ಫ್ಯಾಕ್ಟ್‌ಚೆಕ್: ಪಾಕ್ ಧ್ವಜ ಹಾರಿಸಿದ್ದ ಮಸೀದಿಯನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ನೆಲಸಮ ಮಾಡಿದ್ದು ನಿಜವೇ?

“ಯೋಗಿ ಬಾಬಾ ರಾಜ್ಯದಲ್ಲಿ, ಸೈದಾಬಾದ್ ಪ್ರಯಾಗ್ರಾಜ್ (U.P.) ಮಸೀದಿ ಮೇಲೆ ಜಿಹಾದಿಗಳು ದೇಶ ದ್ರೋಹಿಗಳು -ಪಾಕಿಸ್ತಾನದ ಧ್ವಜ ಹಾರಿಸಿದ ಕಾರಣ, ಯೋಗಿಜೀ ಮಸೀದಿಯನ್ನೇ ಕಿತ್ತು ಹಾಕಿದ್ದಾರೆ, ಯೋಗಿಜೀ ನಿಜವಾದ ಗಂಡು” ಎಂದರೆ ಗಂಡು ಭೂಪತಿ ಗಂಡು  ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಲವು ಬಲಪಂಥೀಯ ಪ್ರತಿಪಾದಕರು ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಹಲವರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಪ್ರಯಾಗ್‌ರಾಜ್ ನ ಸೈದಾಬಾದ್‌ನ ಮಾರುಕಟ್ಟೆಯಲ್ಲಿರುವ ಶಾಹಿ ಮಸೀದಿ ಮೇಲೆ ಪಾಕ್‌ ಧ್ವಜ ಹಾರಿಸಿದ ಕಾರಣಕ್ಕೆ ಮಸೀದಿಯನ್ನೆ ಬುಲ್ಡೋಜ್‌ ಮಾಡಲಾಗಿದೆ ಎಂದು ಪ್ರತಿಪಾದಿಸಿ ಪ್ರಸಾರ ಮಾಡಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ದಿನಾಂಕ 15, 2023ರ ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ.

ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಜಿಟಿ ರಸ್ತೆಯನ್ನು ವಿಸ್ತರಿಸಲು ಲೋಕೋಪಯೋಗಿ ಇಲಾಖೆಯ ಸಮ್ಮುಖದಲ್ಲಿ ಮಸೀದಿಯನ್ನು ಕೆಡವಲಾಯಿತು, ಆದರೆ ವಿಷಯವು ಕೆಳ ನ್ಯಾಯಾಲಯದಲ್ಲಿ ಜನವರಿ 16 ಕ್ಕೆ ಪಟ್ಟಿ ಮಾಡಲ್ಪಟ್ಟಿದೆ ಎಂದು ವರದಿಯಾಗಿದೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ದ ಅಂತರರಾಷ್ಟ್ರೀಯ ಜಲ ಸಹಕಾರದ ಮಾಜಿ ಅಧ್ಯಕ್ಷ ಅಶೋಕ್ ಸ್ವೈನ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಸೀದಿಯನ್ನು ಬುಲ್ಡೋಜರ್ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ದ ಅಂತರರಾಷ್ಟ್ರೀಯ ಜಲ ಸಹಕಾರದ ಮಾಜಿ ಅಧ್ಯಕ್ಷ ಅಶೋಕ್ ಸ್ವೈನ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಸೀದಿಯನ್ನು ಬುಲ್ಡೋಜರ್ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆಯು ಪ್ರಯಾಗ್‌ರಾಜ್‌ನಿಂದ ಹಲ್ದಿಯಾ ಜಿಟಿ ರಸ್ತೆವರೆಗೆ ಅಗಲೀಕರಣ ಮಾಡಲಾಗುತ್ತಿದ್ದು, ಶಾಹಿ ಮಸೀದಿಗೆ ಈಗಾಗಲೇ ನೋಟಿಸ್‌ ನೀಡಲಾಗಿತ್ತು, ಆದರೆ ಶಾಹಿ ಮಸೀದಿಯನ್ನು ಉಳಿಸಲು ಸ್ಥಳೀಯರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು, ಈ ಪ್ರಕರಣ ಸಿವಿಲ್ ಪ್ರಕಣವಾದ್ದರಿಂದ ಉಚ್ಚನ್ಯಾಯಾಲಯ ಪ್ರಕರಣವನ್ನು ಕೆಳನ್ಯಾಯಾಲಯಕ್ಕೆ ವರ್ಗಾಯಿಸಿತ್ತು.  ಕೆಳ ನ್ಯಾಯಾಲಯದಲ್ಲಿ 16ಕ್ಕೆ ಪ್ರಕರಣ ವಿಚಾರಣೆಗೆ ಬರುವುದಿತ್ತು ಎಂದು ಮಸೀದಿಯ ಇಮಾಮ್ ಮೊಹಮ್ಮದ್ ಬಾಬುಲ್ ಹುಸೇನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಶೇರ್ ಷಾ ಸೂರಿಯವರ ಕಾಲದಲ್ಲಿ ಅವರು ರಸ್ತೆ ನಿರ್ಮಿಸಲಾಗಿತ್ತು, ನಂತರ ರಸ್ತೆ ಬದಿಯಲ್ಲಿ ಮಸೀದಿ, ಹೋಟೆಲ್‌ಗಳನ್ನು ನಿರ್ಮಿಸಿ ದಾರಿಹೋಕರಿಗೆ ಸೇವೆ ಸಲ್ಲಿಸಿದರು ಎಂದು ಜನರು ಹೇಳಿದರು. ಇದರಿಂದ ದೂರ ಪ್ರಯಾಣಿಸಬೇಕಾದ ಪ್ರಯಾಣಿಕರು ಇಲ್ಲಿಯೇ ಉಳಿದು ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

