ಹೆಸರಿನಲ್ಲೇನಿದೆ ಎನ್ನುವಂತಿಲ್ಲ; ಹೆಸರಿನಿಂದಲೇ ಮಹಾರಾಷ್ಟ್ರ ಸರ್ಕಾರದಲ್ಲಿ ಬಿರುಕು ಆರಂಭವಾಗಿದೆ!

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಸರುಗಳನ್ನು ಬದಲಿಸುವ ಕಾರ್ಯದಲ್ಲಿ ಉತ್ಸುಕವಾಗಿದೆ. ಅದರಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಇಡೀ ರಾಜ್ಯವನ್ನು ಕೇಸರೀಕರಣಗೊಳಿಸಲು ಮುಂದಾಗಿದೆ. ಇದಕ್ಕೆ ತಾವೇನು ಕಮ್ಮಿ ಎಂಬಂತೆ ಮಹಾರಾಷ್ಟ್ರದ ಶಿವಸೇನೆಯೂ ಅದೇ ಹಾದಿ ಹಿಡಿದಿದೆ. ಮಹಾರಾಷ್ಟ್ರದ ಔರಂಗಾಬಾದ್‌ಗೆ ಸಂಭಾಜಿನಗರ್‌ ಎಂದು ಹೆಸರಿಡಲು ಶಿವಸೇನೆ ಮುಂದಾಗಿದೆ. ಅಧಿಕೃತವಾಗಿ ಹೆಸರು ಮರುನಾಮಕರಣವಾಗದೇ ಇದ್ದರೂ, ಶಿವಸೇನೆಯ ನಾಯಕರು ಸಂಭಾಜಿನಗರ್‌ ಎಂದೇ ಕರೆಯುತ್ತಿದ್ದಾರೆ.

ಹಸರಿನ ಮರುನಾಮಕರಣ ಮಹಾರಾಷ್ಟ್ರದ ಮೈತ್ರಿ  ಮಹಾ ವಿಕಾಸ್‌ ಅಗಾಡಿ ಸರ್ಕಾರದಲ್ಲಿ ಬಿರುಕು ಮೂಢಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್-ಎನ್ ಸಿಪಿ- ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಶಿವಸೇನೆ ಹಿಂದೂ ಮತಗಳ ದೃವೀಕರಣಗೊಳಿಸಿಕೊಂಡು ರಾಜಕೀಯ ಮಾಡುತ್ತಿದೆ. ಹಿಂದೂತ್ವವನ್ನು ಪ್ರತಿಪಾದಿಸುತ್ತದೆ. ಆದರೆ, ಉಳಿದೆರಡು ಪಕ್ಷಗಳು ತೀವ್ರತರದ ಹಿಂದೂತ್ವ ರಾಜಕಾರಣದಿಂದ ದೂರ ಉಳಿದಿವೆ. ಹೀಗಾಗಿ, ಔರಂಗಾಬಾದ್ ಗೆ ಸಂಭಾಜಿ ನಗರ್ ಎಂಬ ಹೆಸರನ್ನು ಮರುನಾಮಕರಣ ಮಾಡುತ್ತಿರುವುದು ಸರ್ಕಾರದಲ್ಲಿ ಬಿರುಕು ಮೂಡಿಸುತ್ತಿದೆ.

ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಮಂಕಾದ BJP: ಪಕ್ಷದ ಕಳಪೆ ಸಾಧನೆಗೆ ಸಿಟ್ಟಾದ ಅಮಿತ್‌ ಶಾ ಕಠಿಣ ನಿಲುವು?

ಸರ್ಕಾರದಿಂದ ಅಧಿಕೃತವಾಗಿ ಹೆಸರು ಬದಲಾವಣೆ ಮಾಡಲಾಗಿಲ್ಲ. ಇದಕ್ಕೆ ಕಾಂಗ್ರೆಸ್‌ ಆಕ್ಷೇಪವಿದೆ. ಆದರೂ ಶಿವಸೇನೆ ಸಂಭಾಜಿ ನಗರ್ ಎಂಬ ಹೆಸರನ್ನು ಬಳಕೆ ಮಾಡುತ್ತಿದೆ. ಈ ರೀತಿಯ ಹೆಸರಿನ ಬಳಕೆ ತಮ್ಮ ತೆಕ್ಕೆಯಲ್ಲಿರುವ ಓಟ್‌ ಬ್ಯಾಂಕ್‌ಅನ್ನು ಖುಷಿಪಡಿಸುವುದಕ್ಕಷ್ಟೇ ಎಂಬ ಅಭಿಪ್ರಾಯವೂ ಇದೆ.

ಇತ್ತೀಚೆಗೆ ಕಾಂಗ್ರೆಸ್‌ ಸಚಿವರನ್ನು ಟ್ಯಾಗ್‌ ಮಾಡಿ ಮುಖ್ಯಮಂತ್ರಿ ಕಚೇರಿ ಮಾಡಿದ್ದ ಟ್ವೀಟ್‌ನಲ್ಲಿ ಔರಂಗಾಬಾದ್ ಗೆ ಸಂಭಾಜಿ ನಗರ್ ಎಂದು ಉಲ್ಲೇಖಿಸಲಾಗಿತ್ತು. ಇದಕ್ಕೆ ತಕ್ಷಣವೇ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ತೀವ್ರ ವಿರೋಧ ವ್ಯಕ್ತಪದಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಇಲಾಖೆ ಯಾವುದೇ ಕಾರಣಕ್ಕೂ ತನ್ನಷ್ಟಕ್ಕೆ ತಾನೇ ನಗರಗಳ ಹೆಸರುಗಳನ್ನು ಬದಲಾವಣೆ ಮಾಡುವುದು ಸೂಕ್ತವಲ್ಲ. ಹೆಸರು ಬದಲಾವಣೆ ಬಗ್ಗೆ ಎಂವಿಎ ಯ ಯೋಜನೆಗಳಲ್ಲಿ ಪ್ರಸ್ತಾಪವಿಲ್ಲ ಎಂದು ಅವರು ಹೇಳಿದ್ದರು.

ಇದು ಮೈತ್ರಿ ಸರ್ಕಾರದೊಳಗೆ ಬಿರುಕಿನ ಕಾವು ಎದ್ದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಆದರೆ, ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ನಿಲುವುಗಳಿಗೆ ಬದ್ಧವಾಗಿದ್ದು ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.


ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಗ್‌ ಶಾಕ್‌: ಕೈ ಪಕ್ಷದ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights