ಫ್ಯಾಕ್ಟ್‌ಚೆಕ್: OREO ಬಿಸ್ಕತ್‌ಅನ್ನು ಹಂದಿಯ ಹಾಲು ಮತ್ತು ಕೊಬ್ಬಿನಿಂದ ತಯಾರಿಸಲಾಗಿದೆಯೇ?

ಕೊಬ್ಬು ಮತ್ತು ಹಂದಿ ಹಾಲಿನಿಂದ ತಯಾರಿಸಲಾಗುವ OREO ಬಿಸ್ಕತ್ತುಗಳು ‘ಹರಾಮ್’ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಕಂಪನಿಯು ಅಧಿಕೃತವಾಗಿ ದೃಢಪಡಿಸಿದಂತೆ ಕೊಬ್ಬು ಮತ್ತು ಹಂದಿ ಹಾಲಿನಿಂದ ತಯಾರಿಸಲಾಗುತ್ತದೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೂಲ ಮಾಹಿತಿಯನ್ನು ‘ಝಮ್ಜಮ್ ರಿಯಾಲ್ಟರ್ಸ್’ ಎಂಬ ಕಂಪನಿಯಿಂದ ಬಂದಿದೆ ಎಂದು ಸೂಚಿಸಲಾಗಿದೆ.

ಕೊಬ್ಬು ಮತ್ತು ಹಂದಿ ಹಾಲಿನಿಂದ OREO ಬಿಸ್ಕೆಟ್ ಅನ್ನು ತಯಾರಿಸುವುದರಿಂದ ಮುಸ್ಲಿಮರಿಗೆ ನಿಷೇಧಿಸಲಾಗಿದೆ ಎಂದು ಅಧಿಕೃತವಾಗಿ ಕಂಪನಿ ಘೋಷಿಸಿದೆ ಎಂದು ಇದನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಇದು ತಿಳಿಯಲಿ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ OREO ಬಿಸ್ಕತ್‌ ಬಗ್ಗೆ ಹರಿದಾಡುತ್ತಿರುವ ಸಂದೇಶದ ವಾಸ್ತವವನ್ನು ಪರಿಶೀಲಿದಾಗ, ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ವೈರಲ್ ಸಂದೇಶದ ಬಗ್ಗೆ ಮಾಹಿತಿ ಪಡೆಯಲು ಆಲ್ಟ್‌ನ್ಯೂಸ್ ಕಂಪನಿ ಸಂಖ್ಯೆಗೆ ಕರೆ ಮಾಡಿದಾಗ, ಕರೆಯನ್ನು ಸ್ವೀಕರಿಸದೆ SMS ಮೂಲಕ ಕಂಪನಿ ಮಾಹಿತಿ ನೀಡಿದೆ ಎಂದು ತಿಳಿಸಿದೆ. ಕಂಪನಿ ನೀಡಿರುವ ಮಾಹಿತಿ ಪ್ರಕಾರ “ಯಾರೋ ತಮ್ಮ ಲೋಗೋ, ಸಂಖ್ಯೆ ಮತ್ತು ಇಮೇಲ್ ವಿಳಾಸ ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹರಡಿದ್ದಾರೆಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

