ಸೇನಾ ಒಟ್ಟಾಗಿ ಹೋರಾಡಲಿವೆ. ಆದ್ದರಿಂದ ಅಧಿಕಾರಕ್ಕಾಗಿ ಬಿಜೆಪಿಗೆ ಸೇರಿದ ಎಲ್ಲರೂ ಕೇಸರಿ ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬುದನ್ನು ಕಾಣುತ್ತಿದ್ದಾರೆ. ಅನೇಕ ಬಿಜೆಪಿ ನಾಯಕರು ಹಳೆಯ ಪ್ರಕರಣಗಳಿಗೆ ನೋಟಿಸ್ ಪಡೆಯಲು ಪ್ರಾರಂಭಿಸಿದ ನಂತರ ಪ್ರಕ್ಷುಬ್ಧರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಗಿರೀಶ್ ಮಹಾಜನ್ ವಿರುದ್ಧ ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅವರು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಆಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ.

ಎಂಎಂಸಿ ಪ್ರಸಾದ್ ಲಾಡ್ ಅವರು 2014ರಲ್ಲಿ ಬಿಎಂಸಿಯಲ್ಲಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ರಾಜ್ಯದ ಆರ್ಥಿಕ ಅಪರಾಧ ವಿಭಾಗವು ಅವರಿಗೆ ನೋಟಿಸ್ ನೀಡಿದೆ. ಪರಿಷತ್ತಿನ ಪ್ರತಿಪಕ್ಷ ನಾಯಕ ಪ್ರವೀಣ್ ದಾರೇಕರ್ ಅವರು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿ ಪಕ್ಷದ ಭವಿಷ್ಯವು ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿಯ ಮತ್ತೊಬ್ಬ ಮುಖಂಡರು ಹೇಳಿದ್ದಾರೆ.

ಔರಂಗಾಬಾದ್ ವಿಚಾರದಲ್ಲಿ ಕಾಂಗ್ರೆಸ್‌-ಸೇನಾ ನಡುವೆ ಬಿರುಕು:

ಔರಂಗಾಬಾದ್ ನಗರದ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಯಲ್ಲಿನ ಬಿರುಕು ಮೂಡುತ್ತಿದೆ. ಮುಖ್ಯಮಂತ್ರಿಗಳ ಕಚೇರಿ (ಸಿಎಮ್ಒ)ಯು ನಗರವನ್ನು ಸಂಭಾಜಿ ನಗರ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ. ಮರುನಾಮಕರಣವು ಮೈತ್ರಿಕೂಟದ ಯೋಜನಾ ಕಾರ್ಯಕ್ರಮದಲ್ಲಿ ನಮೂದಿಸಲಾಗಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ. ಮರುನಾಮಕರಣಕ್ಕೆ ಕಾಂಗ್ರೆಸ್‌ ವಿರೋಧವಿದೆ ಎಮದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಬಾಲಾಸಾಹೇಬ್ ಥೋರತ್ ಹೇಳಿದ್ದಾರೆ.


ಇದನ್ನೂ ಓದಿ: ಹೆಸರಿನಲ್ಲೇನಿದೆ ಎನ್ನುವಂತಿಲ್ಲ; ಹೆಸರಿನಿಂದಲೇ ಮಹಾರಾಷ್ಟ್ರ ಸರ್ಕಾರದಲ್ಲಿ ಬಿರುಕು ಆರಂಭವಾಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights