ಕೋರ್ಟ್‌ ಆದೇಶವನ್ನು ಒಪ್ಪಿಲ್ಲ; ದಂಡ ಪಾವತಿಸಿದ್ದೇನೆ: ಪ್ರಶಾಂತ್ ಭೂಷಣ್‌

ಹಿರಿಯ ವಕೀಲ, ಸಾಜಾಜಿಕ ಹೋರಾಟಗಾರ ಪ್ರಶಾಂತ್ ಭೂಷತ್‌ ಅವರು, ಸುಪ್ರೀಂ ಕೋರ್ಟ್ ತಮಗೆ‌ ವಿಧಸಿದ್ದ ಒಂದು ರೂಪಾಯಿ ದಂಡವನ್ನು  ಇಂದು ಪಾವತಿಸಿದ್ದಾರೆ.

ನ್ಯಾಯಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಪ್ರಶಾಂತ್‌ ಭೂಷಣ್‌ ಅವರು ತಪ್ಪಿತಸ್ಥರು ಎಂದು ಆಗಸ್ಟ್‌ 31 ರಂದು ತೀರ್ಪು ನೀಡಿ, ಒಂದು ರೂಪಾಯಿ ದಂಡ ವಿಧಿಸಿತ್ತು. ಅಲ್ಲದೆ, ಸೆ. 15ರೊಳಗೆ ಪಾವತಿಸಬೇಕು ಎಂದು ಹೇಳಿತ್ತು.

ಹಾಗಾಗಿ ಇಂದು ದಂಡ ಪಾವತಿಸಿದ ನಂತರ ಮಾತನಾಡಿರುವ ಪ್ರಶಾಂತ್‌ ಭೂಷಣ್‌, ದಂಡ ಪಾವತಿಸಿದ ಮಾತ್ರಕ್ಕೆ ಕೋರ್ಟ್‌ ಆದೇಶವನ್ನು ಒಪ್ಪಿದ್ದೇನು ಎಂದು ಅರ್ಥವಲ್ಲ. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಅರ್ಜಿ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ.

ಒಂದು ರೂಪಾಯಿ ದಂಡ ವಿಧಿಸಿದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಬೇರೊಂದು ವಿಸ್ತೃತ ಪೀಠದಲ್ಲಿ ಪ್ರಶ್ನಿಸುವ ಅಧಿಕಾರ ನೀಡುವಂತೆ ಕೋರಿ ಶನಿವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

“ಬಲವಂತದ ಲಾಕ್‌ಡೌನ್‌ನಿಂದಾಗಿ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿರುವಾಗ, ನಮ್ಮ ಹೃದಯಹೀನ ಮಂತ್ರಿಗಳು ರಾಮಾಯಣ ಮತ್ತು ಮಹಾಭಾರತದ ಅಫೀಮನ್ನು ಜನರಿಗೆ ನೀಡುತ್ತಿದ್ದಾರೆ” ಎಂದು ಹಾಗೂ ಮುಖ್ಯನ್ಯಾಯಮೂರ್ತಿ ಹೆಲ್ಮೆಟ್ ಮತ್ತು ಮಾಸ್ಕ್ ಇಲ್ಲದೇ ಬಿಜೆಪಿ ನಾಯಕರೊಬ್ಬರ ಹಾಡ್ಲಿ ಡೇವಿಡ್ಸನ್ ಗಾಡಿಯಲ್ಲಿ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದರು.

ಅವರ ಟ್ವೀಟ್‌ ನ್ಯಾಯಾಂಗ ನಿಂದನೆಯಾಗಿದೆ ಎಂದು ಹೇಳಿದ್ದ, ಸುಪ್ರೀಂ ಕೋರ್ಟ್‌ ಸ್ವತಃ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ತೀರ್ಪು ನೀಡಿದೆ.


ಇದನ್ನೂ ಓದಿ: ಟ್ವೀಟ್‌ ಮಾಡಿದ್ದು ನನ್ನ ಕರ್ತವ್ಯ; ಕೋರ್ಟ್‌ ಗೌರವಿಸಿ ದಂಡ ಕಟ್ಟುತ್ತೇನೆ: ಪ್ರಶಾಂತ್‌ ಭೂಷಣ್‌

Spread the love

Leave a Reply

Your email address will not be published. Required fields are marked *