Oreo UK ನ ವೆಬ್‌ಸೈಟ್‌ನಲ್ಲಿ FAQ ಪುಟವನ್ನು ಪರಿಶೀಲಿಸಿದಾಗ. ಕಂಪನಿಯ ಪ್ರಕಾರ, “ಯುರೋಪಿನಲ್ಲಿ ಉತ್ಪಾದಿಸುವ ಓರಿಯೊ ಬಿಸ್ಕತ್ತುಗಳು ಹಲಾಲ್ ಪ್ರಮಾಣೀಕರಿಸಲ್ಪಟ್ಟಿಲ್ಲ ಆದರೆ ಅವುಗಳ ಸಂಯೋಜನೆ ಅಥವಾ ಉತ್ಪಾದನಾ ಪ್ರಕ್ರಿಯೆಯು ಅವುಗಳನ್ನು ಮುಸ್ಲಿಂ ಆಹಾರಕ್ಕೆ ಸೂಕ್ತವಲ್ಲ.” ಇದು ಇಸ್ಲಾಮಿಕ್ ಆಹಾರದ ನಿರ್ಬಂಧಗಳನ್ನು ಅನುಸರಿಸದ ಐದು ಓರಿಯೊ ಉತ್ಪನ್ನಗಳ ಪಟ್ಟಿಗಳನ್ನು ಸಹ ಒದಗಿಸುತ್ತದೆ. ಅವುಗಳೆಂದರೆ ಓರಿಯೊ ಸ್ಟ್ರಾಬೆರಿ ಚೀಸ್, ಓರಿಯೊ ಚೊಕೊ ಬ್ರೌನಿ, OREO ಎನ್ರೊಬ್ಡ್ ಮಿಲ್ಕ್ & ವೈಟ್, OREO ಕ್ಯಾಡ್ಬರಿ ಕೋಟೆಡ್ ಮತ್ತು OREO ಕ್ರಂಚಿ ಬೈಟ್ಸ್ ಡಿಪ್ಡ್.

2019 ರಿಂದ ಓರಿಯೊದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್ ಉತ್ತರ ಅಮೇರಿಕಾ ಮತ್ತು ಕೆನಡಾದಲ್ಲಿ ಓರಿಯೊ ಬಿಸ್ಕತ್ತುಗಳು ಹಲಾಲ್-ಪ್ರಮಾಣೀಕರಿಸಲ್ಪಟ್ಟಿಲ್ಲ ಎಂದು ಖಚಿತಪಡಿಸುತ್ತದೆ.

BBC ಹಲಾಲ್ ಆಹಾರವನ್ನು ಇಸ್ಲಾಮಿಕ್ ಆಹಾರದ ಮಾನದಂಡಗಳಿಗೆ ಬದ್ಧವಾಗಿರುವ ಆಹಾರ ಎಂದು ವ್ಯಾಖ್ಯಾನಿಸುತ್ತದೆ. ಆದ್ದರಿಂದ, ಕೆಲವು ಪ್ರದೇಶಗಳಲ್ಲಿ ‘OREO ‘ ಬಿಸ್ಕತ್ತುಗಳು ಹಲಾಲ್-ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೂ, ಕಂಪನಿ ಹೆಸರಿಸಿದ ಐದು ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಉತ್ಪನ್ನಗಳು ಬಳಸಲು ಯೋಗ್ಯವಾಗಿದೆ ಎಂದು ತಿಳಿಸಿದೆ.

‘Oreo’ ಬ್ರ್ಯಾಂಡ್ ಹೊಂದಿರುವ Mondelez ನ ವಕ್ತಾರ Alt News ನ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಭಾರತದಲ್ಲಿ Mondelez India Foods Pvt Ltd ತಯಾರಿಸಿದ ಎಲ್ಲಾ ಉತ್ಪನ್ನಗಳು ಸಸ್ಯಾಹಾರಿ ಮೂಲದ್ದಾಗಿದೆ. ಓರಿಯೊ ಕವರ್ ಮೇಲಿನ ಹಸಿರು ಮಾರ್ಕ್ ಅದನ್ನು ಖಚಿತಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ OREO ಬಿಸ್ಕೆಟ್‌ ಹಂದಿಯ ಹಾಲು ಮತ್ತು ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಹರಿದಾಡುತ್ತಿರುವ ಸಂದೇಶವನ್ನು ಸುಳ್ಳು ಎಂದು ಕಂಪನಿ ತಿಳಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತೀವ್ರ ಚಳಿಯಿಂದ ಈ ವ್ಯಕ್ತಿ ಸಾವನಪ್ಪಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.