ಭಾರತದಲ್ಲಿ ಮುಸ್ಲಿಮರು ಹಿಂದೂಗಳಿಗೆ ಮೀಸಲಾದ ಜಾಗವನ್ನು ಆಕ್ರಮಿಸುವ ಮೂಲಕ “ಲ್ಯಾಂಡ್ ಜಿಹಾದ್” ಮಾಡಿದ್ದಾರೆ ಮತ್ತು ಈ ಭೂ ಜಿಹಾದ್ ಅನ್ನು ಕೊನೆಗೊಳಿಸಲು ಬಿಜೆಪಿ ಕಾನೂನುಗಳನ್ನು ಜಾರಿಗೊಳಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾರ್ವಜನಿಕ ರ್ಯಾಲಿಗಳಲ್ಲಿ ಪದೇ ಪದೇ ಹೇಳುತ್ತಿದ್ದ ಬೆನ್ನಲ್ಲೆ ಈ ಕಾರ್ಯಾಚರಣೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ರಸ್ತೆ ಅಗಲೀಕರಣದ ಕಾರಣ ನೀಡಿ ಐತಿಹಾಸಿಕ ಮಸೀದಿಯನ್ನು ಕೆಡವಿದ ದೃಶ್ಯಗಳನ್ನು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್  ಪ್ರಯಾಗ್‌ರಾಜ್‌ನಲ್ಲಿ ಶಾಹಿ ಮಸೀದಿ ಮೇಲೆ ಪಾಕ್‌ ಧ್ವಜ ಹಾರಿಸಿದ ಕಾರಣಕ್ಕೆ ಮಸೀದಿಯನ್ನೆ ಬುಲ್ಡೋಜ್‌ ಮಾಡಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಬಲಪಂಥೀಯ ಪ್ರತಿಪಾದಕ ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್‌ನಲ್ಲಿ ಗೋಧಿ ಹಿಟ್ಟಿಗಾಗಿ ಕಿತ್ತಾಡುತ್ತಿರುವ ದೃಶ್ಯಗಳು ಇತ್ತೀಚಿನದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.